ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ ರಣ ಬಿಸಿಲು: ಮಕ್ಕಳಿಗಿದು ಅಪಾಯಕಾರಿ ಎಂದ ಹವಾಮಾನ ಕಾರ್ಯಕರ್ತೆ

|
Google Oneindia Kannada News

ದೆಹಲಿ ಮೇ 16: ದೇಶದ ಉತ್ತರದ ಬಯಲು ಪ್ರದೇಶದ ಹಲವು ಭಾಗಗಳು ತೀವ್ರ ಶಾಖವನ್ನು ಎದುರಿಸುತ್ತಿವೆ. ದೆಹಲಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳು ನಿರಂತರವಾಗಿ ಶಾಖದ ಅಲೆಗೆ ಸಿಲುಕಿವೆ. ಭಾನುವಾರ ದೆಹಲಿಯಲ್ಲಿ ಗರಿಷ್ಠ ತಾಪಮಾನ 40 ರಿಂದ 49 ಡಿಗ್ರಿ ಸೆಲ್ಸಿಯಸ್ ನಡುವೆ ಇದ್ದು ಸದ್ಯಕ್ಕೆ ಪರಿಸ್ಥಿತಿಯಲ್ಲಿ ಯಾವುದೇ ಸುಧಾರಣೆ ಇಲ್ಲ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.

ವಾಯುವ್ಯ ದೆಹಲಿಯ ಮುಂಗೇಶ್‌ಪುರದಲ್ಲಿ 49.2 ಡಿಗ್ರಿ ಸೆಲ್ಸಿಯಸ್ ಮತ್ತು ನಜಾಫ್‌ಗಢದಲ್ಲಿ 49.1 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು ಎರಡು ಸ್ಥಳಗಳಲ್ಲಿ 49 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿನ ತಾಪಮಾನ ದಾಖಲಾಗಿದೆ. ಪ್ರಾಥಮಿಕ ಹವಾಮಾನ ಕೇಂದ್ರ ಶನಿವಾರದಂದು 44.2 ಡಿಗ್ರಿ ಸೆಲ್ಸಿಯಸ್ ಮತ್ತು ಶುಕ್ರವಾರ 42.5 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನವನ್ನು ದಾಖಲಿಸಿದೆ.

ಸೋಮವಾರ ರಾಷ್ಟ್ರ ರಾಜಧಾನಿಯಲ್ಲಿ ಗುಡುಗು ಅಥವಾ ಧೂಳಿನ ಚಂಡಮಾರುತದ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ. ದೆಹಲಿಯ ತಾಪಮಾನ ಏರಿಕೆ ಪರಿಸರ ಪ್ರೇಮಿಗಳಲ್ಲಿ ಆತಂಕ ಮೂಡಿಸಿದೆ.

ಪರಿಸರ ಮತ್ತು ಹವಾಮಾನ ಕಾರ್ಯಕರ್ತೆ, ಲಿಸಿಪ್ರಿಯಾ ಕಂಗುಜಮ್ ಅವರು ಈ ಬಗ್ಗೆ ಟ್ವಿಟ್ ಮಾಡಿದ್ದು, "ಇಂದು ದೆಹಲಿಯಲ್ಲಿ 49.2 ಡಿಗ್ರಿ ಸೆಲ್ಸಿಯಸ್ ತಾಪಮಾನ ತಲುಪಿದೆ, ನಾನು ಮಧ್ಯಾಹ್ನ ಶಾಪಿಂಗ್‌ಗಾಗಿ ಹೊರಗೆ ಹೋದಾಗ, ನನಗೆ ರಸ್ತೆಯಲ್ಲಿ ಕೆಲವು ಸೆಕೆಂಡುಗಳ ಕಾಲ ನಡೆಯಲು ಸಾಧ್ಯವಿಲ್ಲ. ವಿಪರೀತ ಶಾಖದ ಅಲೆ ಇತ್ತು. ತಾಪಮಾನ ಗಾಳಿಗಿಂತ ನೆಲದ ಮೇಲೆ ಹೆಚ್ಚಾಗಿ ಪರಿಣಾಮ ಬೀರುತ್ತಿದೆ. ಗಾಳಿಯನ್ನು ಉಸಿರಾಡಲು ಕಷ್ಟವಾಗುತ್ತಿದೆ. ಇದು ಮಕ್ಕಳಿಗೆ ತುಂಬಾ ಅಪಾಯಕಾರಿ" ಎಂದಿದ್ದಾರೆ.

ಮತ್ತೊಂದೆಡೆ, ದೇಶದ ಹಲವೆಡೆ ಮುಂಗಾರು ಪೂರ್ವ ಮಳೆಯಿಂದಾಗಿ ಹೀಟ್‌ವೇವ್‌ನಿಂದಾಗಿ ಪರಿಹಾರ ಸಿಕ್ಕಂತಾಗಿದೆ. ಕಳೆದ 10 ರಿಂದ 12 ದಿನಗಳಲ್ಲಿ ದೇಶದ ಬಯಲು ಪ್ರದೇಶಗಳಲ್ಲಿ ಪಶ್ಚಿಮ ಪೂರ್ವದ ಮಾರುತಗಳು ಬೀಸುತ್ತಿವೆ ಮತ್ತು ಈ ಮಾರುತಗಳು ಕನಿಷ್ಠ ಮುಂದಿನ ವಾರದವರೆಗೆ ಮುಂದುವರಿಯುವ ನಿರೀಕ್ಷೆಯಿದೆ ಎಂದು IMD ಹೇಳುತ್ತದೆ.

ದೆಹಲಿಯಲ್ಲಿ 49 ಡಿಗ್ರಿ ಸೆಲ್ಸಿಯಸ್‌ ತಾಪಮಾನ: ಹೊಸ ದಾಖಲೆದೆಹಲಿಯಲ್ಲಿ 49 ಡಿಗ್ರಿ ಸೆಲ್ಸಿಯಸ್‌ ತಾಪಮಾನ: ಹೊಸ ದಾಖಲೆ

ಮುಂದಿನ 24 ಗಂಟೆಗಳಲ್ಲಿ ಈಶಾನ್ಯ ಭಾರತ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಕೇರಳ, ಕರಾವಳಿ ಮತ್ತು ದಕ್ಷಿಣ ಕರ್ನಾಟಕದಲ್ಲಿ ಸಾಧಾರಣದಿಂದ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಸಿಕ್ಕಿಂ, ಉಪ-ಹಿಮಾಲಯದ ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಲಕ್ಷದ್ವೀಪದ ಒಳಭಾಗದಲ್ಲಿ ಒಂದು ಅಥವಾ ಎರಡು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಬಹುದು. ಆದರೆ ಈಶಾನ್ಯ ಬಿಹಾರ, ಛತ್ತೀಸ್‌ಗಢದ ಕೆಲವು ಭಾಗಗಳು, ಉತ್ತರ ಆಂತರಿಕ ಕರ್ನಾಟಕ ಮತ್ತು ಗೋವಾದಲ್ಲಿ ಒಂದು ಅಥವಾ ಎರಡು ಸ್ಥಳಗಳಲ್ಲಿ ಪ್ರತ್ಯೇಕವಾದ ಲಘು ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಧೂಳಿನ ಚಂಡಮಾರುತ

ಧೂಳಿನ ಚಂಡಮಾರುತ

ರಾಯಲಸೀಮಾ, ಒಡಿಶಾ, ದಕ್ಷಿಣ ಮಧ್ಯ ಮಹಾರಾಷ್ಟ್ರ, ಗೋವಾ, ತೆಲಂಗಾಣ ಮತ್ತು ಪಶ್ಚಿಮ ಹಿಮಾಲಯದಲ್ಲಿ ಮುಂದಿನ 24 ಗಂಟೆಗಳಲ್ಲಿ ಲಘು ಮಳೆಯಾಗುವ ಸಾಧ್ಯತೆಯಿದೆ. ಪಂಜಾಬ್ ಮತ್ತು ಹರಿಯಾಣದ ಉತ್ತರ ಭಾಗಗಳಲ್ಲಿ ಲಘು ಮಳೆಯೊಂದಿಗೆ ಧೂಳಿನ ಬಿರುಗಾಳಿ ಮತ್ತು ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಪಂಜಾಬ್, ಹರಿಯಾಣ, ಪಶ್ಚಿಮ ಉತ್ತರ ಪ್ರದೇಶದ ಉಳಿದ ಭಾಗಗಳು ಮತ್ತು ದೆಹಲಿ ಎನ್‌ಸಿಆರ್‌ನ ಪ್ರತ್ಯೇಕ ಭಾಗಗಳಲ್ಲಿ ಲಘು ಧೂಳಿನ ಚಂಡಮಾರುತದ ಸಾಧ್ಯತೆಯಿದೆ.

ದೆಹಲಿಯಲ್ಲಿ ತೀವ್ರ ಶಾಖದ ಅಲೆ

ದೆಹಲಿಯಲ್ಲಿ ತೀವ್ರ ಶಾಖದ ಅಲೆ

ರಾಜಸ್ಥಾನ, ಮಧ್ಯಪ್ರದೇಶದ ಕೆಲವು ಭಾಗಗಳು, ದಕ್ಷಿಣ ಉತ್ತರ ಪ್ರದೇಶ, ಹರಿಯಾಣ ಮತ್ತು ದೆಹಲಿಯ ಪ್ರತ್ಯೇಕ ಸ್ಥಳಗಳಲ್ಲಿ ತೀವ್ರ ಶಾಖದ ಅಲೆಗಳು ಸಂಭವಿಸಬಹುದು. ಉತ್ತರ ಮಧ್ಯ ಮಹಾರಾಷ್ಟ್ರ ಮತ್ತು ಗುಜರಾತ್‌ನ ಕೆಲವು ಭಾಗಗಳಲ್ಲಿ ಶಾಖದ ಅಲೆಯ ಪರಿಸ್ಥಿತಿಗಳು ಕಂಡುಬರುವ ಸಾಧ್ಯತೆಯಿದೆ.

ಗುಡುಗು ಸಹಿತ ಮಳೆ

ಗುಡುಗು ಸಹಿತ ಮಳೆ

ಹವಾಮಾನ ಇಲಾಖೆಯು ಮೇ 16, 17 ಮತ್ತು 18 ರಂದು ಕೇದಾರನಾಥ, ಬದರಿನಾಥ್, ಗಂಗೋತ್ರಿ, ಯಮನೋತ್ರಿ ಮತ್ತು ಹೇಮಕುಂಡ್ ಸಾಹಿಬ್‌ನಲ್ಲಿ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ನೀಡಿದ್ದು ಎಲ್ಲೋ ಅಲರ್ಟ್ ಘೋಷಣೆ ಮಾಡಿದೆ. ಅಲ್ಲದೆ, ಈ ಪ್ರದೇಶಗಳಲ್ಲಿ 30-40 ಕಿಮೀ ವೇಗದಲ್ಲಿ ಬಲವಾದ ಗಾಳಿ ಬೀಸುವ ನಿರೀಕ್ಷೆಯಿದೆ.

ಎಲ್ಲೆಲ್ಲಿ ಅಪಾಯ?

ಎಲ್ಲೆಲ್ಲಿ ಅಪಾಯ?

ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ಪ್ರಸ್ತುತ ಆಂಧ್ರಪ್ರದೇಶದ ಕರಾವಳಿ ಭಾಗಗಳಲ್ಲಿ ಮತ್ತು ಪಶ್ಚಿಮ ಮಧ್ಯ ಬಂಗಾಳ ಕೊಲ್ಲಿಯ ಪಕ್ಕದ ಭಾಗಗಳಲ್ಲಿ ಚಂಡಮಾರುತ ಒತ್ತಡವಿದೆ. ಉತ್ತರ ಅಫ್ಘಾನಿಸ್ತಾನ ಮತ್ತು ಪಕ್ಕದ ಉತ್ತರ ಪಾಕಿಸ್ತಾನದ ಮೇಲೆ ಚಂಡಮಾರುತದ ಅಪಾಯವಿದೆ.

ಉತ್ತರ ಪ್ರದೇಶ ಮತ್ತು ಬಿಹಾರದ ತಪ್ಪಲಿನ ಮೂಲಕ ಉತ್ತರಾಖಂಡದಿಂದ ಉಪ-ಹಿಮಾಲಯ ಪಶ್ಚಿಮ ಬಂಗಾಳದವರೆಗೆ ಟರ್ಫ್ ಲೈನ್ ಸಾಗುತ್ತಿದೆ. ಮತ್ತೊಂದು ಟರ್ಫ್ ಲೈನ್ ಉತ್ತರ ಪ್ರದೇಶದ ಮಧ್ಯ ಭಾಗದಿಂದ ಮಧ್ಯಪ್ರದೇಶ ಮತ್ತು ತೆಲಂಗಾಣದ ಮೂಲಕ ರಾಯಲಸೀಮಾಕ್ಕೆ ವಿಸ್ತರಿಸಿದೆ.

English summary
Environmental and Climate Activist, Licypriya Kangujam wrote in Twitter "Delhi hit 49.2 degrees Celsius. It's difficult to breathe the air. Very dangerous for kids".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X