ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊವಿಡ್-19 ಪರೀಕ್ಷೆಗೆ 800 ರೂಪಾಯಿ ನಿಗದಿಗೊಳಿಸಿದ ಸರ್ಕಾರ

|
Google Oneindia Kannada News

ನವದೆಹಲಿ, ನವೆಂಬರ್,30: ರಾಷ್ಟ್ರ ರಾಜಧಾನಿಯಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆಯು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕೊವಿಡ್-19 ಮೂರನೇ ಅಲೆಯ ಭೀತಿಯಲ್ಲಿ ಜನರು ಬದುಕುತ್ತಿರುವ ಹಿನ್ನೆಲೆ ಸೋಂಕು ತಪಾಸಣೆಗೆ ಸರ್ಕಾರವು ಒತ್ತು ನೀಡಿದೆ.

ಕೊರೊನಾವೈರಸ್ ಸೋಂಕು ಪತ್ತೆಗೆ ನಡೆಸುವ ಆರ್ ಟಿ- ಪಿಸಿಆರ್ ಪರೀಕ್ಷೆಗೆ ಒಂದು ನಿರ್ದಿಷ್ಟ ದರವನ್ನು ಸರ್ಕಾರವೇ ನಿಗದಿಗೊಳಿಸಿದೆ. ನವದೆಹಲಿಯಾದ್ಯಂತ ಖಾಸಗಿ ಪ್ರಯೋಗಾಲಯಗಳಲ್ಲಿಯೂ ಕೂಡಾ ಕೊವಿಡ್-19 ಸೋಂಕು ತಪಾಸಣೆಗೆ ಕೇವಲ 800 ರೂಪಾಯಿ ತೆಗೆದುಕೊಳ್ಳುವಂತೆ ನಿರ್ದೇಶನ ನೀಡಲಾಗಿದೆ.

ಆರ್‌ಟಿ-ಪಿಸಿಆರ್ ಪರೀಕ್ಷೆ: ಯಾವ ರಾಜ್ಯದಲ್ಲಿ ಎಷ್ಟು ಶುಲ್ಕ?ಆರ್‌ಟಿ-ಪಿಸಿಆರ್ ಪರೀಕ್ಷೆ: ಯಾವ ರಾಜ್ಯದಲ್ಲಿ ಎಷ್ಟು ಶುಲ್ಕ?

ಸರ್ಕಾರದ ವತಿಯಿಂದ ನಡೆಸುವ ಕೊರೊನಾವೈರಸ್ ಸೋಂಕಿನ ಪರೀಕ್ಷೆಗೆ ಯಾವುದೇ ರೀತಿ ಹಣ ಪಾವತಿಸಬೇಕಾಗಿಲ್ಲ. ಆದರೆ ಸೋಂಕು ತಪಾಸಣೆ ವೇಗವನ್ನು ಹೆಚ್ಚಿಸುವ ಉದ್ದೇಶದಿಂದ ಖಾಸಗಿ ಲ್ಯಾಬ್ ಗಳಲ್ಲೂ ಕೊವಿಡ್-19 ಸೋಂಕು ತಪಾಸಣೆಗೆ ಅನುಮತಿ ನೀಡಲಾಗಿದೆ. ಇದರ ಜೊತೆಗೆ ಸೋಂಕು ತಪಾಸಣೆಗೆ ನಿರ್ದಿಷ್ಟ ದರವನ್ನು ನಿಗದಿಗೊಳಿಸಲಾಗಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಾಹಿತಿ ನೀಡಿದ್ದಾರೆ.

Delhi Government Caps The Price Of RT-PCR Test By Private Labs At Rs 800

ನವದೆಹಲಿ ಕೊವಿಡ್-19 ಪರಿಸ್ಥಿತಿ:

ಭಾರತದಲ್ಲಿ ಅತಿಹೆಚ್ಚು ಕೊರೊನಾವೈರಸ್ ಸೋಂಕಿತ ಪ್ರಕರಣಗಳಿರುವ ಅಗ್ರರಾಜ್ಯಗಳ ಪಟ್ಟಿಯಲ್ಲಿ ನವದೆಹಲಿ ಆರನೇ ಸ್ಥಾನದಲ್ಲಿದೆ. ನವದೆಹಲಿಯಲ್ಲಿ ಈವರೆಗೂ 5,66,648 ಕೊವಿಡ್-19 ಸೋಂಕಿತ ಪ್ರಕರಣಗಳು ವರದಿಯಾಗಿದ್ದು, ಮಹಾಮಾರಿಗೆ 9066 ಮಂದಿ ಪ್ರಾಣ ಬಿಟ್ಟಿದ್ದಾರೆ. 5,22,491 ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದು, 35091 ಸಕ್ರಿಯ ಪ್ರಕರಣಗಳಿರುವುದು ವರದಿಯಾಗಿದೆ.

Recommended Video

ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಕರೋನಾ | Oneindia Kannada

English summary
Delhi Government Caps The Price Of RT-PCR Test By Private Labs At Rs 800.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X