ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ: ಬ್ರಿಟನ್‌ನಿಂದ ಬಂದವರಿಗೆ 14 ದಿನಗಳ ಕ್ವಾರಂಟೈನ್ ಆದೇಶ ವಿಸ್ತರಣೆ

|
Google Oneindia Kannada News

ನವದೆಹಲಿ, ಜನವರಿ 15: ಬ್ರಿಟನ್‌ನಿಂದ ದೆಹಲಿಗೆ ಬಂದವರು 14 ದಿನಗಳ ಕಾಲ ಕ್ವಾರಂಟೈನ್‌ನಲ್ಲಿರಬೇಕು ಎಂಬ ಆದೇಶವನ್ನು ದೆಹಲಿ ಸರ್ಕಾರ ವಿಸ್ತರಿಸಿದೆ.

ಈ ಆದೇಶ ಜನವರಿ 31ರವರೆಗೆ ಮುಂದುವರೆಯಲಿದೆ. ದೇಶಾದ್ಯಂತ 109 ರೂಪಾಂತರಿ ಕೊರೊನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಕಳೆದ 24 ಗಂಟೆಗಳಲ್ಲಿ ಏಳು ಪ್ರಕರಣಗಳು ಪತ್ತೆಯಾಗಿವೆ.

ಗರ್ಭಿಣಿಯರಿಗೆ ಕೊರೊನಾ ಲಸಿಕೆ ನೀಡುವುದು ಬೇಡ: ಆರೋಗ್ಯ ಸಚಿವಾಲಯಗರ್ಭಿಣಿಯರಿಗೆ ಕೊರೊನಾ ಲಸಿಕೆ ನೀಡುವುದು ಬೇಡ: ಆರೋಗ್ಯ ಸಚಿವಾಲಯ

ರೂಪಾಂತರಿ ಸೋಂಕು ಈಗಾಗಲೇ ಸ್ಪೇನ್, ಡೆನ್‌ಮಾರ್ಕ್, ಆಸ್ಟ್ರೇಲಿಯಾ, ಇಟಲಿ, ಸ್ವೀಡನ್, ಫ್ರಾನ್ಸ್, ಜರ್ಮನಿ, ಜಪಾನ್, ಸೀಮಗಾಪುರಕ್ಕೆ ತಲುಪಿದೆ. ಡಿಸೆಂಬರ್ 23 ರಿಂದ ಜನವರಿ 7ರವರೆಗೆ ಭಾರತವು ಯುಕೆ ವಿಮಾನಗಳಿಗೆ ನಿರ್ಬಂಧ ಹೇರಿತ್ತು.

Delhi Extends 14-Day Quarantine Order On UK Passengers Till January 31

ದೆಹಲಿಯ ಸಿಎಸ್ ಐಆರ್-ಇನ್ಸ್ ಟಿಟ್ಯೂಟ್ ಆಫ್ ಜಿನೊಮಿಕ್ಸ್ ಅಂಡ್ ಇಂಟಗ್ರೇಟಿವ್ ಬಯೊಲಜಿ( (CSIR-IGIB)ಮತ್ತು ಸ್ಪೈಸ್ ಹೆಲ್ತ್ ಆರಂಭಿಸಿದೆ.

ಬ್ರಿಟನ್ ನಲ್ಲಿ ಕಾಣಿಸಿಕೊಂಡು ವಿಶ್ವಾದ್ಯಂತ ಭೀತಿ ಸೃಷ್ಟಿಸಿರುವ ರೂಪಾಂತರಿತ ಕೊರೋನಾ ವೈರಸ್ ಪತ್ತೆಹಚ್ಚಿ ನಿಯಂತ್ರಿಸಲು ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಡಿಎನ್‌ಎ ನ್ಯೂಕ್ಲಿಯೋಟೈಡ್‌ಗಳು(ಜಿನೊಮೆ ಅನುಕ್ರಮ)ವನ್ನು ಆರಂಭಿಸಲಾಗಿದೆ.

ಜನವರಿ 16 ರಂದು ದೇಶಾದ್ಯಂತ ಕೊರೊನಾ ಲಸಿಕೆ ನೀಡಲಾಗುತ್ತಿದ್ದು, ಮೊದಲ ದಿನ 3 ಲಕ್ಷ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುತ್ತಿದೆ. ಆರಂಭದ ದಿನ 2,934 ಕೇಂದ್ರಗಳಲ್ಲಿ ಸುಮಾರು 3 ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ಚುಚ್ಚುಮದ್ದು ಹಾಕಲು ಕೇಂದ್ರ ಸರ್ಕಾರ ಯೋಜಿಸಿದೆ.

ಜ.16ರಂದು ಕೋವಿಡ್ ಲಸಿಕೆ ನೀಡಲು ಮೈಸೂರು ಜಿಲ್ಲಾಡಳಿತ ಸಜ್ಜು ನಿರ್ದಿಷ್ಟ ಸುರಕ್ಷತೆ ಮತ್ತು ಶಕ್ತಿವರ್ಧಕ ಮೌಲ್ಯ ಹೆಚ್ಚಿಸುವ ನಿಯಂತ್ರಕ ಪ್ರಕ್ರಿಯೆಗಳ ಮೂಲಕ ದೇಶದಲ್ಲಿ ಕೋವಿಶೀಲ್ಡ್ ಮತ್ತು ಕೊವಾಕ್ಸಿನ್ ಲಸಿಕೆಗಳ ತುರ್ತು ಪ್ರಯೋಗಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಲಸಿಕೆಗೆ 200ರಿಂದ 295 ರೂಪಾಯಿ ವೆಚ್ಚವಾಗಬಹುದು.

English summary
Delhi has extended the "14-day quarantine" order on passengers arriving from the United Kingdom till January 31. The quarantine was placed following the spread of a highly infectious strain of the virus in the UK.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X