ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

4 ಸಾವಿರ ತಬ್ಲಿಘಿಗಳ ಬಿಡುಗಡೆಗೆ ದೆಹಲಿ ಸರ್ಕಾರ ಅನುಮತಿ

|
Google Oneindia Kannada News

ದೆಹಲಿ, ಮೇ 6: ದೇಶದಲ್ಲಿ ಕೊರೊನಾ ವೈರಸ್‌ ಹರಡಲು ಪ್ರಮುಖ ಕಾರಣವಾಗಿದ್ದ ದೆಹಲಿಯ ತಬ್ಲಿಘಿ ಸದಸ್ಯರ ಪೈಕಿ 4 ಸಾವಿರ ಮಂದಿಯನ್ನು ಬಿಡುಗಡೆ ಮಾಡಲು ದೆಹಲಿ ಸರ್ಕಾರ ಅನುಮತಿ ನೀಡಿದೆ ಎಂದು ಸರ್ಕಾರದ ಮೂಲಗಳು ಹೇಳಿವೆ.

Recommended Video

ಕಲಾವಿದರಿಗೆ ಸರ್ಕಾರ ಕೊಡ್ತಿರೋ ಹಣವನ್ನು ಅವಶ್ಯಕತೆ ಇದ್ದೋರು ಪಡೆದುಕೊಳ್ಳಿ | Saadhu Kokila | Oneindia Kannada

ನಿಜಾಮುದ್ದಿನ್ ಮರ್ಕಜ್‌ನಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದ ಮತ್ತು ಆ ಸದಸ್ಯರ ಜೊತೆ ಸಂಪರ್ಕದಲ್ಲಿದ್ದವರನ್ನು ಪತ್ತೆ ಹಚ್ಚಿ ದೆಹಲಿಯ ಸುತ್ತಮುತ್ತ ಕ್ವಾರೆಂಟೈನ್‌ಗೆ ಒಳಪಡಿಸಲಾಗಿತ್ತು. ಇದೀಗ, ತಬ್ಲಿಘಿಗಳ ಕ್ವಾರೆಂಟೈನ್‌ ಅವಧಿ ಮುಗಿದಿರುವ ಹಿನ್ನೆಲೆ ಅವರನ್ನು ಮನೆಗೆ ಹೋಗಲು ಅನುಮತಿ ನೀಡಲಾಗಿದೆ.

ದೆಹಲಿ ಪೊಲೀಸರಿಂದ ತಬ್ಲಿಘಿ ಮುಖ್ಯಸ್ಥನಿಗೆ 4ನೇ ಬಾರಿ ನೋಟಿಸ್ದೆಹಲಿ ಪೊಲೀಸರಿಂದ ತಬ್ಲಿಘಿ ಮುಖ್ಯಸ್ಥನಿಗೆ 4ನೇ ಬಾರಿ ನೋಟಿಸ್

ಆದರೆ, ಕೊರೊನಾ ವೈರಸ್‌ಗೆ ಸಂಬಂಧಿಸಿದಂತೆ ಯಾವೆಲ್ಲ ತಬ್ಲಿಘಿಗಳ ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿದೆಯೋ ಅಂತವರನ್ನು ಪೊಲೀಸ್ ವಶಕ್ಕೆ ತೆಗೆದುಕೊಳ್ಳಲು ಆರೋಗ್ಯ ಇಲಾಖೆ ತಿಳಿಸಿದೆ.

ಇದು ಕೇವಲ ದೆಹಲಿಯಲ್ಲಿ ಉಳಿದುಕೊಂಡಿದ್ದ ತಬ್ಲಿಘಿಗಳ ಕಥೆ. ದೆಹಲಿ ಬಿಟ್ಟು ಬೇರೆ ರಾಜ್ಯಗಳಿಂದ ಸಾವಿರಾರು ತಬ್ಲಿಘಿಗಳು ದೆಹಲಿ ಸಭೆಯಲ್ಲಿ ಭಾಗವಹಿಸಿದ್ದರು. ಬಳಿಕ ತಮ್ಮ ರಾಜ್ಯಗಳಿಗೆ ತೆರಳಿದ್ದರು. ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ತಬ್ಲಿಘಿಗಳನ್ನು ಕ್ವಾರೆಂಟೈನ್‌ಗೆ ಒಳಪಡಿಸಿದ್ದು, ಕೆಲವರ ವಿರುದ್ಧ ಕೇಸ್ ದಾಖಲು ಮಾಡಿದೆ.

Delhi Govt Orders Release Of 4,000 Tablighi Jamaat Members

ಇನ್ನು ದೆಹಲಿಯಲ್ಲಿ ಧಾರ್ಮಿಕ ಸಭೆ ಆಯೋಜಿಸಿದ್ದ ತಬ್ಲಿಘಿ ಮುಖ್ಯಸ್ಥ ಮೌಲಾನಾ ಸಾದ್ ವಿರುದ್ಧ ದೆಹಲಿಯಲ್ಲಿ ಪೊಲೀಸ್ ಕೇಸ್ ಮತ್ತು ಜಾರಿ ನಿರ್ದೇಶನಾಲಯದಲ್ಲಿ ಮನಿ ಲಾಂಡರಿಂಗ್ ಕೇಸ್ ದಾಖಲಾಗಿದೆ. ಆದರೆ, ಮೌಲನಾ ಸಾದ್ ಪೊಲೀಸರ ಕೈಗೆ ಸಿಗದೆ ಕಣ್ತಪ್ಪಿಸಿಕೊಂಡಿದ್ದಾರೆ.

English summary
Delhi govt orders release of 4,000 Tablighi Jamaat members who have completed their required quarantine period in centres.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X