ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ ಹೈಕೋರ್ಟಿಗೆ ಪ್ರಪ್ರಥಮ ಮಹಿಳಾ ಸಿಜೆ

By Mahesh
|
Google Oneindia Kannada News

ನವದೆಹಲಿ, ಏ.21: ದೆಹಲಿ ಹೈಕೋರ್ಟಿನಲ್ಲಿ ಸೋಮವಾರ ಹೊಸ ಇತಿಹಾಸ ಸೃಷ್ಟಿಯಾಗಿದೆ. ಹೈದರಾಬಾದ್ ಮೂಲದ ಜಸ್ಟೀಸ್ ಜಿ. ರೋಹಿಣಿ ಅವರು ದೆಹಲಿ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ಸ್ಥಾನವನ್ನು ಅಲಂಕರಿಸಿದ್ದಾರೆ.

ಲೆ. ಗವರ್ನರ್ ನಜೀಬ್ ಜಂಗ್ ಅವರು ಮುಖ್ಯ ನ್ಯಾಯಮೂರ್ತಿ ರೋಹಿಣಿ ಅವರಿಗೆ ಪ್ರಮಾಣ ವಚನ ಬೋಧಿಸಿದ್ದಾರೆ. ದೆಹಲಿ ಹೈಕೋರ್ಟಿನ 40 ಜಡ್ಜ್ ಗಳ ಪೈಕಿ 10ನೇ ಮಹಿಳಾ ಜಡ್ಜ್ ಆಗಿರುವ ರೋಹಿಣಿ ಅವರು ಮುಂದಿನ ನಾಲ್ಕು ವರ್ಷಗಳ ಕಾಲ ಮುಖ್ಯ ನ್ಯಾಯಮೂರ್ತಿ ಕಾರ್ಯನಿರ್ವಹಿಸಲಿದ್ದಾರೆ.

1955ರಲ್ಲಿ ಜನಿಸಿದ ರೋಹಿಣಿ ಅವರು ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಹಾಗೂ ವಿಶಾಖಪಟ್ಟಣಂನ ಆಂಧ್ರ ವಿವಿಯ ಕಾಲೇಜ್ ಆಫ್ ಲಾ ನಲ್ಲಿ ವ್ಯಾಸಂಗ ಮಾಡಿದ್ದಾರೆ. 1980ರಲ್ಲಿ ಅಡ್ವೋಕೇಟ್ ಆಗಿ ವೃತ್ತಿ ಆರಂಭಿಸಿದ ರೋಹಿಣಿ ಅವರು ಆಂಧ್ರಪ್ರದೇಶ ರಾಜ್ಯ ಬಾರ್ ಕೌನ್ಸಿಲ್ ಚೇರ್ಮನ್ ಆಗಿದ್ದರು. 1995ರಲ್ಲಿ ರಾಜ್ಯ ಸರ್ಕಾರದ ಪರ ವಕೀಲರಾಗಿ ಹೈಕೋರ್ಟ್ ನಲ್ಲಿ ಕಾರ್ಯ ನಿರ್ವಹಿಸಿದ್ದರು. 2001ರಲ್ಲಿ ಹೆಚ್ಚುವರಿ ನ್ಯಾಯಾಧೀಶೆಯಾಗಿ 2002ರಲ್ಲಿ ಶಾಶ್ವತ ಜಡ್ಜ್ ಆಗಿ ಬಡ್ತಿ ಹೊಂದಿದ್ದಾರೆ.

ದೆಹಲಿಯಲ್ಲಿ ಮುಖ್ಯ ನ್ಯಾಯಮೂರ್ತಿಯಾಗಿದ್ದ ವಿ. ರಮಣ ಅವರು ಸುಪ್ರೀಂಕೋರ್ಟಿಗೆ ಬಡ್ತಿ ಪಡೆದಿದ್ದಾರೆ. ಜಸ್ಟೀಸ್ ಬಾದರ್ ಡರೇಜ್ ಅಹ್ಮದ್ ಅವರು ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.

ದೇಶದ ಮೊದಲ ಮಹಿಲಾ ಸಿಜೆ ಯಾರು?: ದೆಹಲಿ ಸಿಟ್ಟಿಂಗ್ ಜಡ್ಜ್ ಆಗಿದ್ದ ಜಸ್ಟೀಸ್ ಲೈಲಾ ಸೇಠ್ ಅವರು ಹಿಮಾಚಲ ಪ್ರದೇಶದ ಮುಖ್ಯ ನ್ಯಾಯಮೂರ್ತಿ ಸ್ಥಾನಕ್ಕೇರಿದ್ದರು. ದೆಹಲಿ ಹೈಕೋರ್ಟಿನ ಪ್ರಪ್ರಥಮ ಸಿಜೆಯಾಗಿರುವ ರೋಹಿಣಿ ಅವರ ಪದಗ್ರಹಣ ಸಮಾರಂಭದಲ್ಲಿ ಅವರ ಕುಟುಂಬ ವರ್ಗ ಕೂಡಾ ಪಾಲ್ಗೊಂಡಿತ್ತು. ಈ ಸಮಾರಂಭದ ಒಂದಷ್ಟು ಚಿತ್ರಗಳು ನಿಮ್ಮ ಮುಂದಿದೆ ನೋಡಿ..

ದೆಹಲಿ ಹೈಕೋರ್ಟ್ ಇತಿಹಾಸ ಹೀಗಿದೆ

ದೆಹಲಿ ಹೈಕೋರ್ಟ್ ಇತಿಹಾಸ ಹೀಗಿದೆ

ಸ್ವಾತಂತ್ರ ಪೂರ್ವದಲ್ಲಿ ಹೈಕೋರ್ಟ್ ನ್ಯಾಯಪೀಠ ಲಾಹೋರ್ ನಲ್ಲಿ ನೆಲೆಸಿತ್ತು. 1919ರಿಂದ ಲಾಹೋರ್ ಹೈಕೋರ್ಟ್ ಕಾರ್ಯ ನಿರ್ವಹಿಸುತ್ತಿತ್ತು. 1947ರಲ್ಲಿ ಭಾರತಕ್ಕೆ ಸ್ವಾತಂತ್ರ ಸಿಕ್ಕ ನಂತರ ದೆಹಲಿಗೆ ಪ್ರತ್ಯೇಕ ಹೈಕೋರ್ಟ್ ಬೇಡಿಕೆ ಬಂದಿತ್ತು. ಆದರೆ, 1966ರ ತನಕ ಪೂರ್ವ ಪಂಜಾಬ್ ನ್ಯಾಯಲಯವಾಗೇ ಮುಂದುವರೆಯಿತು. 1966ರ ಅಕ್ಟೋಬರ್ 31ರಂದು ನಾಲ್ವರು ಜಸ್ಟೀಸ್ ಗಳಾದ ಕೆ.ಎಸ್ ಹೆಗ್ಡೆ, ಐಡಿ ದುವಾ, ಎಚ್ ಆರ್ ಖನ್ನ ಹಾಗೂ ಎಸ್ ಕೆ ಕಾಪೂರ್ ಅವರ ನೇತೃತ್ವದಲ್ಲಿ ಹೈಕೋರ್ಟ್ ಕಾರ್ಯ ನಿರ್ವಹಿಸಲು ಆರಂಭಿಸಿತು. ಈ ಪೈಕಿ ಕೆ.ಎಸ್ ಹೆಗ್ಡೆ ಅವರು ಕರ್ನಾಟಕದ ನಿಕಟಪೂರ್ವ ಲೋಕಾಯುಕ್ತ ಸಂತೋಷ್ ಹೆಗ್ಡೆ ಅವರ ತಂದೆಯವರಾಗಿದ್ದಾರೆ.

ಅಮ್ಮನ ಪ್ರೀತಿಯ ಅಪ್ಪುಗೆಯಲ್ಲಿ ರೋಹಿಣಿ

ಅಮ್ಮನ ಪ್ರೀತಿಯ ಅಪ್ಪುಗೆಯಲ್ಲಿ ರೋಹಿಣಿ

ಅಮ್ಮನ ಪ್ರೀತಿಯ ಅಪ್ಪುಗೆ ಆನಂದವನ್ನು ದೆಹಲಿ ಸಿಜೆ ಜಿ.ರೋಹಿಣಿ ಅನುಭವಿಸಿದರು.

ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ಸ್ಥಾನ

ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ಸ್ಥಾನ

ದೆಹಲಿ ಹೈಕೋರ್ಟಿನಲ್ಲಿ ಸೋಮವಾರ ಹೊಸ ಇತಿಹಾಸ ಸೃಷ್ಟಿಯಾಗಿದೆ. ಹೈದರಾಬಾದ್ ಮೂಲದ ಜಸ್ಟೀಸ್ ಜಿ. ರೋಹಿಣಿ ಅವರು ದೆಹಲಿ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ಸ್ಥಾನವನ್ನು ಅಲಂಕರಿಸಿದ್ದಾರೆ. ಈ ಸಂದರ್ಭದಲ್ಲಿ ಅವರ ತಾಯಿ ಅವರು ಉಪಸ್ಥಿತರಿದ್ದರು.PTI Photo by Subhav Shukla

ರೋಹಿಣಿ ಅವರಿಗೆ ಪ್ರಮಾಣ ವಚನ

ರೋಹಿಣಿ ಅವರಿಗೆ ಪ್ರಮಾಣ ವಚನ

ಲೆ. ಗವರ್ನರ್ ನಜೀಬ್ ಜಂಗ್ ಅವರು ಮುಖ್ಯ ನ್ಯಾಯಮೂರ್ತಿ ರೋಹಿಣಿ ಅವರಿಗೆ ಪ್ರಮಾಣ ವಚನ ಬೋಧಿಸಿದ್ದಾರೆ. ದೆಹಲಿಯಲ್ಲಿ ಮುಖ್ಯ ನ್ಯಾಯಮೂರ್ತಿಯಾಗಿದ್ದ ವಿ. ರಮಣ ಅವರು ಸುಪ್ರೀಂಕೋರ್ಟಿಗೆ ಬಡ್ತಿ ಪಡೆದಿದ್ದಾರೆ. ಜಸ್ಟೀಸ್ ಬಾದರ್ ಡರೇಜ್ ಅಹ್ಮದ್ ಅವರು ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ರಮಣ ಅವರು ಕೂಡಾ ಆಂಧ್ರಪ್ರದೇಶ ಮೂಲದವರಾಗಿದ್ದಾರೆ.

English summary
Justice G Rohini was on Monday sworn in as the first woman Chief Justice of the Delhi High Court. 58-year-old Justice Rohini, who was earlier a judge of the Andhra Pradesh High Court, succeeds NV Ramana.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X