ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡೊಮಿನೊಸ್ ಪಿಜ್ಜಾ ಗ್ರಾಹಕರ ಮಾಹಿತಿ ಹ್ಯಾಕ್‌, ಹೈಕೋರ್ಟ್‌ ಆದೇಶವೇನು?

|
Google Oneindia Kannada News

ನವದೆಹಲಿ, ಜೂನ್ 6: ಡೊಮಿನೊಸ್ ಪಿಜ್ಜಾ ಗ್ರಾಹಕರ ಮಾಹಿತಿಯನ್ನು ಹ್ಯಾಕರ್‌ಗಳು ಅಂತರ್ಜಾಲದಲ್ಲಿ ಅಕ್ರಮವಾಗಿ ಹಂಚಿಕೊಂಡಿರುವ ಘಟನೆ ತಿಳಿದಿರಬಹುದು. ಈ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಹೈಕೋರ್ಟ್, ಕೂಡಲೇ ಅಂಥ ಯುಆರ್‌ಎಲ್‌ಗಳನ್ನು ತೆಗೆದುಹಾಕಲು ಸೂಚಿಸಿದೆ.

ಡೊಮಿನೊಸ್ ಪಿಜ್ಜಾ ನಿರ್ವಹಿಸುವ ಜ್ಯುಬಿಲೆಂಟ್ ಗುಡ್ ವರ್ಕ್ ಲಿಮಿಟೆಡ್ ಕಂಪನಿ ಕೂಡಾ ಈ ಬಗ್ಗೆ ಹೇಳಿಕೆ ನೀಡಿದ್ದು, ಹ್ಯಾಕ್ ಆಗಿದ್ದ ಯುಆರ್‌ಎಲ್‌ಗಳನ್ನು ತೆಗೆದುಹಾಕಲಾಗಿದೆ ಎಂದಿದೆ.

ಕ್ಯಾರಿ ಬ್ಯಾಗ್‌ಗೆ 14 ರೂ.: ಡೊಮಿನೊಸ್‌ಗೆ ಬಿತ್ತು 10 ಲಕ್ಷ ರೂ. ದಂಡಕ್ಯಾರಿ ಬ್ಯಾಗ್‌ಗೆ 14 ರೂ.: ಡೊಮಿನೊಸ್‌ಗೆ ಬಿತ್ತು 10 ಲಕ್ಷ ರೂ. ದಂಡ

ಡೊಮಿನೊಸ್ ಪಿಜ್ಜಾ ಗ್ರಾಹಕರಿಗೆ ಸಂಬಂಧಿಸಿದ ದತ್ತಾಂಶಗಳು ಭಾರಿ ಪ್ರಮಾಣದಲ್ಲಿ ಸೋರಿಕೆಯಾಗಿರುವ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ಕ್ರಮ ಕೈಗೊಂಡಿತ್ತು.

Delhi HC instructs Dominos to remove hacked URLs

ಜುಬಿಲೆಂಟ್ ಫುಡ್ ವರ್ಕ್ಸ್ ಲಿಮಿಟೆಡ್ ಮಾಲೀಕತ್ವದ ಡೊಮಿನೊಸ್‌ ಪಿಜ್ಜಾ ಈ ಹ್ಯಾಕಿಂಗ್‌ ಬಗ್ಗೆ ತನಿಖಾ ಸಂಸ್ಥೆಗೆ ಲಿಖಿತ ದೂರು ಸಲ್ಲಿಸಬಹುದು ಎಂದು ನ್ಯಾಯಮೂರ್ತಿ ಯೋಗೇಶ್‌ ಖನ್ನಾ ತಿಳಿಸಿದ್ದಾರೆ. ಡೊಮಿನೊಸ್‌ ಪಿಜ್ಜಾ ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ ಹ್ಯಾಕ್‌ ಮಾಡಿರುವುದರಿಂದಾಗಿ ಗ್ರಾಹಕರ ಗೌಪ್ಯತೆಗೆ ಧಕ್ಕೆ ಉಂಟಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿತ್ತು.

ಗ್ರಾಹಕರ ಗೌಪ್ಯತೆ ಕಾಪಾಡಿಕೊಳ್ಳಲು ಹ್ಯಾಕ್ ಆದ ಡೇಟಾಗೆ ಸಂಬಂಧಿಸಿದಂತೆ ಯುಆರ್ ಎಲ್ ಹಾಗೂ ವಿಭಾಗವನ್ನು ತೆಗೆದು ಹಾಕಲು ಇಂಟರ್ನೆಟ್ ಸೇವಾ ಸಂಸ್ಥೆ, ಟೆಲಿಕಾಂ ಸಂಸ್ಥೆ ಹಾಗೂ ಸಂವಹನ ಸಂಸ್ಥೆಗೂ ಮಾಹಿತಿ ಒದಗಿಸಲಾಗಿದೆ.

English summary
Delhi High Court instructs Jubilant Good work ltd which operates Dominos to block and remove hacked URLs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X