ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯ ಸರ್ಕಾರಿ ಶಾಲೆಗಳೇ ಇದೀಗ ಐಸೊಲೇಷನ್ ಸೆಂಟರ್ಸ್.!

|
Google Oneindia Kannada News

ನವದೆಹಲಿ, ಜೂನ್ 5: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೊನಾ ವೈರಸ್ ಶಂಕಿತ ರೋಗಿಗಳ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ದೆಹಲಿ ಸರ್ಕಾರ ಇದೀಗ ಸರ್ಕಾರಿ ಶಾಲೆಗಳನ್ನು ಐಸೊಲೇಷನ್ ಸೆಂಟರ್ಸ್ ಆಗಿ ಪರಿವರ್ತಿಸಲು ಆದೇಶಿಸಿದೆ.

Recommended Video

ಬೆಂಗಳೂರಿನ ಮಾಲ್‌ಗಳು ತೆರೆಯಲಿವೆ , ನಿಯಮಗಳ ಪಟ್ಟಿ ಬಹಳ ದೊಡ್ಡದಿದೆ | Oneindia Kannada

ಮೊದಲನೇಯದಾಗಿ, ಆರ್.ಕೆ.ಪುರಂ ಸೆಕ್ಟರ್ 7 ನಲ್ಲಿರುವ ಸರ್ವೋದಯ ವಿದ್ಯಾಲಯ ಶಾಲೆಯನ್ನು ಪ್ರತ್ಯೇಕ ಕೇಂದ್ರವನ್ನಾಗಿ (ಐಸೊಲೇಷನ್ ಸೆಂಟರ್) ಮಾಡಲು ನಿರ್ಧರಿಸಲಾಗಿದೆ. ಅದಕ್ಕೆ ತಕ್ಕ ವ್ಯವಸ್ಥೆ ಕಲ್ಪಿಸುವ ಜವಾಬ್ದಾರಿಯನ್ನು ಶಾಲೆಯ ಪ್ರಾಂಶುಪಾಲರಿಗೆ ನೀಡಲಾಗಿದೆ.

ತಬ್ಲಿಘಿ ನಂಟು: 2200 ವಿದೇಶಿಗರಿಗೆ 10 ವರ್ಷ ನಿರ್ಬಂಧ ಹೇರಿದ ಭಾರತತಬ್ಲಿಘಿ ನಂಟು: 2200 ವಿದೇಶಿಗರಿಗೆ 10 ವರ್ಷ ನಿರ್ಬಂಧ ಹೇರಿದ ಭಾರತ

ಐಸೊಲೇಷನ್ ಸೆಂಟರ್ ನಲ್ಲಿ ವೈದ್ಯಕೀಯ ಸಿಬ್ಬಂದಿ ಇರಲಿದ್ದು, ನಿಯಮಿತವಾಗಿ ತಪಾಸಣೆ ನಡೆಸುತ್ತಲಿರುತ್ತಾರೆ. ಜೊತೆಗೆ ಪಿಪಿಇ ಕಿಟ್ ಗಳು, ಸರ್ಜಿಕಲ್ ಗೌನ್, ಮಾಸ್ಕ್, ಗ್ಲೌಸ್, ಸ್ಯಾನಿಟೈಸರ್ ವ್ಯವಸ್ಥೆಯೂ ಐಸೊಲೇಷನ್ ಸೆಂಟರ್ ನಲ್ಲಿ ಇರಲಿದೆ.

delhi-government-has-ordered-to-convert-government-schools-into-isolation-centres

ಶಾಲೆಯ ಆವರಣ ಶುಚಿಗೊಳಿಸಲು ಮತ್ತು ಸೋಂಕು ರಹಿತಗೊಳಿಸಲು ಅವಶ್ಯ ಸಿಬ್ಬಂದಿ ಲಭ್ಯವಾಗುವಂತೆ ನೋಡಿಕೊಳ್ಳಲು ಎಂ.ಸಿ.ಡಿಗೆ ದೆಹಲಿ ಸರ್ಕಾರ ಆದೇಶಿಸಿದೆ.

ತ್ಯಾಜ್ಯ ವಿಲೇವಾರಿ, ಬಯೋ ಮೆಡಿಕಲ್ ತ್ಯಾಜ್ಯ ವಿಲೇವಾರಿ ಮಾಡುವ ವ್ಯವಸ್ಥೆಯನ್ನೂ ಶಾಲೆಯಲ್ಲಿ ಮಾಡಲಾಗುತ್ತಿದೆ. ಪ್ರತ್ಯೇಕ ಕೇಂದ್ರದಲ್ಲಿ 24 ಗಂಟೆಗಳ ಪೊಲೀಸ್ ಭದ್ರತೆ ಒದಗಿಸುವಂತೆ ದೆಹಲಿ ಸರ್ಕಾರ ಸೂಚಿಸಿದೆ.

ರಕ್ಷಣಾ ಕಾರ್ಯದರ್ಶಿ ಅಜಯ್ ಕುಮಾರ್ ಗೆ ಕೋವಿಡ್-19 ಪಾಸಿಟಿವ್.!ರಕ್ಷಣಾ ಕಾರ್ಯದರ್ಶಿ ಅಜಯ್ ಕುಮಾರ್ ಗೆ ಕೋವಿಡ್-19 ಪಾಸಿಟಿವ್.!

ಅಂದ್ಹಾಗೆ, ದೆಹಲಿಯಲ್ಲಿ ಸದ್ಯ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 25,004ಕ್ಕೆ ಏರಿಕೆಯಾಗಿದೆ. ಇಲ್ಲಿಯವರೆಗೂ 9,898 ಮಂದಿ ಸಂಪೂರ್ಣವಾಗಿ ಗುಣಮುಖರಾಗಿದ್ದು, 659 ಮಂದಿ ಸಾವನ್ನಪ್ಪಿದ್ದಾರೆ. ದೆಹಲಿಯಲ್ಲಿ ಸದ್ಯ 14,447 ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

English summary
Delhi Government has ordered to convert Government Schools into Isolation Centres.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X