ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಆನ್‌ಲೈನ್‌ನಲ್ಲಿ ಬುಕ್ ಮಾಡಿದರೆ ಮನೆ ಬಾಗಿಲಿಗೆ 'ಮದ್ಯ'!

|
Google Oneindia Kannada News

ನವದೆಹಲಿ, ಜೂನ್ 01: ಭಾರತದ ಬಹುತೇಕ ರಾಜ್ಯಗಳಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ನಡುವೆ ಮದ್ಯದ ಅಂಗಡಿಗಳಿಗೆ ಬೀಗ ಹಾಕಿಸಲಾಗುತ್ತಿದೆ. ಇದರ ಮಧ್ಯೆ ನವದೆಹಲಿ ಸರ್ಕಾರ ಮದ್ಯಪ್ರಿಯರಿಗೆ ಖುಷಿ ಕೊಡವಂತಾ ಆದೇಶವೊಂದನ್ನು ಹೊರಡಿಸಿದೆ.

ಮೊಬೈಲ್ ಅಪ್ಲಿಕೇಷನ್ ಮತ್ತು ಆನ್ ಲೈನ್ ಮೂಲಕ ಬುಕ್ ಮಾಡಿದರೆ ನಿಮ್ಮ ಮನೆ ಬಾಗಿಲಿಗೆ ನೀವು ಬಯಸಿದ ದೇಶೀಯ ಅಥವಾ ವಿದೇಶಿ ಮದ್ಯವನ್ನು ಪೂರೈಸುವುದಕ್ಕೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರ್ಕಾರ ಅನುಮತಿ ನೀಡಿದೆ.

ಅಬ್ಬಬ್ಬಾ ಆಶ್ಚರ್ಯ: ಎಣ್ಣೆ ಖರೀದಿಗೆ ಕೊರೊನಾ ಲಸಿಕೆ ಪ್ರಮಾಣಪತ್ರ ಕಡ್ಡಾಯ!ಅಬ್ಬಬ್ಬಾ ಆಶ್ಚರ್ಯ: ಎಣ್ಣೆ ಖರೀದಿಗೆ ಕೊರೊನಾ ಲಸಿಕೆ ಪ್ರಮಾಣಪತ್ರ ಕಡ್ಡಾಯ!

ನವದೆಹಲಿಯಲ್ಲಿ ಆನ್ ಲೈನ್ ಮೂಲಕ ಮದ್ಯ ಮಾರಾಟಕ್ಕೆ ಸರ್ಕಾರ ಅನುಮತಿ ನೀಡಿರುವ ಬಗ್ಗೆ ಮಂಗಳವಾರ ಎಎನ್ಐ ಸುದ್ದಿ ಸಂಸ್ಥೆಯು ವರದಿ ಮಾಡಿದೆ. ರಾಜ್ಯ ಮತ್ತು ರಾಷ್ಟ್ರದ ತೆರಿಗೆ ಸಂಗ್ರಹದಲ್ಲಿ ಮದ್ಯ ಮಾರಾಟದ್ದೇ ಸಿಂಹಪಾಲಿದೆ. ಮದ್ಯದ ಆನ್ ಲೈನ್ ಬುಕ್ಕಿಂಗ್ ನಿಂದಾಗಿ ಕೊವಿಡ್-19 ಸೋಂಕು ಹರಡುವಿಕೆ ಅಪಾಯಕ್ಕೆ ನಿಯಂತ್ರಣ ಹೇರುವುದರ ಜೊತೆಗೆ ಆದಾಯ ಹೆಚ್ಚಿಸಿಕೊಳ್ಳುವುದಕ್ಕೆ ಈ ರೀತಿ ಯೋಜನೆ ಹಾಕಿಕೊಳ್ಳಲಾಗಿದೆ.

Delhi Government Permits Home Delivery Of Indian, Foreign Liquor

ಲಕ್ನೋದಲ್ಲಿ ಮದ್ಯಕ್ಕೆ ಕೊವಿಡ್-19 ಲಸಿಕೆ ಪ್ರಮಾಣಪತ್ರ:

ಕೊವಿಡ್-19 ಲಸಿಕೆ ಹಾಕಿಸಿಕೊಂಡವರಿಗೆ ಮಾತ್ರ ನಮ್ಮ ಅಂಗಡಿಯಲ್ಲಿ ಎಣ್ಣೆ ಮಾರಾಟ ಮಾಡುತ್ತೇವೆ. ಎಣ್ಣೆ ಖರೀದಿಸುವುದಕ್ಕೂ ಮೊದಲು ಗ್ರಾಹಕರು ತಾವು ಲಸಿಕೆ ಹಾಕಿಸಿಕೊಂಡಿರುವ ಪ್ರಮಾಣಪತ್ರವನ್ನು ತೋರಿಸುವುದು ಕಡ್ಡಾಯ ಎಂದು ಉತ್ತರ ಪ್ರದೇಶದ ಏತವಃ ಜಿಲ್ಲೆಯಲ್ಲಿರುವ ಮದ್ಯದ ಅಂಗಡಿ ಮಾಲೀಕ ಸೈಫೈ ಹೇಳಿದ್ದಾರೆ. ಎಣ್ಣೆ ಖರೀದಿಗೆ ಕೊರೊನಾವೈರಸ್ ಲಸಿಕೆ ಹಾಕಿಸಿಕೊಳ್ಳುವುದು ಕಡ್ಡಾಯ ಎಂಬ ಬಗ್ಗೆ ಅಂಗಡಿ ಎದುರು ಪೋಸ್ಟರ್ ಅನ್ನು ಕೂಡ ಹಾಕಲಾಗಿದೆ. ಈ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲೂ ಸಖತ್ ವೈರಲ್ ಆಗುತ್ತಿದೆ.

English summary
Delhi Government Permits Home Delivery Of Indian, Foreign Liquor.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X