ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿರೀಕ್ಷಣಾ ಜಾಮೀನು ರದ್ದು : ರಾಬರ್ಟ್ ವಾದ್ರಾಗೆ ಹೈಕೋರ್ಟ್ ನೋಟೀಸ್

|
Google Oneindia Kannada News

ನವದೆಹಲಿ, ಮೇ 27 : ಸೋನಿಯಾ ಗಾಂಧಿ ಅವರ ಅಳಿಯ, ಪ್ರಿಯಾಂಕಾ ವಾದ್ರಾ ಅವರ ಗಂಡ, ಉದ್ಯಮಿ ರಾಬರ್ಟ್ ವಾದ್ರಾ ಅವರ ನಿರೀಕ್ಷಣಾ ಜಾಮೀನನ್ನು ರದ್ದುಪಡಿಸಬೇಕೆಂದು ಸಲ್ಲಿಸಲಾಗಿರುವ ಅರ್ಜಿಗೆ ಸಂಬಂಧಿಸಿದಂತೆ ರಾಬರ್ಟ್ ವಾದ್ರಾ ಅವರಿಗೆ ದೆಹಲಿ ಹೈ ಕೋರ್ಟ್ ನೋಟೀಸ್ ಜಾರಿ ಮಾಡಿದೆ.

ಭಾರತ ಸರಕಾರದ ಕಣ್ಣಿಗೆ ಯುನೈಟೆಡ್ ಕಿಂಗಡಂನಲ್ಲಿ ಅಕ್ರಮವಾಗಿ ಆಸ್ತಿಪಾಸ್ತಿ ಮಾಡಿರುವ ರಾಬರ್ಟ್ ವಾದ್ರಾ ಅವರನ್ನು ಜಾರಿ ನಿರ್ದೇಶನಾಲಯ ವಿಚಾರಣೆಗೆ ಗುರಿಪಡಿಸಿದೆ. ಆದರೆ, ಸಿಬಿಐ ವಿಶೇಷ ನ್ಯಾಯಾಲಯದಿಂದ ರಾಬರ್ಟ್ ವಾದ್ರಾ ಅವರು ನಿರೀಕ್ಷಣಾ ಜಾಮೀನನ್ನು ಪಡೆದುಕೊಂಡಿದ್ದರು.

ಮೋದಿ ಭರ್ಜರಿ ಗೆಲುವು ಕಾಣುತ್ತಿದ್ದಂತೆ 'ಶೆಹೆನ್ ಶಾ' ವಾದ್ರಾಗೆ ಸಂಕಷ್ಟ ಮೋದಿ ಭರ್ಜರಿ ಗೆಲುವು ಕಾಣುತ್ತಿದ್ದಂತೆ 'ಶೆಹೆನ್ ಶಾ' ವಾದ್ರಾಗೆ ಸಂಕಷ್ಟ

ಲಂಡನ್ನಿನಲ್ಲಿ ಅಕ್ರಮವಾಗಿ ವಿಲ್ಲಾ, ನಿವೇಶನಗಳನ್ನು ಕೊಂಡಿದ್ದಾರೆಂದು ಅವರ ಮೇಲೆ ಆರೋಪ ಹೊರಿಸಲಾಗಿದೆ. ಅವರ ಜೊತೆ, ರಾಬರ್ಟ್ ವಾದ್ರಾ ಅವರ ಆಪ್ತ ಸಹಾಯಕ ರಾಬರ್ಟ್ ಆರೋರಾ ಅವರಿಗೂ ಕೋರ್ಟ್ ನೋಟೀಸ್ ನೀಡಿದೆ. ಮುಂದಿನ ವಿಚಾರಣೆ ಜುಲೈ 17ರಂದು ಹೈಕೋರ್ಟಿನಲ್ಲಿ ನಡೆಯಲಿದೆ.

Delhi High Court issues notice to Robert Vadra

ವಿದೇಶಗಳಲ್ಲಿಯೂ ತಮ್ಮ ವಹಿವಾಟುಗಳು ಇರುವುದರಿಂದ ವಿದೇಶಕ್ಕೆ ಪಯಣಿಸಲು ಅನುಮತಿ ಕೋರಿ ರಾಬರ್ಟ್ ವಾದ್ರಾ ಅವರು ಕೆಲ ದಿನಗಳ ಹಿಂದೆ ಅರ್ಜಿ ಸಲ್ಲಿಸಿದ್ದರು. ಅಲ್ಲದೆ, ಭದ್ರತಾ ದೃಷ್ಟಿಯಿಂದ ತಮ್ಮ ಪ್ರವಾಸದ ಯಾವುದೇ ವಿವರಗಳನ್ನು ಬಹಿರಂಗಪಡಿಸಬಾರದು ಎಂದು ರಾಬರ್ಟ್ ವಾದ್ರಾ ಅವರು ಆಗ್ರಹಿಸಿದ್ದಾರೆ.

ಕೊಟ್ಟ ಭರವಸೆ ಈಡೇರಿಸುವುದು ಬಿಜೆಪಿ ಅಲ್ಲ, ಕಾಂಗ್ರೆಸ್: ರಾಬರ್ಟ್ ವಾದ್ರಾ ಕೊಟ್ಟ ಭರವಸೆ ಈಡೇರಿಸುವುದು ಬಿಜೆಪಿ ಅಲ್ಲ, ಕಾಂಗ್ರೆಸ್: ರಾಬರ್ಟ್ ವಾದ್ರಾ

ಹರ್ಯಾಣದ ಫತೇಹ್ ಭಾಗ್ ನಲ್ಲಿ ಪ್ರಚಾರ ಸಭೆಯಲ್ಲಿ ಪಾಲ್ಗೊಂಡಿದ್ದ ನರೇಂದ್ರ ಮೋದಿಯವರು, 'ಶೆಹೆನ್ ಶಾ' ರಾಬರ್ಟ್ ವಾದ್ರಾ ಅವರನ್ನ ರೈತರನ್ನು ಲೂಟಿ ಮಾಡಿದ್ದಕ್ಕಾಗಿ ಅವರನ್ನು ನ್ಯಾಯಾಲಯಕ್ಕೆ ಎಳೆತಂದಿದ್ದಕ್ಕಾಗಿ ಅವರು ನಡುಗುತ್ತಿದ್ದಾರೆ, ಅವರನ್ನು ಶೀಘ್ರದಲ್ಲಿಯೇ ಜೈಲಿಗೆ ಅಟ್ಟಲಾಗುವುದು ಎಂದು ಅಬ್ಬರಿಸಿದ್ದರು.

ರಾಬರ್ಟ್ ವಾದ್ರಾಗೆ ಶಸ್ತ್ರಾಸ್ತ್ರ ಪೂರೈಕೆದಾರನೊಂದಿಗೆ ಎಂಥ ಸಂಬಂಧ? ರಾಬರ್ಟ್ ವಾದ್ರಾಗೆ ಶಸ್ತ್ರಾಸ್ತ್ರ ಪೂರೈಕೆದಾರನೊಂದಿಗೆ ಎಂಥ ಸಂಬಂಧ?

ಯುಕೆಯಲ್ಲಿ ರಾಬರ್ಟ್ ವಾದ್ರಾ ಅವರು ಹಲವಾರು ಆಸ್ತಿಯನ್ನು ಅನೈತಿಕವಾಗಿ ಕೊಂಡಿದ್ದಾರೆ ಮತ್ತು ಅವುಗಳನ್ನು ಆದಾಯ ತೆರಿಗೆ ಪತ್ರದಲ್ಲಿ ಘೋಷಣೆ ಮಾಡಿಲ್ಲ ಎಂಬ ಆರೋಪ ಅವರ ಮೇಲಿದೆ. ಅಲ್ಲಿ ಮೂರು ವಿಲ್ಲಾಗಳಾಗಿದ್ದು, ಉಳಿದವು ಐಷಾರಾಮಿ ಫ್ಲಾಟ್ ಗಳಾಗಿವೆ. ಇವುಗಳಲ್ಲಿನ ಎರಡು ಮನೆಗಳ ಬೆಲೆಯೇ 83 ಕೋಟಿ ರುಪಾಯಿನಷ್ಟಾಗುತ್ತದೆ ಎಂದು ಅಂದಾಜಿಸಲಾಗಿದೆ. ಇವೆಲ್ಲವನ್ನು 2005ರಿಂದ 2010ರೊಳಗೆ ಅವರು ಖರೀದಿಸಿದ್ದಾರೆಂದು ಆರೋಪಿಸಲಾಗಿದೆ.

English summary
Delhi High Court issues notice to Robert Vadra and his close aide Manoj Arora on ED's plea challenging trial court order granting them the anticipatory bail. Next date of hearing is 17th July.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X