ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿರ್ಭಯಾ ಅತ್ಯಾಚಾರಿಗೆ ಕ್ಷಮಾಧಾನ ಬೇಡ: ದೆಹಲಿ ಸರ್ಕಾರ

|
Google Oneindia Kannada News

ನವದೆಹಲಿ, ಡಿಸೆಂಬರ್ 02: ನಿರ್ಭಯಾ ಅತ್ಯಾಚಾರಿಗಳಿಗೆ ಕ್ಷಮಾಧಾನ ನೀಡಬಾರದು ಎಂದು ದೆಹಲಿ ಸರ್ಕಾರವು ಲೆಫ್ಟಿನೆಂಟ್ ಗೌರ್ನರ್‌ಗೆ ಮನವಿ ಮಾಡಿದೆ.

ನಿರ್ಭಯಾ ಅತ್ಯಾಚಾರ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ ವಿನಯ್ ಶರ್ಮಾ ತನಗೆ ಮರಣದಂಡನೆಯಿಂದ ಕ್ಷಮಾಧಾನ ನೀಡಬೇಕು ಎಂದು ಕೋರಿ ರಾಷ್ಟ್ರಪತಿ ರಮಾನಾಥ ಕೋವಿಂದ್ ಗೆ ಮನವಿ ಮಾಡಿದ್ದ. ಕ್ಷಮಾದಾನ ಕೋರಿದ್ದ ವಿನಯ್ ಶರ್ಮಾ 23 ವರ್ಷ ವಯಸ್ಸಾಗಿದ್ದು, ಆತ ಪ್ಯಾರಾಮೆಡಿಕಲ್ ವಿದ್ಯಾರ್ಥಿ ಆಗಿದ್ದ.

ನಿರ್ಭಯಾ ಹಂತಕರ ಗಲ್ಲು ಸನ್ನಿಹಿತ... ಕ್ಷಮಾದಾನ ಅರ್ಜಿಗೆ 7 ದಿನ ಗಡುವುನಿರ್ಭಯಾ ಹಂತಕರ ಗಲ್ಲು ಸನ್ನಿಹಿತ... ಕ್ಷಮಾದಾನ ಅರ್ಜಿಗೆ 7 ದಿನ ಗಡುವು

ಇದರ ವಿರುದ್ಧ ದೆಹಲಿ ಸರ್ಕಾರವು ರಾಜ್ಯಪಾಲರಿಗೆ ಪತ್ರ ಬರೆದಿದ್ದು, ಯಾವುದೇ ಕಾರಣಕ್ಕೂ ಅತ್ಯಚಾರ ಆರೋಪಿಗೆ ಕ್ಷಮಾಧಾನ ನೀಡಬಾರದು ಎಂದು ಮನವಿ ಮಾಡಿದೆ.

Delhi Government Recommend Not To Give Mercy To Nirbhaya Rapist

'ಇದೊಂದು (ನಿರ್ಭಯಾ ಪ್ರಕರಣ) ಘೋರ ಪ್ರಕರಣವಾಗಿದ್ದು, ಅತ್ಯಂತ ಬರ್ಬರ ಕೃತ್ಯವನ್ನು ಆರೋಪಿಗಳು ಎಸಗಿದ್ದಾರೆ. ಮುಂದೆ ಇಂತಹಾ ಅಪರಾಧವನ್ನು ಮಾಡಬಾರದಂತೆ ಸಮಾಜಕ್ಕೆ ಅನುಕರಣಿಯ ಆಗುವಂತಹಾ ಶಿಕ್ಷೆ ನೀಡಬೇಕು ಎಂದು ದೆಹಲಿ ಸರ್ಕಾರ ಹೇಳಿದೆ.

ದೆಹಲಿ ಗೃಹ ಸಚಿವಾಲಯದಿಂದ ಈ ಮನವಿ ಮಾಡಲಾಗಿದ್ದು, ಗೃಹ ಮಂತ್ರಿಗಳು ಮಾತನಾಡಿ, ಕ್ಷಮಾಧಾನ ಅರ್ಜಿಯನ್ನು ಖಡ್ಡಾಯವಾಗಿ ತಿರಸ್ಕರಿಸುವಂತೆ ಮನವಿ ಮಾಡಲಾಗಿದೆ' ಎಂದರು.

ನಿರ್ಭಯಾ ಪ್ರಕರಣ ನಡೆದು ಬಂದ ಹಾದಿನಿರ್ಭಯಾ ಪ್ರಕರಣ ನಡೆದು ಬಂದ ಹಾದಿ

ಮನವಿಯನ್ನು ಪ್ರಸ್ತುತ ದೆಹಲಿ ಲೆಫ್ಟಿನಂಟ್ ಗೌರ್ನರ್‌ ಗೆ ಕಳುಹಿಸಿದ್ದು, ಮುಂದೆ ರಾಷ್ಟ್ರಪತಿ, ಕೇಂದ್ರ ಗೃಹ ಸಚಿವಾಲಯಕ್ಕೂ ಕಳುಹಿಸಲಾಗುತ್ತದೆ.

ಕ್ಷಮಾಧಾನ ಕೇಳಿರುವ ವಿನಯ್ ಶರ್ಮಾ ಪ್ರಸ್ತುತ ತಿಹಾರ್ ಜೈಲಿನಲ್ಲಿದ್ದಾನೆ. ಮತ್ತೊಬ್ಬ ಆರೋಪಿ ಮುಖೇಶ್ ತನಗೆ ಕ್ಷಮಾಧಾನ ಬೇಡವೆಂದು ನಿರಾಕರಿಸಿದ್ದಾನೆ. ಒಟ್ಟು ಆರು ಮಂದಿಯನ್ನು ಇದೇ ಪ್ರಕರಣದಲ್ಲಿ ಬಂಧಿಸಲಾಗಿದೆ.

English summary
Delhi government recommend not to give mercy to Nirbhaya rapist accused.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X