ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಂದೇ ಮಾತರಂ ಗೀತೆಗೆ ರಾಷ್ಟ್ರಗೀತೆ ಸ್ಥಾನಮಾನವಿಲ್ಲ: ದೆಹಲಿ HC

|
Google Oneindia Kannada News

ನವದೆಹಲಿ, ಜುಲೈ 26: 'ವಂದೇ ಮಾತರಂ' ಗೀತೆಗೆ ರಾಷ್ಟ್ರಗೀತೆ 'ಜನಗಣಮನ'ಕ್ಕೆ ನೀಡಿದ ಸಮಾನ ಸ್ಥಾನವನ್ನೇ ನೀಡಬೇಕು ಎಂದು ಹೂಡಲಾಗಿದ್ದ ಅರ್ಜಿಯನ್ನು ದೆಹಲಿ ನ್ಯಾಯಾಲಯ ವಜಾ ಮಾಡಿದೆ.

ಬಿಜೆಪಿ ಮುಖಂಡ, ವಕೀಲ ಅಶ್ವಿನ್ ಕುಮಾರ್ ಉಪಾಧ್ಯಾಯ ಎಂಬುವವರು ಅರ್ಜಿ ಸಲ್ಲಿಸಿ, 'ಜನಗಣಮನ'ಕ್ಕೆ ನೀಡಿದ ರಾಷ್ಟ್ರಗೀತೆ ಸ್ಥಾನಮಾನವನ್ನೇ 'ವಂದೇ ಮಾತರಂ' ಗೀತೆಗೂ ನೀಡಬೇಕು ಎಂದು ಅರ್ಜಿ ಹೂಡಿದ್ದರು.

'ಸಿನಿಮಾ ಹಾಲ್ ನಲ್ಲಿ ರಾಷ್ಟ್ರಗೀತೆಗೆ ಎದ್ದು ನಿಲ್ಲುವುದೇ ದೇಶಪ್ರೇಮವೇ?''ಸಿನಿಮಾ ಹಾಲ್ ನಲ್ಲಿ ರಾಷ್ಟ್ರಗೀತೆಗೆ ಎದ್ದು ನಿಲ್ಲುವುದೇ ದೇಶಪ್ರೇಮವೇ?'

ಅಷ್ಟೇ ಅಲ್ಲ, ರಾಷ್ಟ್ರೀಯ ನೀತಿಯೊಂದನ್ನು ರೂಪಿಸಿ, ಈ ಎರಡು ಗೀತೆಗಳನ್ನೂ ರಾಷ್ಟ್ರಗೀತೆಗಳೆಂದು ಪರಿಗಣಿಸಿ, ಅವುಗಳ ಪ್ರಚಾರಕ್ಕೆ ಮತ್ತು ಅವುಗಳನ್ನು ಎಲ್ಲಾ ಶಾಲೆಗಳಲ್ಲೂ ಕಡ್ಡಾಯವಾಗಿ ಹಾಡುವಂತೆ ಕೇಂದ್ರ ಸರ್ಕಾರ ನಿರ್ದೇಶನ ಮಾಡಬೇಕು ಎಂದು ಅಶ್ವಿನ್ ಕುಮಾರ್ ಮನವಿ ಮಾಡಿದ್ದರು.

Delhi High Court dismisses plea seeking national anthem status to Vande Mataram

2017 ರಲ್ಲೂ ಇದೇ ರೀತಿಯ ಅರ್ಜಿಯನ್ನು ವ್ಯಕ್ತಿಯೊಬ್ಬರು ದೆಹಲಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಆದರೆ ಆಗ ಪ್ರತಿಕ್ರಿಯೆ ನೀಡಿದ್ದ ದೆಹಲಿ ನ್ಯಾಯಾಲಯ, 'ವಂದೇ ಮಾತರಂ ಗೀತೆಗೆ ವಿಭಿನ್ನ ಮತ್ತು ವಿಶೇಷ ಸ್ಥಾನವಿದೆ. ಅದನ್ನು ರಾಷ್ಟ್ರಗೀತೆ ಎಂದು ಪರಿಗಣಿಸುವುದಕ್ಕೆ ಬರುವುದಿಲ್ಲ' ಎಂದಿತ್ತು.

ವೈರಲ್ ವಿಡಿಯೋ: ರಾಷ್ಟ್ರಗೀತೆಗೆ ಸ್ತಬ್ಧವಾಗುವ ಅಪರೂಪದ ನಗರ ವೈರಲ್ ವಿಡಿಯೋ: ರಾಷ್ಟ್ರಗೀತೆಗೆ ಸ್ತಬ್ಧವಾಗುವ ಅಪರೂಪದ ನಗರ

'ವಂದೇ ಮಾತರಂ' ಗೀತೆಯನ್ನು ಬಂಕೀಮ್ ಚಂದ್ರ ಚಟರ್ಜಿ ಅವರು ಬರೆದಿದ್ದರೆ, 'ಜನಗಣಮನ' ಗೀತೆಯನ್ನು ನೊಬೆಲ್ ವಿಜೇತ ಕವಿ ರವೀಂದ್ರನಾಥ್ ಠಾಗೋರ್ ಬರೆದಿದ್ದರು.

English summary
The Delhi High Court on Friday dismissed plea seeking equal status to Vande Mataram as national anthem.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X