ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್-19 ಲಸಿಕೆ ಪಡೆಯಲು ದೆಹಲಿಯಲ್ಲಿ ಸಿದ್ಧತೆ ಪೂರ್ಣಗೊಂಡಿದೆ: ಸಿಎಂ ಅರವಿಂದ್ ಕೇಜ್ರಿವಾಲ್

|
Google Oneindia Kannada News

ನವದೆಹಲಿ, ಡಿಸೆಂಬರ್ 24: ದೆಹಲಿ ಸರ್ಕಾರ ಕೋವಿಡ್ ವ್ಯಾಕ್ಸಿನೇಷನ್‌ಗೆ ಎಲ್ಲಾ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ ಮತ್ತು ಲಸಿಕೆ ಪಡೆಯಲು ಸಿದ್ಧವಾಗಿದೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ಕೋವಿಡ್-19 ಸಿದ್ಧತೆ ಪರಿಶೀಲಿಸಲು ಇಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಆರೋಗ್ಯ ಸಚಿವರು ಮತ್ತು ಆರೋಗ್ಯ ಕಾರ್ಯದರ್ಶಿಗಳ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಭೆ ಮುಗಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಸಿಎಂ ಕೇಜ್ರಿವಾಲ್ ಕೋವಿಡ್ ಲಸಿಕೆ ಸಿದ್ಧತೆಯ ಕುರಿತು ತಿಳಿಸಿದರು.

ದೇಶದಲ್ಲಿ ಕೊರೊನಾಗಿಂತಲೂ ಮಾರಣಾಂತಿಕವಾದ ವಾಯುಮಾಲಿನ್ಯದೇಶದಲ್ಲಿ ಕೊರೊನಾಗಿಂತಲೂ ಮಾರಣಾಂತಿಕವಾದ ವಾಯುಮಾಲಿನ್ಯ

''ದೆಹಲಿ ಸರ್ಕಾರವು ವ್ಯಾಕ್ಸಿನೇಷನ್‌ಗೆ ಸಂಪೂರ್ಣವಾಗಿ ಸನ್ನದ್ಧವಾಗಿದೆ. ಹೆಲ್ತ್‌ವರ್ಕರ್ಸ್ ಮತ್ತು ಮುಂಚೂಣಿ ಕಾರ್ಮಿಕರು ಸೇರಿದಂತೆ ಸುಮಾರು 51 ಲಕ್ಷ ಜನರು ಮೊದಲ ಹಂತದಲ್ಲಿ ಲಸಿಕೆ ಪಡೆಯುತ್ತಾರೆ. ಅಂತಹ ಎಲ್ಲಾ ಜನರನ್ನು ಗುರುತಿಸುವ ಪ್ರಕ್ರಿಯೆಯು ಬಹುತೇಕ ಪೂರ್ಣಗೊಂಡಿದೆ'' ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

Delhi govt has completed all preparations & is ready for vaccination:Delhi CM Kejriwal

''ಪ್ರತಿ ವ್ಯಕ್ತಿಗೆ ಎರಡು ಡೋಸ್‌ಗಳು ಸಿಗುವುದರಿಂದ ಮೊದಲ ಹಂತದ ವ್ಯಾಕ್ಸಿನೇಷನ್‌ಗಾಗಿ ನಮಗೆ 1.02 ಕೋಟಿ ಡೋಸ್‌ ಲಸಿಕೆ ಬೇಕಾಗುತ್ತದೆ. ಪ್ರಸ್ತುತ, ನಾವು 74 ಲಕ್ಷ ಡೋಸ್‌ಗಳನ್ನು ಸಂಗ್ರಹಿಸುವ ಸಾಮರ್ಥ್ಯವನ್ನು ಹೊಂದಿದ್ದೇವೆ. ಅದನ್ನು ಒಂದು ವಾರದೊಳಗೆ 1.15 ಕೋಟಿಗೆ ಹೆಚ್ಚಿಸಲಾಗುವುದು'' ಎಂದು ದೆಹಲಿ ಸಿಎಂ ಹೇಳಿದರು.

ದೆಹಲಿಯಲ್ಲಿ ನಿನ್ನೆ 871 ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಕಳೆದ ಮೂರು ದಿನಗಳಿಂದ, ದಿನಕ್ಕೆ 1,000 ಕ್ಕಿಂತ ಕಡಿಮೆ ಪ್ರಕರಣಗಳು ದಾಖಲಾಗಿವೆ. ಕೆಲವು ದಿನಗಳವರೆಗೆ ಸೋಂಕಿನ ಪ್ರಮಾಣವು ಶೇಕಡಾ 2 ಕ್ಕಿಂತ ಕಡಿಮೆಯಿದೆ.

English summary
Delhi CM Arvind Kejriwal said Delhi govt has completed all preparations & is ready for vaccination.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X