ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಕ್ಕಳ ಮೇಲೆ ಕೋವ್ಯಾಕ್ಸಿನ್‌ ಪ್ರಯೋಗಕ್ಕೆ ತಡೆ ನೀಡದ ಹೈಕೋರ್ಟ್

|
Google Oneindia Kannada News

ನವದೆಹಲಿ, ಮೇ 20: ಕೋವ್ಯಾಕ್ಸಿನ್‌ ತಯಾರಕ ಕಂಪೆನಿ ಭಾರತ್‌ ಬಯೋಟೆಕ್‌ ಕಂಪೆನಿ2 ರಿಂದ 18 ವರ್ಷ ವಯಸ್ಸಿನ ಮಕ್ಕಳ ಮೇಲೆ ಎರಡು ಮತ್ತು ಮೂರನೇ ಹಂತದ ಲಸಿಕೆ ಪ್ರಯೋಗ ಮಾಡಲು ಮುಂದಾಗಿದ್ದು, ಈ ಪ್ರಕ್ರಿಯೆಗೆ ತಡೆ ನೀಡುವಂತೆ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು.

ವಕೀಲ ಸಂಜೀವ್‌ ಕುಮಾರ್‌ ಅವರು ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ಎನ್. ಪಟೇಲ್ ಮತ್ತು ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರಿದ್ದ ಪೀಠ ಪ್ರಕರಣದ ವಿಚಾರಣೆ ಸ್ಥಗಿತಗೊಳಿಸಲು ನಿರಾಕರಿಸಿದೆ. ಅಲ್ಲದೆ, ಪ್ರತಿವಾದಿಗಳಿಗೆ ನೋಟಿಸ್‌ ಜಾರಿ ಮಾಡಿದೆ.

ಕೇಂದ್ರ ಸರ್ಕಾರ ಮೇ 13ರಂದು ಜಾರಿಗೊಳಿಸಿದ್ದ ಆದೇಶವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿತ್ತು. ಇಂಥ ಪ್ರಯೋಗಗಳು ಮಕ್ಕಳ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪ್ರಭಾವ ಬೀರುತ್ತವೆ. ಅಲ್ಲದೆ ಪ್ರಾಣಕ್ಕೂ ಹಾನಿಕಾರಕವಾಗಿರಬಹುದು. ಇದು ಕಾನೂನು ಬಾಹಿರ, ಸ್ವೇಚ್ಛೆಯಿಂದ ಕೂಡಿದ್ದು ಸ್ವಾಭಾವಿಕ ನ್ಯಾಯಕ್ಕೆ ವ್ಯತಿರಿಕ್ತವಾಗಿದೆ. ಲಸಿಕೆ ಪ್ರಯೋಗಕ್ಕೆ ಪೋಷಕರು ಸಹಿ ಹಾಕಿದರೂ ಮಕ್ಕಳ ಹಿತದೃಷ್ಟಿಯಿಂದ ಕಾನೂನು ಬಾಹಿರವಾಗುತ್ತದೆ. ಹಣದ ಆಮಿಷವೊಡ್ಡಿ ಪೋಷಕರ ಒಪ್ಪಿಗೆ ಪಡೆಯುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ ಎಂದು ವಕೀಲ ಸಂಜೀವ್‌ ಕುಮಾರ್‌ ಅರ್ಜಿಯಲ್ಲಿ ವಾದಿಸಿದ್ದರು.

Delhi high court refuses to stay Covaxin clinical trial on children

ಆದರೆ, ಲಸಿಕೆ ಪ್ರಯೋಗಕ್ಕೆ ತಡೆ ನೀಡಲು ನಿರಾಕರಿಸಿದ ನ್ಯಾಯಾಲಯ ಭಾರತ್ ಬಯೋಟೆಕ್‌ನ ಕ್ಲಿನಿಕಲ್ ಪ್ರಯೋಗಕ್ಕೆ ಓಕೆ ಎಂದಿದೆ. ಜೊತೆಗೆ ಡ್ರಗ್ಸ್ ನಿಯಂತ್ರಕ ಡಿಸಿಜಿಐ ಹಾಗೂ ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿದ್ದು, ಪ್ರಯೋಗಕ್ಕೆ ಒಳಗಾಗಿರುವ 525 ಮಕ್ಕಳ ಆರೋಗ್ಯದ ಬಗ್ಗೆ ಮಾಹಿತಿ ಒದಗಿಸುವಂತೆ ಸೂಚಿಸಿದೆ. ವಿಚಾರಣೆಯನ್ನು ಜುಲೈ 15ಕ್ಕೆ ಮುಂದೂಡಲಾಗಿದೆ.

English summary
The Delhi high court on Wednesday refused to grant an interim stay on the clinical trial of Covaxin in children in the age group of 2 to 18 years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X