ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಾರಕಕ್ಕೇರಿದ ಕೇಂದ್ರ ಹಾಗೂ ದೆಹಲಿ ಸರ್ಕಾರದ ನಡುವಿನ ಹಗ್ಗಜಗ್ಗಾಟ

|
Google Oneindia Kannada News

ನವದೆಹಲಿ, ಜೂನ್ 6: ದೆಹಲಿ ಸರ್ಕಾರ ಘೋಷಿಸಿದ್ದ ಮನೆ ಮನೆಗೆ ಪಡಿತರ ಯೋಜನೆಗೆ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ತಡೆ ನೀಡಿದ್ದಾರೆ. ಈ ಯೋಜನೆಗೆ ಸರ್ಕಾರ ಪೂರ್ವಾನುಮತಿಯನ್ನು ಪಡೆದುಕೊಂಡಿಲ್ಲ ಗವರ್ನಲ್ ಕಾರಣವನ್ನು ನೀಡಿದ್ದಾರೆ. ಈ ಬೆಳವಣಿಗೆಯ ನಂತರ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಪ್ರತಿಕ್ರಿಯಿಸಿದ್ದು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

Recommended Video

Pizza Burger ಮನೆಗೆ ತಲುಪಿಸೋದಾದ್ರೆ ರೇಷನ್ ಯಾಕೆ ಆಗಲ್ಲ : Arvind Kejriwal | Oneindia Kannada

"ಪಿಜ್ಜಾವನ್ನು ಮನೆಗೆ ತಲುಪಿಸುವುದಾದರೆ ಪಡಿತರವನ್ನು ಯಾಕೆ ಮನೆಗೆ ಹಂಚಬಾರದು" ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ. ಇನ್ನು ಈ ಯೋಜನೆಗಾಗಿ ಕೇಂದ್ರ ಸರ್ಕಾರದ ಬಳಿ ಐದು ಬಾರಿ ಅನುಮತಿಯನ್ನು ಕೇಳಿರುವುದಾಗಿಯೂ ಕೇಜ್ರಿವಾಲ್ ಹೇಳಿದ್ದಾರೆ.

ದೆಹಲಿ ಸರ್ಕಾರಿ ಆಸ್ಪತ್ರೆಯಲ್ಲಿ ನರ್ಸ್‌ಗಳಿಗೆ ಮಲಯಾಳಂ ಮಾತನಾಡದಂತೆ ನಿಷೇಧದೆಹಲಿ ಸರ್ಕಾರಿ ಆಸ್ಪತ್ರೆಯಲ್ಲಿ ನರ್ಸ್‌ಗಳಿಗೆ ಮಲಯಾಳಂ ಮಾತನಾಡದಂತೆ ನಿಷೇಧ

ವರ್ಚುವಲ್ ಮಾಧ್ಯಮಗೋಷ್ಟಿಯಲ್ಲಿ ಭಾಗಿಯಾಗಿದ್ದ ಅರವಿಂದ ಕೇಜ್ರಿವಾಲ್ ಪ್ರತಿಕ್ರಿಯೆ ನೀಡಿದರು. "ಕಾನೂನಿನ ಪ್ರಕಾರ ಈ ರೀತಿಯ ಯೋಜನೆಗಳಿಗೆ ಅನುಮತಿಯನ್ನು ಪಡೆಯುವ ಅವಶ್ಯಕತೆಯಿಲ್ಲದಿದ್ದರೂ ಕೇಂದ್ರ ಸರ್ಕಾರದ ಬಳಿ ನಾವು ಐದು ಬಾರಿ ಅನುಮತಿಯನ್ನು ಕೇಳಿದ್ದೇವೆ" ಎಂದು ದೆಹಲಿ ಮುಖ್ಯಮಂತ್ರಿ ಹೇಳಿದ್ದಾರೆ

Delhi Govt vs Centre Tussle Intensifies on Doorstep ration scheme

"ಪಡಿತರ ಮಾಫಿಯಾ ವಿರುದ್ಧ ಮೊದಲ ಬಾರಿಗೆ ಸರ್ಕಾರ ಹೆಜ್ಜೆಯನ್ನು ಇಟ್ಟಿತ್ತು. ಆದರೆ ಆ ಮಾಫಿಯಾ ಎಷ್ಟು ಬಲಿಷ್ಟವಾಗಿದೆಯೆಂದರೆ ಜಾರಿಗೆ ಬರುವ ಒಂದು ವಾರಕ್ಕೆ ಮುನ್ನ ಯೋಜನೆ ಜಾರಿಗೆ ಬರುವುದನ್ನು ರದ್ದುಗೊಳಿಸಲಾಗಿದೆ" ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ.

ದೆಹಲಿ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಇಮ್ರಾನ್ ಹುಸೇನ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು ಲೆಫ್ಟಿನೆಂಟ್ ಗವರ್ನಲ್ ಅವರ ನಡೆ ರಾಜಕೀಯ ದುರುದ್ಧೇಶದಿಂದ ಕೂಡಿದೆ ಎಂದಿದ್ದಾರೆ. ಈಗಿನ ಕಾನೂನಿನ ಪ್ರಕಾರ ಘೋಷಿಸಿರುವ ಯೋಜನೆಗೆ ಅನುಮತಿ ಬೇಕಿಲ್ಲ. ಹಾಗಿದ್ದರೂ ಈ ಮಹತ್ವದ ಯೋಜನೆಯ ಜಾರಿ ವಿಚಾರವಾಗಿ ಪ್ರತಿ ಹಂತದಲ್ಲಿಯೂ ಮಾಹಿತಿ ನೀಡುತ್ತಾ 2018ರ ಬಳಿಕ 6 ಬಾರಿ ಕೇಂದ್ರ ಸರ್ಕಾರಕ್ಕೆ ಪತ್ರವನ್ನು ಬರೆದಿದ್ದೇವೆ ಎಂದಿದ್ದಾರೆ.

English summary
Delhi Govt vs Centre Tussle Intensifies on Doorstep ration scheme. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X