ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯಲ್ಲಿ ಆನ್ ಲೈನ್ ಮದುವೆ, ವಿಡಿಯೋ ಕಾಲ್‌ನಲ್ಲೇ ನೃತ್ಯ

|
Google Oneindia Kannada News

ನವ ದೆಹಲಿ, ಏಪ್ರಿಲ್ 07: ಕೊರೊನಾ ವೈರಸ್‌ ಭೀತಿ, ಲಾಕ್‌ ಡೌನ್ ನಿರ್ಬಂಧ ಮದುವೆ ಆಗುವ ಜೋಡಿಗಳಿಗೆ ದೊಡ್ಡ ಸಮಸ್ಯೆ ಆಗಿದೆ. ಮಾರ್ಚ್, ಏಪ್ರಿಲ್ ತಿಂಗಳುಗಳಲ್ಲಿ ಮದುವೆಗಳು ಹೆಚ್ಚು ನಡೆಯುತ್ತದೆ. ಆದರೆ, ಇದೇ ಸಮಯದಲ್ಲಿ ಕೊರೊನಾ ಇದ್ದು, ನವ ಜೋಡಿಗಳಿಗೆ ದಿಕ್ಕೆ ತೊಚದಂತಾಗಿದೆ.

Recommended Video

ತಬ್ಲಿಘಿ ಜಮಾಅತ್ ಬಗ್ಗೆ ಚೇತನ್ ಅವರ ಕೆಲವು ಆಲೋಚನೆಗಳೇನು ಕೇಳಿ | Chethan Kumar | Oneindia Kannada

ಲಾಕ್‌ಡೌನ್‌ನಿಂದ ಈಗಾಗಲೇ ಕೆಲವು ಆನ್ ಲೈನ್ ಮದುವೆ ನಡೆದ ಘಟನೆಗಳು ವರದಿ ಆಗಿದೆ. ಈಗ ದೆಹಲಿಯಲ್ಲಿ ಈ ರೀತಿಯ ಮತ್ತೊಂದು ಘಟನೆ ನೆಡೆದಿದೆ. ಮುಂಬೈ ಮೂಲಕ ಹುಡುಗ ಪ್ರೀತ್ ಸಿಂಗ್ ಹಾಗೂ ದೆಹಲಿಯ ಹುಡುಗಿ ನೀತ್ ಕೌರ್ ಆನ್ ಲೈನ್‌ನಲ್ಲಿಯೇ ವಿವಾಹ ಆಗಿದ್ದಾರೆ.

ಲಾಕ್‌ಡೌನ್‌ ಉಲ್ಲಂಘಿಸಿ ಮದುವೆ ಮೆರವಣಿಗೆ ಮಾಡಿದ್ದಕ್ಕೆ 'ವರ' ಅರೆಸ್ಟ್ಲಾಕ್‌ಡೌನ್‌ ಉಲ್ಲಂಘಿಸಿ ಮದುವೆ ಮೆರವಣಿಗೆ ಮಾಡಿದ್ದಕ್ಕೆ 'ವರ' ಅರೆಸ್ಟ್

ಪ್ರೀತ್ ಸಿಂಗ್ ನೇವಿ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಏಪ್ರಿಲ್ 5 ರಂದು ಅವರ ಮದುವೆ ನಿಶ್ಚಯ ಆಗಿತ್ತು. ಆದರೆ, ಲಾಕ್‌ ಡೌನ್ ಇರುವ ಕಾರಣ ಅವರ ಮದುವೆಗೆ ತೊಂದರೆ ಎದುರಾಯಿತು. ದೆಹಲಿಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕುಟುಂಬದವರಿಗೆ ಹೆಚ್ಚು ಭಯ ಆಗಿತ್ತು.

Mumbai Man And Delhi Girl Got Married In Online

ಹೀಗಾಗಿ, ಎರಡು ಕುಟುಂಬದವರು ವಿಡಿಯೋ ಕಾಲ್ ಮೂಲಕ ಮದುವೆ ಮಾಡಿದ್ದಾರೆ. ಆನ್ ಲೈನ್ ನಲ್ಲಿ ಮದುವೆ ಆದರೂ ಸಂಪ್ರಾದಯಿಕವಾಗಿ ಈ ಜೋಡಿ ಹೊಸ ಜೀವನಕ್ಕೆ ಕಾಲಿಟ್ಟಿದೆ. ದೇಶ, ವಿದೇಶದಲ್ಲಿ ಇದ್ದ ಸಂಬಂಧಿಗಳು ಹಾಗೂ ಸ್ನೇಹಿತರು ಸಹ ಆನ್ ಲೈನ್ ಮೂಲಕವೇ ಶುಭಾಶಯ ತಿಳಿಸಿದ್ದಾರೆ. ಅಷ್ಟೇ ಅಲ್ಲದೆ, ನೃತ್ಯ ಕಾರ್ಯಕ್ರಮಗಳನ್ನು ಆನ್ ಲೈನ್ ನಲ್ಲಿಯೇ ಮಾಡಿದ್ದಾರೆ.

ಲಾಕ್ ಡೌನ್ ಮುಗಿದು, ದೇಶ ಸಹಜ ಸ್ಥಿತಿಗೆ ಮರಳಿದ ಮೇಲೆ ಗುರುದ್ವಾರದಲ್ಲಿ ಸಿಖ್ ಸಂಪ್ರದಾಯದಂತೆ ಈ ಜೋಡಿ ಮತ್ತೊಮ್ಮೆ ಮದುವೆ ಆಗಲು ನಿರ್ಧಾರ ಮಾಡಿದೆ.

English summary
Mumbai man and delhi girl got married in online coronavirus lockdown because.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X