ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಿವಿ ಜ್ಯೋತಿಷ್ಯ ಶೋ ಬಂದ್ ಸಾಧ್ಯವಿಲ್ಲ: ಹೈಕೋರ್ಟ್

By Mahesh
|
Google Oneindia Kannada News

ನವದೆಹಲಿ, ಡಿ.14: ಟಿವಿಯಲ್ಲಿ ಪ್ರಸಾರವಾಗುವ ಜ್ಯೋತಿಷ್ಯ ಆಧಾರಿತ ಕಾರ್ಯಕ್ರಮಗಳ ಬಗ್ಗೆ ಬೆಂಗಳೂರಿನಲ್ಲಿ ಭಾರಿ ಪ್ರತಿಭಟನೆ ಪರ-ವಿರೋಧ ಚರ್ಚೆಗಳು ನಡೆದಿದ್ದು ನಿಮಗೆಲ್ಲಾ ಗೊತ್ತೇ ಇದೆ.ಆದರೆ, ಇಂಥ ಟಿವಿ ಕಾರ್ಯಕ್ರಮಗಳ ನಿರ್ಬಂಧ, ನಿಷೇಧ ಹೇರುವಂತೆ ದೆಹಲಿಯಲ್ಲಿ ಹಾಕಿದ್ದ ಅರ್ಜಿ ಹೈಕೋರ್ಟಿನಲ್ಲಿ ತಿರಸ್ಕೃತಗೊಂಡಿದೆ.

ಟಿವಿ ಚಾನೆಲ್ ಅಥವಾ ಇನ್ಯಾವುದೇ ಮಾಧ್ಯಮಗಳಲ್ಲಿ ಪ್ರಕಟ, ಪ್ರಸಾರವಾಗುವ ಜ್ಯೋತಿಷ್ಯ ಆಧಾರಿತ ಕಾರ್ಯಕ್ರಮಗಳಿಗೆ ನಿರ್ಬಂಧ ಹೇರಲು ಸಾಧ್ಯವಿಲ್ಲ ಎಂದು ದೆಹಲಿ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ದೆಹಲಿ ಹೈಕೋರ್ಟ್ ಮುಖ್ಯ ನ್ಯಾ. ಜೆ ರೋಹಿಣಿ ಮತ್ತು ನ್ಯಾ.ಆರ್ ಎಸ್ ಎಂಡ್ಲಾ ಅವರಿದ್ದ ನ್ಯಾಯಪೀಠ ಈ ಆದೇಶ ಹೊರಡಿಸಿದೆ.

Delhi HC refuses to ban astrology-based TV shows

ಸಾಯಿ ಲೋಕ ಕಲ್ಯಾಣ ಸಂಸ್ಥಾ ಎಂಬ ಎನ್ ಜಿಒ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ ಈ ರೀತಿ ಕಾರ್ಯಕ್ರಮಗಳ ಪ್ರಸಾರಕ್ಕೆ ಈಗಾಗಲೇ ಹಲವು ನಿಯಂತ್ರಣಗಳಿದ್ದು, ಈ ಬಗ್ಗೆ ನ್ಯಾಯಾಲಯ ಯಾವುದೇ ನಿರ್ದೇಶನ ನೀಡಲು ಬರುವುದಿಲ್ಲ ಎಂದು ಅರ್ಜಿಯನ್ನು ತಳ್ಳಿ ಹಾಕಿದೆ.

ಜ್ಯೋತಿಷ್ಯದ ಚಿಂತನೆಗಳು ಹಲವು ವಿಶ್ವವಿದ್ಯಾಲಯಗಳಲ್ಲಿ ಪಠ್ಯಕ್ರಮಗಳಾಗಿವೆ. ಜನಪ್ರಿಯ ಲೇಖಕರಾದ ಲಿಂಡಾ ಗುಡ್ ಮಾನ್ ರಾರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಕಟಿತ ಭವಿಷ್ಯವಾಣಿಗಳಲ್ಲಿ ಯಾವುದೇ ದುರುದ್ದೇಶ ಅಥವಾ ಜ್ಯೋತಿಷ್ಯ ಕಾರ್ಯಕ್ರಮ ನಿಷೇಧಿಸುವಂಥ ಕಾರ್ಯಕ್ರಮಗಳು ಕಾಣ ಸಿಗುವುದಿಲ್ಲ. [ಭವಿಷ್ಯ ಹೇಳುವವರ ವಿರುದ್ಧ ಭುಗಿಲೆದ್ದ ಕಿಡಿ ]

ಜ್ಯೋತಿಷ್ಯ ಸೇರಿದಂತೆ ಅದಕ್ಕೆ ಸಮಾನಂತರ ಕಾರ್ಯಕ್ರಮ ಟಿವಿ ಚಾನೆಲ್ ಗಳಲ್ಲಿ ಮಾತ್ರವೇ ಪ್ರಸಾರವಾಗುತ್ತಿಲ್ಲ, ಇಂಥ ಸುದ್ದಿಗಳು ಮುದ್ರಿತ ಮಾಧ್ಯಮಗಳಲ್ಲೂ ಪ್ರಕಟಗೊಳ್ಳುತ್ತಿದೆ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.

ಜ್ಯೋತಿಷ್ಯ ಆಧಾರಿತ ಕಾರ್ಯಕ್ರಮಗಳನ್ನು ಸರ್ಕಾರ ಶಾಸನಗಳ ಮೂಲಕ ನಿಯಂತ್ರಿಸಲು ಸಾಧ್ಯವಿದೆ. ನ್ಯಾಯಾಲಯದ ವ್ಯಾಪ್ತಿಗೆ ಬರುವುದಿಲ್ಲ ಎಂದು ನ್ಯಾಯಪೀಠ ಹೇಳಿದೆ.

ಮುಂದೇನು?: ಅರ್ಜಿದಾರರು ವಾರ್ತಾ ಮತ್ತು ಪ್ರಸಾರ ಇಲಾಖೆ ಅಥವಾ ಜಾಹೀರಾತು ನಿಯಂತ್ರಕ ಸಂಸ್ಥೆ ಅಥವಾBroadcasting Content Complaints Council ಅಥವಾ ಕೇಬಲ್ ಟೆಲಿವಿಷನ್ ನೆಟ್ವರ್ಕ್ಸ್ (ನಿಯಂತ್ರಣ) ಕಾಯ್ದೆ ಸಂಬಂಧಿಸಿದಂತೆ ಅಧಿಕಾರಿಗಳನ್ನು ಸಂಪರ್ಕಿಸಬಹುದು.

ಸಾರ್ವಜನಿಕ ಮಾನ, ಪ್ರಾಣಹಾನಿಗೆ ಕಾರಣವಾಗಿರುವ ಸಮಾಜ ಘಾತುಕ ಕಾರ್ಯಕ್ರಮಗಳನ್ನು ನಿಯಂತ್ರಿಸಲು ಈಗಿನ ಕಾಯ್ದೆಗಳು ವಿಫಲವಾಗಿರುವುದು ದುರದೃಷ್ಟಕರ ಎಂದು ಎನ್ ಜಿಒ ಅಧ್ಯಕ್ಷ ಅರ್ಜಿದಾರ ಅಜಯ್ ಗೌತಮ್ ಪ್ರತಿಕ್ರಿಯಿಸಿದ್ದಾರೆ.

English summary
The Delhi High Court has refused to prohibit astrology-based shows on television while saying it was not in its domain to prescribe what the programming code should be.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X