ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ: ಫಿಟ್ನೆಸ್ ಪ್ರಮಾಣಪತ್ರವಿಲ್ಲದ ವಾಹನ ಓಡಿಸಿದರೆ 10,000 ರೂ.ವರೆಗೆ ದಂಡ, ಜೈಲು

|
Google Oneindia Kannada News

ಫಿಟ್‌ನೆಸ್ ಪ್ರಮಾಣಪತ್ರವಿಲ್ಲದೆ ಸಾರಿಗೆ ವಾಹನಗಳನ್ನು ಓಡಿಸುವವರ ವಿರುದ್ಧ ದೆಹಲಿ ಸಾರಿಗೆ ಇಲಾಖೆ ಇದೀಗ ಕಠಿಣ ಕ್ರಮಕ್ಕೆ ಮುಂದಾಗಿದೆ. ಫಿಟ್‌ನೆಸ್ ಪ್ರಮಾಣಪತ್ರವಿಲ್ಲದ ಸಾರಿಗೆ ವಾಹನಗಳ ಮಾಲೀಕರು ಮತ್ತು ಚಾಲಕರು 10,000 ರೂ.ವರೆಗೆ ದಂಡ ಮತ್ತು ಜೈಲು ಶಿಕ್ಷೆಗೆ ಅರ್ಹರಾಗುತ್ತಾರೆ ಎಂದು ದೆಹಲಿ ಸಾರಿಗೆ ಇಲಾಖೆಯು ಎಚ್ಚರಿಕೆ ನೀಡಿದೆ.

ಮೋಟಾರು ವಾಹನಗಳ (ಎಂವಿ) ಕಾಯ್ದೆಯನ್ನು ಉಲ್ಲಂಘಿಸಿ ಮಾನ್ಯ ಫಿಟ್‌ನೆಸ್ ಪ್ರಮಾಣ ಪತ್ರವಿಲ್ಲದೆ ಇಂತಹ ಹಲವು ವಾಹನಗಳು ರಸ್ತೆಯಲ್ಲಿ ಸಂಚರಿಸುತ್ತಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಇಲಾಖೆ ಈ ಕ್ರಮ ಕೈಗೊಂಡಿದೆ. ದೆಹಲಿ ಸರ್ಕಾರದ ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು, ರಸ್ತೆಗಳಲ್ಲಿ ಅಂತಹ ವಾಹನಗಳ ಹುಡುಕಾಟವನ್ನು ಮುಂದುವರಿಸಲು ನಮ್ಮ ತಂಡಗಳಿಗೆ ತಿಳಿಸಲಾಗಿದೆ. ಹೀಗಾಗಿ ಶೀಘ್ರದಲ್ಲೇ ನಿಮಯ ಉಲ್ಲಂಘಿಸುವವರನ್ನು ಹಿಡಿಯುವ ಕೆಲಸವನ್ನು ಪ್ರಾರಂಭಿಸಲಾಗುವುದು ಎಂದು ಹೇಳಿದರು.

Delhi: Fine up to Rs 10,000, jail for those found plying transport vehicles sans fitness certificate

ಸಾರಿಗೆ ಇಲಾಖೆಯು ಇತ್ತೀಚೆಗೆ ಹೊರಡಿಸಿದ ಸಾರ್ವಜನಿಕ ಪ್ರಕಟಣೆಯಲ್ಲಿ "ಸರಕಾರಿ ಇಲಾಖೆಗಳು, ಸ್ಥಳೀಯ ಸಂಸ್ಥೆಗಳು ಮತ್ತು ಸಾರ್ವಜನಿಕ ವಲಯದ ಘಟಕಗಳಿಗೆ ಸೇರಿದ ಸಾರಿಗೆ ವಾಹನಗಳು ಸೇರಿದಂತೆ ಅನೇಕ ಮಾಲೀಕರು ಅಥವಾ ಚಾಲಕರು ಫಿಟ್‌ನೆಸ್ ಪ್ರಮಾಣ ಪತ್ರವಿಲ್ಲದೆ ವಾಹನ ಚಲಾಯಿಸುತ್ತಿರುವುದು ಸಾರಿಗೆ ಇಲಾಖೆಯಿಂದ ಗಮನಿಸಲ್ಪಟ್ಟಿದೆ," ಎಂದು ಹೇಳುತ್ತದೆ. ಇದು ಮೋಟಾರು ವಾಹನಗಳ ಕಾಯಿದೆ, 1988 ರ ಸಂಪೂರ್ಣ ಉಲ್ಲಂಘನೆಯಾಗಿದೆ.

Delhi: Fine up to Rs 10,000, jail for those found plying transport vehicles sans fitness certificate

ಹೀಗಾಗಿ ಸಾರ್ವಜನಿಕ ಸೇವಾ ವಾಹನಗಳು, ಸರಕು ವಾಹನಗಳು, ಬಸ್‌ಗಳು ಮತ್ತು ಶಾಲಾ ಕಾಲೇಜುಗಳ ಕ್ಯಾಬ್‌ಗಳನ್ನು ಬಳಸುವ ಎಲ್ಲಾ ವಾಹನ ಮಾಲೀಕರು ಮತ್ತು ಚಾಲಕರು ಮಾನ್ಯವಾದ ವಾಹನ ಫಿಟ್‌ನೆಸ್ ಪ್ರಮಾಣಪತ್ರವನ್ನು ಹೊಂದಿರಬೇಕು. MV ಕಾಯಿದೆಯ ಸೆಕ್ಷನ್ 56 ರ ಪ್ರಕಾರ, ಸಾರಿಗೆ ವಾಹನವು ದೆಹಲಿ ಸರ್ಕಾರದ ಸಾರಿಗೆ ಇಲಾಖೆಯಿಂದ ನೀಡಲಾದ ಮಾನ್ಯವಾದ ಫಿಟ್‌ನೆಸ್ ಪ್ರಮಾಣಪತ್ರವನ್ನು ಹೊಂದಿಲ್ಲದಿದ್ದರೆ ಅಂತವರ ವಿರುದ್ಧ ಕ್ರಮ ಹಾಗೂ ದಂಡ ವಿಧಿಸಲಾಗುತ್ತದೆ ಎಂದು ನೋಟಿಸ್ ಹೇಳುತ್ತದೆ.

English summary
Owners and drivers of transport vehicles without a fitness certificate will face a fine and jail sentence of up to Rs 10,000, the Delhi Transport Department has warned.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X