ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಕ್ಕಿಜ್ವರದ ಆತಂಕವಿಲ್ಲ: ದೆಹಲಿಯಲ್ಲಿ ಕೋಳಿ, ಮೊಟ್ಟೆ ತಿನ್ನುವುದಕ್ಕಿಲ್ಲ ನಿರ್ಬಂಧ

|
Google Oneindia Kannada News

ನವದೆಹಲಿ, ಜನವರಿ.14: ರಾಷ್ಟ್ರ ರಾಜಧಾನಿಯಲ್ಲಿ ಹಕ್ಕಿಜ್ವರದ ಭೀತಿಯಿಂದ ಮುಚ್ಚಿಸಲಾಗಿದ್ದ ಘಜಿಪುರ್ ಹೋಲ್ ಸೇಲ್ ಮಾರುಕಟ್ಟೆ ತೆರೆಯುವುದಕ್ಕೆ ಅನುಮತಿ ನೀಡಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆದೇಶ ಹೊರಡಿಸಿದ್ದಾರೆ.

ನವದೆಹಲಿಯಲ್ಲಿ ಇದೀಗ ಹಕ್ಕಿಜ್ವರದ ಭೀತಿ ಇಲ್ಲವಾಗಿದೆ. ವೈದ್ಯಕೀಯ ತಪಾಸಣೆಯಲ್ಲಿ ಸೋಂಕು ಇಲ್ಲದಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಕೋಳಿ ಮಾಂಸ ಮತ್ತು ಮೊಟ್ಟೆಗಳ ಆಮದು ಮತ್ತು ರಫ್ತಿನ ಮೇಲೆ ವಿಧಿಸಿದ್ದ ನಿರ್ಬಂಧವನ್ನು ತೆಗೆದು ಹಾಕಲಾಗಿದೆ.

ಹಕ್ಕಿಜ್ವರ: ಕೋಳಿ ಮಾಂಸ ಮತ್ತು ಉತ್ಪನ್ನಗಳ ಮಾರಾಟ ನಿಷೇಧ ಹಕ್ಕಿಜ್ವರ: ಕೋಳಿ ಮಾಂಸ ಮತ್ತು ಉತ್ಪನ್ನಗಳ ಮಾರಾಟ ನಿಷೇಧ

ಕಳೆದ ಜನವರಿ.09ರಿಂದ ನವದೆಹಲಿ ಸರ್ಕಾರವು ಕೋಳಿ ಮಾಂಸ ಆಮದು ಮತ್ತು ರಫ್ತಿಗೆ ನಿರ್ಬಂಧ ವಿಧಿಸಿತ್ತು. ಗುರುವಾರ ದೆಹಲಿಯ ಪಶು ಸಂಗೋಪನಾ ಘಟಕವು ರಾಜ್ಯದಿಂದ ಕಳುಹಿಸಿ ಕೊಟ್ಟಿದ್ದ ಪಕ್ಷಿಗಳಲ್ಲಿ ಹಕ್ಕಿಜ್ವರ ಇಲ್ಲ ಎಂಬುದನ್ನು ಖಚಿತಪಡಿಸಿದೆ.

ಹಕ್ಕಿಜ್ವರ ಕಾಣಿಸಿಕೊಂಡಿಲ್ಲ ಎಂದು ಸ್ಪಷ್ಟನೆ

ಕಳೆದ ಎರಡು ವಾರಗಳಿಂದ ತೀವ್ರ ಆತಂಕ ಹುಟ್ಟಿಸಿದ್ದ ಹಕ್ಕಿಜ್ವರದ ಬಗ್ಗೆ ಭಯಪಡಬೇಕಿಲ್ಲ ಎಂದು ದೆಹಲಿ ಪಶು ಸಂಗೋಪನಾ ಘಟಕವು ಸ್ಪಷ್ಟಪಡಿಸಿದೆ. ರಾಜ್ಯದಿಂದ ಕಳುಹಿಸಿಕೊಟ್ಟಿದ್ದ ಪಕ್ಷಿಗಳಲ್ಲಿ ಯಾವುದೇ ರೀತಿ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿಲ್ಲ ಎಂದು ದೆಹಲಿ ಪಶು ಸಂಗೋಪನಾ ಘಟಕದ ಅಧಿಕಾರಿ ರಾಕೇಶ್ ಸಿಂಗ್ ಸ್ಪಷ್ಟಪಡಿಸಿದ್ದಾರೆ. ಈ ಹಿನ್ನೆಲೆ ದೆಹಲಿ ಘಜಿಪುರ್ ಹೋಲ್ ಸೇಲ್ ಮಾಂಸದ ಮಾರುಕಟ್ಟೆ ತೆರೆಯುವುದಕ್ಕೆ ಅವಕಾಶ ನೀಡುವುದಾಗಿ ಸಿಎಂ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.

ಕೋಳಿ ಮಾಂಸ ಮಾರಾಟ, ಸಾಕಾಣಿಕೆದಾರರು ನಿರಾಳ

ಕೋಳಿ ಮಾಂಸ ಮಾರಾಟ, ಸಾಕಾಣಿಕೆದಾರರು ನಿರಾಳ

ದೆಹಲಿಯಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿರುವ ಬಗ್ಗೆ ಶಂಕೆ ವ್ಯಕ್ತವಾಗುತ್ತಿದ್ದಂತೆ ಮಾಂಸ ಮಾರಾಟಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಕೋಳಿ ಮತ್ತು ಕೋಳಿ ಮಾಂಸ ಸಂಗ್ರಹಿಸಿ ಇಡುವುದನ್ನು ನಿಷೇಧಿಸಲಾಗಿತ್ತು. ಇದೀಗ ಸೋಂಕು ಇಲ್ಲ ಎಂದು ಗೊತ್ತಾಗುತ್ತಿದ್ದಂತೆ ವ್ಯಾಪಾರಿಗಳು ನಿರಾಳರಾಗಿದ್ದಾರೆ.

ರೆಸ್ಟೋರೆಂಟ್, ಹೋಟೆಲ್ ಗಳಲ್ಲಿ ನಿಷೇಧ ಆದೇಶ

ರೆಸ್ಟೋರೆಂಟ್, ಹೋಟೆಲ್ ಗಳಲ್ಲಿ ನಿಷೇಧ ಆದೇಶ

ಕೋಳಿ ಮಾಂಸ ಹಾಗೂ ಮೊಟ್ಟೆಯಿಂದ ತಯಾರಿಸುವ ಆಹಾರವನ್ನು ನಿಷೇಧಿಸಲಾಗಿದೆ. ಮಹಾನಗರ ಪಾಲಿಕೆ ಆದೇಶದ ಬಗ್ಗೆ ನಿರ್ಲಕ್ಷ್ಯ ತೋರಿದರೆ ಅಂತಹ ಹೋಟೆಲ್ ಮತ್ತು ರೆಸ್ಟೋರೆಂಟ್ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಉತ್ತರ ಮತ್ತು ದಕ್ಷಿಣ ದೆಹಲಿ ಮಹಾನಗರ ಪಾಲಿಕೆಗಳು ಎಚ್ಚರಿಕೆ ನೀಡಿದ್ದವು. ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲ ಮಾಂಸ ಮಾರಾಟ ಅಂಗಡಿಗಳಲ್ಲಿ ಕೋಳಿ ಮಾಂಸ ಕತ್ತರಿಸುವುದು, ಸಂಗ್ರಹಿಸಿಡುವುದು, ಕೋಳಿ ಮಾಂಸ ಮಾರಾಟವನ್ನು ತಕ್ಷಣದಿಂದಲೇ ನಿರ್ಬಂಧಿಸಿ ಆದೇಶಿಸಲಾಗಿದೆ. ಮುಂದಿನ ಆದೇಶದವರೆಗೂ ಈ ನಿರ್ಬಂಧವು ಜಾರಿಯಲ್ಲಿರಲಿದೆ ಎಂದು ಮಹಾನಗರ ಪಾಲಿಕೆ ಆದೇಶದಲ್ಲಿ ಉಲ್ಲೇಖಿಸಲಾಗಿತ್ತು.

ಸರಿಯಾಗಿ ಬೇಯಿಸಿ ತಿನ್ನುವ ಮಾಂಸದಿಂದ ಅಪಾಯವಿಲ್ಲ

ಸರಿಯಾಗಿ ಬೇಯಿಸಿ ತಿನ್ನುವ ಮಾಂಸದಿಂದ ಅಪಾಯವಿಲ್ಲ

ಅರ್ಧ ಬೇಯಿಸಿದ ಕೋಳಿ ಮಾಂಸ, ಅರ್ಧ ಬೇಯಿಸಿದ ಮೊಟ್ಟೆ ಹಾಗೂ ಅರ್ಧ ಕುಚ್ಚಿರುವ ಮೊಟ್ಟೆ ಸೇವನೆ ಮಾಡದಂತೆ ದೆಹಲಿ ಆರೋಗ್ಯ ಇಲಾಖೆಯು ಎಚ್ಚರಿಕೆ ನೀಡಿದೆ. ಸಂಪೂರ್ಣವಾಗಿ ಬೇಯಿಸಿದ ಕೋಳಿ ಮಾಂಸ ಸೇವನೆ ಮಾತ್ರ ಸುರಕ್ಷಿತವಾಗಿದೆ. 70 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ 30 ನಿಮಿಷಗಳ ಕಾಲ ಬೇಯಿಸಿದ ಮಾಂಸವನ್ನು ಮಾತ್ರ ಸೇವಿಸುವಂತೆ ಸೂಚಿಸಲಾಗಿತ್ತು.

English summary
Delhi Govt Will Permit To Open Poultry Markets After Bird Flu Samples Tested Negative.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X