• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಎಲೆಕ್ಟ್ರಿಕ್ ಕಾರು ಖರೀದಿಗೆ ಸರ್ಕಾರದಿಂದ 1.5ಲಕ್ಷ ರೂಪಾಯಿ ರಿಯಾಯಿತಿ

|

ನವದೆಹಲಿ, ಆಗಸ್ಟ್‌ 07: ದೇಶದಲ್ಲಿ ವಾಯು ಮಾಲಿನ್ಯವನ್ನು ತಗ್ಗಿಸಲು, ತೈಲ ಆಮದನ್ನು ಕಡಿಮೆಗೊಳಿಸಲು ಎಲೆಕ್ಟ್ರಿಕ್ ವಾಹನಗಳಿಗೆ ಕೇಂದ್ರ ಸರ್ಕಾರ ಪ್ರಾಶಸ್ತ್ಯ ನೀಡುತ್ತಿದೆ. ಇದೇ ಭಾಗವಾಗಿ ದೆಹಲಿ ಸರ್ಕಾರವು ಮಾಲಿನ್ಯವನ್ನು ಕಡಿಮೆ ಮಾಡಲು ವೇಗವಾಗಿ ಕೆಲಸ ಪ್ರಾರಂಭಿಸಿದೆ.

ರಾಷ್ಟ್ರ ರಾಜಧಾನಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬದಲಿಗೆ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವ ಬಗ್ಗೆ ಯೋಚಿಸುತ್ತಿದ್ದವರಿಗೆ ಸರ್ಕಾರ ಆಫರ್ ನೀಡಿದ್ದು, ಯೋಜನೆಯ ಲಾಭ ಪಡೆದುಕೊಳ್ಳಬಹುದಾಗಿದೆ.

ಹೊಸ ಆವೃತ್ತಿಯ ಬಜಾಜ್ KTM 250 ಡ್ಯೂಕ್‌ ಬೈಕ್ ಬಿಡುಗಡೆ

ದೆಹಲಿಯ ಎಲೆಕ್ಟ್ರಿಕ್ ವೆಹಿಕಲ್ ಪಾಲಿಸಿಯನ್ನು ತಿಳಿಸಿದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಮಾಲಿನ್ಯವನ್ನು ನಿಲ್ಲಿಸಿ ಆರ್ಥಿಕತೆಯನ್ನು ವೇಗಗೊಳಿಸುವುದು ಅವರ ಉದ್ದೇಶವಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ, ಯಾವ ಎಲೆಕ್ಟ್ರಿಕ್ ವಾಹನಗಳಿಗೆ ಎಷ್ಟು ರಿಯಾಯಿತಿ ಸಿಗುತ್ತದೆ ಎಂದು ತಿಳಿಸಲಾಗಿದೆ.

tweet:

ಎಲೆಕ್ಟ್ರಿಕ್ ವಾಹನಗಳಿಗೆ ಎಷ್ಟು ರಿಯಾಯಿತಿ:

ಎಲೆಕ್ಟ್ರಿಕ್ ಬೈಕ್‌ಗೆ 30 ಸಾವಿರ ರಿಯಾಯಿತಿ

ಎಲೆಕ್ಟ್ರಿಕ್ ಕಾರಿನ ಮೇಲೆ 1.5ಲಕ್ಷ ರಿಯಾಯಿತಿ

ಎಲೆಕ್ಟ್ರಿಕ್ ಆಟೋಗೆ 30 ಸಾವಿರ ವರೆಗೆ ರಿಯಾಯಿತಿ

ಎಲೆಕ್ಟ್ರಿಕ್ ಸರಕು ವಾಹನಗಳಿಗೆ 30 ಸಾವಿರ ವರೆಗೆ ರಿಯಾಯಿತಿ

English summary
Delhi Chief Minister Arvind Kejriwal, in a press conference today, announced that Delhi Government has notified the Electric Vehicle Policy for the national capital to promote the use of electric vehicles. Incentive Upto Rs 1.5 Lakh On EVs
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X