ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟೈಮ್ಸ್‌ ನೌ ಸಮೀಕ್ಷೆ; ದೆಹಲಿಯಲ್ಲಿ ಎಎಪಿ ಜಯಭೇರಿ

|
Google Oneindia Kannada News

Recommended Video

ದೆಹಲಿಯಲ್ಲಿ ಮೋದಿ, ಅಮಿತ್ ಶಾಗೆ ಆಗಲಿದೆ ಭಾರೀ ಮುಖಭಂಗ | AAP | BJP | Delhi Election | Oneindia Kannada

ನವದೆಹಲಿ, ಫೆಬ್ರವರಿ 04 : ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಸ್ಪಷ್ಟ ಬಹುಮತ ಪಡೆಯಲಿದೆ ಎಂದು ಚುನಾವಣಾ ಪೂರ್ವ ಸಮೀಕ್ಷೆ ಹೇಳಿದೆ. 70 ಸದಸ್ಯ ಬಲದ ವಿಧಾನಸಭೆಗೆ ಫೆಬ್ರವರಿ 8ರಂದು ಚುನಾವಣೆ ನಡೆಯಲಿದೆ.

ರಾಷ್ಟ್ರೀಯ ಸುದ್ದಿ ವಾಹಿನಿ ಟೈಮ್ಸ್ ನೌ ದೆಹಲಿ ವಿಧಾನಸಭೆ ಚುನಾವಣೆ ಬಗ್ಗೆ ಚುನಾವಣೋತ್ತರ ಸಮೀಕ್ಷೆಯನ್ನು ನಡೆಸಿದೆ. ಮತದಾನಕ್ಕೆ ನಾಲ್ಕು ದಿನ ಇರುವಾಗ ಪ್ರಕಟವಾದ ಸಮೀಕ್ಷೆಯಲ್ಲಿ ಆಮ್‌ ಆದ್ಮಿ ಪಕ್ಷಕ್ಕೆ ಜನರ ಬೆಂಬಲ ಸಿಗಲಿದೆ.

ದೆಹಲಿ ಚುನಾವಣೆ: ಕೇಜ್ರಿವಾಲ್ ಗೆ ಶುಭ ಸುದ್ದಿ ಕೊಟ್ಟ ಸಮೀಕ್ಷೆದೆಹಲಿ ಚುನಾವಣೆ: ಕೇಜ್ರಿವಾಲ್ ಗೆ ಶುಭ ಸುದ್ದಿ ಕೊಟ್ಟ ಸಮೀಕ್ಷೆ

ಆಮ್ ಆದ್ಮಿ ಪಕ್ಷ 54 ರಿಂದ 60 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಸಮೀಕ್ಷೆಯ ವರದಿ ಹೇಳಿದೆ. ಈಗಾಗಲೇ ದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ ಸರ್ಕಾರವೇ ಇದೆ. ಹಲವು ಸಮೀಕ್ಷೆಗಳು ಸಹ ಎಎಪಿ ಸರ್ಕಾರ ರಚನೆ ಮಾಡಲಿದೆ ಎಂದು ಹೇಳಿತ್ತು.

ದೆಹಲಿ ಚುನಾವಣೆಗಾಗಿ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾ ಪ್ರಚಾರ ನಡೆಸಲಿದ್ದಾರೆ. ಕೊನೆ ಕ್ಷಣದ ಪ್ರಚಾರ ಫಲ ಕೊಡಲಿದೆಯೇ? ಕಾದು ನೋಡಬೇಕು.

ಯಾವ ಪಕ್ಷಕ್ಕೆ ಎಷ್ಟು ಸ್ಥಾನ?

ಯಾವ ಪಕ್ಷಕ್ಕೆ ಎಷ್ಟು ಸ್ಥಾನ?

ಟೈಮ್ಸ್‌ ನೌ ಸಮೀಕ್ಷೆ ಪ್ರಕಾರ ಎಎಪಿ 54-60, ಬಿಜೆಪಿ 10-14, ಕಾಂಗ್ರೆಸ್ 2 ಸ್ಥಾನಗಳಲ್ಲಿ ಜಯಗಳಿಸಲಿದೆ. ಪಕ್ಷೇತರರು ಯಾವುದೇ ಸ್ಥಾನದಲ್ಲಿ ಜಯಗಳಿಸುವುದಿಲ್ಲ ಎಂದು ಸಮೀಕ್ಷೆ ಹೇಳಿದೆ. ದೆಹಲಿ ವಿಧಾನಸಭೆಯ ಸದಸ್ಯ ಬಲ 70. ಸಮೀಕ್ಷೆ ಪ್ರಕಾರ ಆಮ್‌ ಆದ್ಮಿ ಪಕ್ಷ ಸ್ಪಷ್ಟ ಬಹುಮತವನ್ನು ಪಡೆಯಲಿದೆ.

ಮತಗಳಿಕೆ ಲೆಕ್ಕಾಚಾರ

ಮತಗಳಿಕೆ ಲೆಕ್ಕಾಚಾರ

ಟೈಮ್ಸ್‌ ನೌ ಸಮೀಕ್ಷೆ ಪ್ರಕಾರ ಆಮ್ ಆದ್ಮಿ ಪಕ್ಷ ಶೇ 52, ಬಿಜೆಪಿ ಶೇ 34, ಕಾಂಗ್ರೆಸ್ ಶೇ 4, ಇತರರು ಶೇ 1ರಷ್ಟು ಮತವನ್ನುಗಳಿಕೆ ಮಾಡಲಿದ್ದಾರೆ. 2015ಕ್ಕೆ ಹೋಲಿಕೆ ಮಾಡಿದರೆ ಎಎಪಿ ಮತಗಳಿಕೆ ಪ್ರಮಾಣ 2.5ರಷ್ಟು ಕಡಿಮೆಯಾಗಲಿದ್ದು, ಬಿಜೆಪಿ 1.7ರಷ್ಟುಗಳಿಕೆಯನ್ನು ಕಾಣಲಿದೆ.

ಬಿಜೆಪಿಗೆ ಎಲ್ಲಾ ಸೀಟು

ಬಿಜೆಪಿಗೆ ಎಲ್ಲಾ ಸೀಟು

ಈ ಸಮೀಕ್ಷೆಯಲ್ಲಿ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 10-14 ಸೀಟು ಗೆಲ್ಲಬಹುದು ಎಂಬ ವರದಿ ಬಂದಿದೆ. ಆದರೆ, ಈಗಲೇ ಲೋಕಸಭೆ ಚುನಾವಣೆ ನಡೆದರೆ ಬಿಜೆಪಿಯು ಎಲ್ಲಾ 7 ಸ್ಥಾನಗಳಲ್ಲಿ ಜಯಗಳಿಸಲಿದೆ ಎಂದು ಸಮೀಕ್ಷೆ ಹೇಳಿದೆ.

ಸಿಎಎ ಪ್ರಭಾವ ಏನೂ ಇಲ್ಲ

ಸಿಎಎ ಪ್ರಭಾವ ಏನೂ ಇಲ್ಲ

ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆಯೂ ಸಮೀಕ್ಷೆ ವೇಳೆ ಪ್ರಶ್ನೆ ಮಾಡಲಾಗಿದೆ. ಶೇ 75ರಷ್ಟು ಜನರು ಇದು ಸರಿಯಾದ ಕ್ರಮ ಎಂದು ಬೆಂಬಲಿಸಿದ್ದಾರೆ. ಶೇ 52ರಷ್ಟು ಜನರು ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ ತಪ್ಪು ಎಂದು ಹೇಳಿದ್ದಾರೆ. ಶೇ 25ರಷ್ಟು ಜನರು ಪ್ರತಿಭಟನೆ ಸರಿ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸಮೀಕ್ಷೆ ನಡೆದಿದ್ದು ಹೇಗೆ?

ಸಮೀಕ್ಷೆ ನಡೆದಿದ್ದು ಹೇಗೆ?

ಜನವರಿ 27ರಿಂದ ಫೆಬ್ರವರಿ 1ರ ತನಕ ದೆಹಲಿಯ 7321 ಜನರ ಅಭಿಪ್ರಾಯವನ್ನು ಸಂಗ್ರಹಣೆ ಮಾಡಲಾಗಿದೆ. ದೆಹಲಿ ವಿಧಾನಸಭೆ ಚುನಾವಣೆ ಫೆಬ್ರವರಿ 8ರಂದು ನಡೆಯಲಿದ್ದು, ಫೆಬ್ರವರಿ 11ರಂದು ಫಲಿತಾಂಶ ಪ್ರಕಟವಾಗಲಿದೆ.

English summary
Times Now poll predicted that Aam Aadmi Party will win 54 to 60 seat in Delhi assembly elections 2020. Election will be held on February 8.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X