ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಿಪೇರಿ ವೇಳೆ ಏರ್ ಇಂಡಿಯಾ ವಿಮಾನದಲ್ಲಿ ಬೆಂಕಿ: ವೈರಲ್ ವಿಡಿಯೋ

|
Google Oneindia Kannada News

ನವದೆಹಲಿ, ಏಪ್ರಿಲ್ 25: ದೆಹಲಿ ವಿಮಾನ ನಿಲ್ದಾಣದಲ್ಲಿ ನಿಲ್ಲಿಸಿದ್ದ ಏರ್ ಇಂಡಿಯಾ ವಿಮಾನವನ್ನು ದುರಸ್ತಿ ಮಾಡುವ ಸಂದರ್ಭದಲ್ಲಿ ಅದರ ಆಕ್ಸಿಲರಿ ಪವರ್ ಯುನಿಟ್ ನಲ್ಲಿ (ಎಪಿಯು) ಬೆಂಕಿ ಕಾಣಿಸಿಕೊಂಡಿದೆ.

ಏರ್ ಇಂಡಿಯಾ ವಿಮಾನ ಬೋಯಿಂಗ್ ಬಿ777-200ಎಲ್‌ಆರ್ (ವಿಟಿ-ಎಎಲ್‌ಎಫ್) ವಿಮಾನವು ಗುರುವಾರ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋಕ್ಕೆ ತೆರಳಬೇಕಿತ್ತು. ಬುಧವಾರ ರಾತ್ರಿ ವಿಮಾನದ ದುರಸ್ತಿ ಕಾರ್ಯ ನಡೆದಿತ್ತು. ಆಗ ವಿಮಾನ ಇನ್ನೂ ನಿಲ್ದಾಣದಲ್ಲಿ ಬೇದಲ್ಲಿಯೇ ಇತ್ತು. ಈ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡಿದೆ.

ಏರ್ ಇಂಡಿಯಾದಲ್ಲಿ ಕುಡಿದು ರಂಪಾಟ: ಐರಿಶ್ ವಕೀಲೆಗೆ ಜೈಲು ಶಿಕ್ಷೆ ಏರ್ ಇಂಡಿಯಾದಲ್ಲಿ ಕುಡಿದು ರಂಪಾಟ: ಐರಿಶ್ ವಕೀಲೆಗೆ ಜೈಲು ಶಿಕ್ಷೆ

ನಿರ್ವಹಣಾ ಕಾರ್ಯ ಸಾಗುತ್ತಿತ್ತು. ಬೆಂಕಿ ಕಾಣಿಸಿಕೊಂಡ ಸಂದರ್ಭದಲ್ಲಿ ವಿಮಾನದಲ್ಲಿ ಯಾವುದೇ ಪ್ರಯಾಣಿಕರು ಇರಲಿಲ್ಲ ಎಂದು ಏರ್ ಇಂಡಿಯಾ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

Delhi fire in Air India bound for San Francisco during repair work video

ದೆಹಲಿಯಲ್ಲಿ ಬುಧವಾರ ರಾತ್ರಿ ವಿಮಾನದ ಎಪಿಯು ಸ್ವಯಂಚಾಲಿತವಾಗಿ ಸ್ಥಗಿತಗೊಳ್ಳುವ ಜಾಗದಲ್ಲಿ ಎಂಜಿನಿಯರ್ ಒಬ್ಬರು ತಾಂತ್ರಿಕ ಪರಿಶೀಲನೆ ನಡೆಸುತ್ತಿದ್ದರು. ವಿಮಾನದ ಹವಾ ನಿಯಂತ್ರಕವನ್ನು ದುರಸ್ತಿ ಮಾಡುತ್ತಿದ್ದರು. ಆಗ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದ್ದು, ವಿಮಾನನಿಲ್ದಾಣದ ಅಗ್ನಿಶಾಮಕ ಸಿಬ್ಬಂದಿ ಕಪ್ಪು ಹೊಗೆ ಬರುವುದನ್ನು ಗಮನಿಸಿದರು. ಕೂಡಲೇ ಅಗ್ನಿ ನಂದಕದ ಸಹಾಯದಿಂದ ಅದನ್ನು ಆರಿಸಿದರು ಎಂದು ಏರ್ ಇಂಡಿಯಾ ನೀಡಿರುವ ಹೇಳಿಕೆ ತಿಳಿಸಿದೆ.

ತಾಂತ್ರಿಕ ದೋಷ: 20,000ಅಡಿ ಮೇಲೆ ಹಾರಿ,ವಾಪಸ್ಸಾದ ಏರ್ ಇಂಡಿಯಾ ವಿಮಾನ ತಾಂತ್ರಿಕ ದೋಷ: 20,000ಅಡಿ ಮೇಲೆ ಹಾರಿ,ವಾಪಸ್ಸಾದ ಏರ್ ಇಂಡಿಯಾ ವಿಮಾನ

ಈ ಘಟನೆ ಬಳಿಕ ಎಪಿಯುವನ್ನು ಕೂಲಂಕಷವಾಗಿ ತಪಾಸಣೆ ನಡೆಸಲಾಯಿತು. ಆದರೆ ಅದರ ಒಳಗೆ ಸುಟ್ಟ ಕುರುಹು ಕಂಡುಬಂದಿಲ್ಲ. ಅಲ್ಪಸ್ವಲ್ಪ ತೈಲ ಸೋರಿಕೆ ಕುರುಹಗಳ ಹೊರತಾಗಿ ಬೇರೆ ಯಾವುದೇ ಬಾಹ್ಯ ಹಾನಿ ಉಂಟಾಗಿಲ್ಲ. ಉಳಿದಂತೆ ಯಾವುದೇ ಸಮಸ್ಯೆ ಇಲ್ಲ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅದು ವಿವರಿಸಿದೆ.

ಪ್ರಧಾನಿ ನರೇಂದ್ರ ಮೋದಿ ವಿಮಾನಯಾನ ಖರ್ಚು ವೆಚ್ಚ ಬಹಿರಂಗ ಪ್ರಧಾನಿ ನರೇಂದ್ರ ಮೋದಿ ವಿಮಾನಯಾನ ಖರ್ಚು ವೆಚ್ಚ ಬಹಿರಂಗ

ಈ ಘಟನೆಯ ವಿಡಿಯೋ ಈಗ ಎಲ್ಲೆಡೆ ಹರಿದಾಡುತ್ತಿದೆ. 42 ಸೆಕೆಂಡ್‌ಗಳ ವಿಡಿಯೋದಲ್ಲಿ ವಿಮಾನದ ಹಿಂಬದಿಯಲ್ಲಿ ಬೆಂಕಿ ಉರಿಯುತ್ತಿರುವುದು ಮತ್ತು ಅದನ್ನು ಅಗ್ನಿಶಾಮಕ ಸಿಬ್ಬಂದಿ ಆರಿಸುತ್ತಿರುವ ದೃಶ್ಯವನ್ನು ಸೆರೆ ಹಿಡಿಯಲಾಗಿದೆ.

English summary
A Delhi to San Francisco aircraft of Air India caught fire in APU during its maintenance work. There were no passengers on the plane at the time of the incident.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X