ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Delhi Election Results 2020 Live: ಗೆಲುವಿನ ಸಂಭ್ರಮಕ್ಕೆ ಪಟಾಕಿ ಬೇಡ: ಕೇಜ್ರಿವಾಲ್

|
Google Oneindia Kannada News

Recommended Video

      Delhi Assembly Election Results 2020:ಬಿಗಿ ಭದ್ರತೆ ನಡುವೆ ಮತ ಎಣಿಕೆ ಕಾರ್ಯ | Aravind Kejriwal | Modi

      ನವದೆಹಲಿ, ಫೆಬ್ರವರಿ 11: ರಾಷ್ಟ್ರರಾಜಧಾನಿಯಲ್ಲಿ ಕುತೂಹಲ ಕೆರಳಿಸಿರುವ ವಿಧಾನಸಭಾ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಲಿದೆ. ಚುನಾವಣಾ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ 'ಒನ್‌ ಇಂಡಿಯಾ ಕನ್ನಡ'ದಲ್ಲಿ ಲಭ್ಯವಾಗಲಿದೆ.

      ಐದು ವರ್ಷಗಳ ಹಿಂದೆ ಬರೋಬ್ಬರಿ 67 ಸೀಟುಗಳನ್ನು ಗೆದ್ದು ಅಭೂತಪೂರ್ವ ಗೆಲುವು ಸಾಧಿಸಿದ್ದ ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಬಹುತೇಕ ಎಲ್ಲಾ ಚುನಾವಣಾ ಸಮೀಕ್ಷೆಗಳು ಹೇಳುತ್ತಿವೆ.

      ದೆಹಲಿ ಚುನಾವಣೆ; ಎಎಪಿಗೆ ಶಕ್ತಿ ತಂದ 'TINA' ಪ್ರಚಾರ ತಂತ್ರ!ದೆಹಲಿ ಚುನಾವಣೆ; ಎಎಪಿಗೆ ಶಕ್ತಿ ತಂದ 'TINA' ಪ್ರಚಾರ ತಂತ್ರ!

      ಈ ಸಮೀಕ್ಷೆಗಳು ನಿಜವಾಗಲಿದೆಯೇ ಅಥವಾ ಬಿಜೆಪಿಯು 22 ವರ್ಷಗಳ ಬಳಿಕ ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯವಾಗಲಿದೆಯೇ ಎನ್ನುವುದು ಇಂದು ತಿಳಿಯಲಿದೆ. ಇದಲ್ಲದೆ ಈ ಹಿಂದೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ಎಷ್ಟು ಹೀನಾಯ ಸ್ಥಿತಿಗೆ ತಲುಪಲಿದೆ ಎನ್ನುವುದು ಕೂಡ ಈ ಫಲಿತಾಂಶದಿಂದ ತಿಳಿಯಲಿದೆ.

      Delhi Election Results 2020 Live Updates In Kannada

      ಒಟ್ಟಾರೆ ಪ್ರತಿಷ್ಠೆಯ ಕಣವಾಗಿರುವ ದೆಹಲಿಯು ಪ್ರಧಾನಿ ಮೋದಿ ಹಾಗೂ ಅರವಿಂದ್ ಕೇಜ್ರಿವಾಲ್ ನಡುವಿನ ಹೋರಾಟದ ಫಲಿತಾಂಶವೂ ಆಗಿರಲಿದೆ. ಕಳೆದ ಬಾರಿ ಆಮ್ ಆದ್ಮಿ ಪಕ್ಷ 67, ಬಿಜೆಪಿ 3, ಕಾಂಗ್ರೆಸ್ 0 ಸ್ಥಾನವನ್ನು ಗೆದ್ದಿತ್ತು. ದೆಹಲಿಯಲ್ಲಿ ಒಟ್ಟು 70 ವಿಧಾನಸಭಾ ಕ್ಷೇತ್ರಗಳಿಗೆ ಫೆಬ್ರವರಿ 8ರಂದು ಚುನಾವಣೆ ನಡೆದಿತ್ತು.

      Newest FirstOldest First
      10:28 PM, 11 Feb

      ದೆಹಲಿ ವಿಧಾನಸಭಾ ಚುನಾವಣೆ: ಚುನಾವಣಾ ಆಯೋಗದ ಅಧಿಕೃತ ಫಲಿತಾಂಶ ಹೊರಬಿದ್ದಿದ್ದು ಎಎಪಿಯು 62 ಸ್ಥಾನಗಳಲ್ಲಿ ಗೆದ್ದಿದೆ. ಬಿಜೆಪಿಯು 8 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.
      10:27 PM, 11 Feb

      ಎಎಪಿ ಗೆದ್ದ ಸಂಭ್ರಮದಲ್ಲಿ ಯಾರೂ ಪಟಾಕಿ ಹೊಡೆಯಬೇಡಿ ಎಂದು ಅರವಿಂದ ಕೇಜ್ರಿವಾಲ್ ಮನವಿ ಮಾಡಿದ್ದಾರೆ. ದೆಹಲಿಯಲ್ಲಿ ಮಾಲಿನ್ಯ ಪ್ರಮಾಣ ಹೆಚ್ಚಿರುವ ಕಾರಣ ಪಟಾಕಿ ಸಿಡಿಸುವುದು ಬೇಡ ಎಂದು ಅವರು ಹೇಳಿದ್ದಾರೆ.
      8:41 PM, 11 Feb

      'ದೆಹಲಿ ಜನ ಬಿಜೆಪಿಯನ್ನು ತಿರಸ್ಕರಿಸಿದ್ದಾರೆ ಎಂದು ಹೇಳುವುದು ಸರಿಯಲ್ಲ, ಬಿಜೆಪಿಯ ಮತಗಳಿಕೆ ಏರಿಕೆ ಕಂಡಿದೆ' ಎಂದು ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ ಹೇಳಿದ್ದಾರೆ.
      8:06 PM, 11 Feb

      ಅರವಿಂದ ಕೇಜ್ರಿವಾಲ್ ಗೆದ್ದಿದ್ದ ದೇವರು ಹನುಮಂತನಿಂದ ಎಂದು ಜಮ್ಮು ಕಾಶ್ಮೀರ ಬಿಜೆಪಿ ಅಧ್ಯಕ್ಷ ರವೀಂದ್ರ ರೈನಾ ಹೇಳಿದ್ದಾರೆ. 'ಅರವಿಂದ ಕೇಜ್ರಿವಾಲ್ ಹನುಮಾನ್ ಚಾಲೀಸ ಹೇಳಿದ್ದಕ್ಕೆ ಅವರು ಗೆದ್ದರು, ಇಲ್ಲದಿದ್ದರೆ ಗೆಲ್ಲುತ್ತಿರಲಿಲ್ಲ' ಎಂದಿದ್ದಾರೆ.
      7:42 PM, 11 Feb

      ದೆಹಲಿಯಲ್ಲಿ ವಿಜಯ ಸಾಧಿಸಿದ ಅರವಿಂದ ಕೇಜ್ರಿವಾಲ್ ಮತ್ತು ಎಎಪಿ ಪಕ್ಷಕ್ಕೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. 'ದೆಹಲಿ ಜನರ ಭರವಸೆ ಈಡೇರಿಸುವ ಕೆಲಸ ಮಾಡುವಿರೆಂದು ನಂಬಿದ್ದೇನೆ' ಎಂದು ಮೋದಿ ಹೇಳಿದ್ದಾರೆ.
      7:10 PM, 11 Feb

      ಚುನಾವಣಾ ಆಯೋಗದ ಮಾಹಿತಿಯಂತೆ 7 ಗಂಟೆ ವೇಳೆಗೆ ಎಎಪಿಯು 48 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. 14 ರಲ್ಲಿ ಮುನ್ನಡೆ ಸಾಧಿಸಿದೆ. ಬಿಜೆಪಿಯು 6 ಕ್ಷೇತ್ರಗಳಲ್ಲಿ ಗೆದ್ದಿದ್ದು, 2 ರಲ್ಲಿ ಮುನ್ನಡೆ ಸಾಧಿಸಿದೆ.
      6:51 PM, 11 Feb

      ಏಳು ಸ್ಥಾನಗಳಲ್ಲಿ ಮುನ್ನಡೆ ಗಳಿಸಿದ್ದ ಬಿಜೆಪಿ ಒಂದು ಸ್ಥಾನವನ್ನು ಹೆಚ್ಚಿಸಿಕೊಂಡಿದ್ದು, ಈಗ ಎಂಟು ಸ್ಥಾನದಲ್ಲಿ ಮುನ್ನಡೆ ಸಾಧಿಸಿದೆ. 63 ರಲ್ಲಿದ್ದ ಎಎಪಿ 62 ಕ್ಕೆ ಇಳಿದಿದೆ.
      Advertisement
      6:49 PM, 11 Feb

      ದೆಹಲಿ ವಿಧಾನಸಭೆ ಚುನಾವಣೆ ಗೆದ್ದ ಅರವಿಂದ ಕೇಜ್ರಿವಾಲ್ ಅವರು ಹನುಮಂತನ ದೇವಾಲಯಕ್ಕೆ ಭೇಟಿ ನೀಡಿದರು. ಮತದಾನದ ದಿನದಂದೂ ಸಹ ಅವರು ಹನುಮಂತನ ದೇವಾಲಯಕ್ಕೆ ಭೇಟಿ ನೀಡಿದ್ದರು. ತಮ್ಮನ್ನು ಹಿಂದು ವಿರೋಧಿ ಎಂದು ಕರೆದಿದ್ದಕ್ಕೆ ವೇದಿಕೆ ಮೇಲೆ ಹನುಮಾನ್ ಚಾಲೀಸ ಹಾಡಿ ಗಮನ ಸೆಳೆದಿದ್ದರು. ಇಂದು ಮಾಡಿದ ಭಾಷಣದಲ್ಲಿಯೂ ಅವರು ಗೆಲುವಿನ ಶ್ರೇಯವನ್ನು ಹನುಮಂತ ದೇವರಿಗೆ ಅರ್ಪಿಸಿದ್ದರು.
      5:53 PM, 11 Feb

      ಕೇಜ್ರಿವಾಲ್ ದೆಹಲಿಯ ಜನತೆಗೆ 'ಐ ಲವ್‌ ಯೂ' ಹೇಳುವ ಮೂಲಕ ಜನರ ಮೇಲಿರುವ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.
      5:38 PM, 11 Feb

      ನಾನು ಈ ಹಿಂದೆಯೇ ಮ್ಯಾನಿಫೆಸ್ಟೋದಲ್ಲಿ ತಿಳಿಸಿದಂತೆ ಮುಂದಿನ 30 ದಿನಗಳ ಒಳಗಾಗಿ ಹರಿಹರ ನಗರದಲ್ಲಿ ಉಚಿತ ಸೆಲ್ಫ್ ಡಿಫೆನ್ಸ್ ಕೋಚಿಂಗ್ ಕೇಂದ್ರವನ್ನು ತೆರೆಯಲಿದ್ದೇನೆ- ತೇಜಿಂದರ್ ಪಾಲ್ ಬಗ್ಗಾ, ಹರಿಹರನಗರ ಬಿಜೆಪಿ ಅಭ್ಯರ್ಥಿ
      5:35 PM, 11 Feb

      ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹನುಮಾನ್ ಮಂದಿರಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
      5:15 PM, 11 Feb

      ಆಮ್ ಆದ್ಮಿ ಪಕ್ಷದ ಅಖಿಲೇಶ್ ಪಾಟಿ ತ್ರಿಪಾಠಿ 11,133 ಮತಗಳ ಅಂತರದಿಂದ ಮಾಡೆಲ್ ಟೌನ್ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ.
      Advertisement
      5:00 PM, 11 Feb

      ಹುಟ್ಟುಹಬ್ಬದ ದಿನ ಭರ್ಜರಿ ಉಡುಗೊರೆ

      ನನ್ನ ಹುಟ್ಟುಹಬ್ಬದ ದಿನ ಮರೆಯಲಾಗದಂತಹ ಉಡುಗೊರೆ ನನಗೆ ದೊರೆತಂತಾಗಿದೆ, ಇದು ಸತ್ಯದ ಗೆಲುವು-ಸುನಿತಾ, ಕೇಜ್ರಿವಾಲ್ ಪತ್ನಿ
      4:55 PM, 11 Feb

      ಬಿಜೆಪಿ ಕಾರ್ಯಕರ್ತರ ಶ್ರಮಕ್ಕೆ ಧನ್ಯವಾದ, ದೆಹಲಿ ಜನತೆಗೂ ಧನ್ಯವಾದ ಅರ್ಪಿಸುತ್ತೇನೆ, ಜನರ ನಿರೀಕ್ಷೆಯಂತೆ ಅರವಿಂದ್ ಕೇಜ್ರಿವಾಲ್ ಕೆಲಸ ಮಾಡುತ್ತಾರೆ ಎಂದು ನಾನು ಭಾವಿಸಿದ್ದೇನೆ-ಮನೋಜ್ ತಿವಾರಿ, ದೆಹಲಿ ಬಿಜೆಪಿ ಮುಖ್ಯಸ್ಥ
      4:55 PM, 11 Feb

      ಬಿಜೆಪಿ ಕಾರ್ಯಕರ್ತರ ಶ್ರಮಕ್ಕೆ ಧನ್ಯವಾದ, ದೆಹಲಿ ಜನತೆಗೂ ಧನ್ಯವಾದ ಅರ್ಪಿಸುತ್ತೇನೆ, ಜನರ ನಿರೀಕ್ಷೆಯಂತೆ ಅರವಿಂದ್ ಕೇಜ್ರಿವಾಲ್ ಕೆಲಸ ಮಾಡುತ್ತಾರೆ ಎಂದು ನಾನು ಭಾವಿಸಿದ್ದೇನೆ-ಮನೋಜ್ ತಿವಾರಿ, ದೆಹಲಿ ಬಿಜೆಪಿ ಮುಖ್ಯಸ್ಥ
      4:52 PM, 11 Feb

      ಬಿಜೆಪಿ ಕಾರ್ಯಕರ್ತರ ಶ್ರಮಕ್ಕೆ ಧನ್ಯವಾದ, ದೆಹಲಿ ಜನತೆಗೂ ಧನ್ಯವಾದ ಅರ್ಪಿಸುತ್ತೇನೆ, ಜನರ ನಿರೀಕ್ಷೆಯಂತೆ ಅರವಿಂದ್ ಕೇಜ್ರಿವಾಲ್ ಕೆಲಸ ಮಾಡುತ್ತಾರೆ ಎಂದು ನಾನು ಭಾವಿಸಿದ್ದೇನೆ-ಮನೋಜ್ ತಿವಾರಿ, ದೆಹಲಿ ಬಿಜೆಪಿ ಮುಖ್ಯಸ್ಥ
      4:43 PM, 11 Feb

      ದ್ವೇಷ ರಾಜಕಾರಣಕ್ಕೆ ಜಾಗವಿಲ್ಲ

      ದ್ವೇಷ ರಾಜಕಾರಣಕ್ಕೆ ಜಾಗವಿಲ್ಲ ಎಂಬುದು ಮತ್ತೊಮ್ಮ ಸಾಬೀತಾಗಿದೆ ಎಂದು ಹೇಳಿರುವ ಅಶುತೋಷ್​ ಅರವಿಂದ್​ ಕೇಜ್ರಿವಾಲ್​ಗೆ ಅಭಿನಂದಿಸಿದ ಆಮ್​ ಆದ್ಮಿ ಪಕ್ಷದ ಮಾಜಿ ನಾಯಕ ಅಶುತೋಷ್ , ಟ್ವೀಟ್​ ಮೂಲಕ ಕೇಜ್ರಿವಾಲ್​ ಮತ್ತು ಆಪ್​ ಪಕ್ಷಕ್ಕೆ ಅಭಿನಂದನೆ
      4:33 PM, 11 Feb

      ಆಮ್ ಆದ್ಮಿ ಪಕ್ಷವು 15 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, 48 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಬಿಜೆಪಿಯು 1 ಸ್ಥಾನಗಳನ್ನು ಗೆದ್ದಿದ್ದು, 6 ಸ್ಥಾನಗಳಲ್ಲಿ ಮುಂದಿದೆ.
      4:25 PM, 11 Feb

      ಸೀಲಂಪುರ ವಿಧಾನಸಭಾ ಕ್ಷೇತ್ರದಲ್ಲಿ ಆಪ್ ಗೆಲುವು

      ಸೀಲಂಪುರ ವಿಧಾನಸಭಾ ಕ್ಷೇತ್ರದಲ್ಲಿ ಅಬ್ದುಲ್ ರೆಹಮಾನ್ ಬಿಜೆಪಿಯ ಕುಶಾಲ್ ಕುಮಾರ್ ಮಿಶ್ರಾ ಸೋಲಿಸಿದ್ದಾರೆ. ರೆಹಮಾನ್ 27,887 ಸಾವಿರ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.
      4:16 PM, 11 Feb

      ಯಾವ ಕೆಟ್ಟ ಉಪಾಯಗಳು ಫಲಕೊಟ್ಟಿಲ್ಲ

      ಯಾವ ಕೆಟ್ಟ ಉಪಾಯಗಳೂ ಫಲ ಕೊಟ್ಟಿಲ್ಲ, ಕೋಮುವಾದವನ್ನು ಹುಟ್ಟುಹಾಕುವಂತವರಿಗೆ ಚುನಾವಣಾ ಫಲಿತಾಂಶ ಒಳ್ಳೆಯ ಪಾಠ ಕಲಿಸಲಾಗಿದೆ- ಯೋಗೇಂದ್ರ ಯಾದವ್
      4:07 PM, 11 Feb

      ರಾಘವ್ ಚಡ್ಡಾ ದೆಹಲಿ ಸರ್ಕಾರದ ಮುಂದಿನ ಹಣಕಾಸು ಸಚಿವರಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ
      3:58 PM, 11 Feb

      ಅಭಿವೃದ್ಧಿಗೆ ಸಂದ ಗೆಲುವು

      ಅಭಿವೃದ್ಧಿ ಕೆಲಸಗಳಿಗಾಗಿ ಜನರು ಮತ ಹಾಕಿದ್ದಾರೆ, ಇದು ಅಭಿವೃದ್ಧಿಗೆ ಸಂದ ಗೆಲುವು, ಅರವಿಂದ್ ಕೇಜ್ರಿವಾಲ್ ಅವರಿಗೆ ಶುಭಾಶಯ- ತೇಜಸ್ವಿ ಯಾದವ್, ಆರ್‌ಜೆಡಿ ಮುಖಂಡ
      3:49 PM, 11 Feb

      ಕೇಜ್ರಿವಾಲ್‌ಗೆ ಉದ್ಧವ್ ಠಾಕ್ರೆ ಶುಭಾಶಯ

      ಕೇಜ್ರಿವಾಲ್ ಗೆಲುವಿಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಶುಭ ಹಾರೈಸಿದ್ದಾರೆ. ಜನರ ಇಚ್ಛೆಯಂತೆ, ಜನರ ಮಾತಿನಿಂದ ದೇಶವನ್ನು ನಡೆಸಬಹುದು ಎನ್ನುವುದು ಖಾತ್ರಿಯಾಗಿದೆ. ಮನ್‌ಕಿ ಬಾತ್‌ನಿಂದ ಅಲ್ಲ ಜನ್‌ ಕಿ ಬಾತ್‌ನಿಂದ ದೇಶ ನಡೆಸಬಹುದು ಎಂದು ಹೇಳಿದ್ದಾರೆ.
      3:42 PM, 11 Feb

      ಪ್ರಚಂಡ ಗೆಲುವಿಗೆ ಅರವಿಂದ ಕೇಜ್ರಿವಾಲ್ ಅವರು ಮತದಾರರು, ಕಾರ್ಯಕರ್ತರು ಹಾಗೂ ತಮ್ಮ ಕುಟುಂಬಕ್ಕೆ ಧನ್ಯವಾದ ಅರ್ಪಿಸಿದ್ದಾರೆ. 'ನನ್ನ ಮಡದಿಯ ಹುಟ್ಟುಹಬ್ಬ ಸಹ ಇಂದು, ನಾನು ಕೇಕ್ ತಿಂದಿದ್ದೇನೆ. ನಿಮಗೂ ಕೇಕ್ ತಿನ್ನಿಸುತ್ತೇನೆ' ಎಂದರು.
      3:41 PM, 11 Feb

      ಮನೀಶ್ ಸಿಸೋಡಿಯಾ ಅವರು ಚುನಾವಣೆಯಲ್ಲಿ ಗೆಲವು ಸಾಧಿಸಿದ್ದಾರೆ. ಕೆಲವು ಹಂತದಲ್ಲಿ ಹಿನ್ನಡೆ ಅನುಭವಿಸಿದ್ದ ಅವರು ಅಂತಿಮವಾಗಿ ಗೆಲುವು ಸಾಧಿಸಿದ್ದಾರೆ.
      3:16 PM, 11 Feb

      ರಾಘವ್ ಚಡ್ಡಾ ಗೆಲುವು

      ಅರವಿಂದ್ ಕೇಜ್ರಿವಾಲ್ ಭಯೋತ್ಪಾದಕ ಅಲ್ಲ ದೇಶಭಕ್ತ ಎಂದು ದೆಹಲಿ ಜನತೆ ತೋರಿಸಿದೆ. ಅವರು ದೇಶವನ್ನು ಕಟ್ಟಲು ಶ್ರಮಿಸುತ್ತಿದ್ದಾರೆ. ಬಿಜೆಪಿ ಏನು ಕೆಲಸ ಮಾಡುತ್ತಿದೆ ಅದು ದೇಶಭಕ್ತಿ ಅಲ್ಲ- ರಾಘವ್ ಚಡ್ಡಾ- ಆಪ್ ಅಭ್ಯರ್ಥಿ
      3:08 PM, 11 Feb

      ಮನೀಷ್ ಸಿಸೋಡಿಯಾ ರೋಡ್ ಶೋ

      3000 ಮತಗಳ ಅಂತರದಿಂದ ಗೆಲುವು ಸಾಧಿಸಿದ ದೆಹಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ರೋಡ್ ಶೋ ನಡೆಸಿದರು.
      3:03 PM, 11 Feb

      ಮನೀಷ್ ಸಿಸೋಡಿಯಾಗೆ ಗೆಲುವು

      ಪಟ್ಪರ್‌ಗಂಜ್ ಶಾಸಕನಾಗಿ ಪುನಃ ಆಯ್ಕೆಯಾಗಿರುವುದಕ್ಕೆ ಸಂತಸವಾಗಿದೆ. ಬಿಜೆಪಿಯು ಜನರು ಹಾಗೂ ಸರ್ಕಾರದ ನಡುವೆ ಬಿರುಕುಂಟು ಮಾಡಲು ಪ್ರಯತ್ನಿಸಿತ್ತು. ಆದರೆ ಕೊನೆಗೆ ಕೇವಲ ದೆಹಲಿಯ ಅಭಿವೃದ್ಧಿ ಫಲಕೊಟ್ಟಿದೆ. ಜನರು ನಮ್ಮನ್ನು ಆಯ್ಕೆ ಮಾಡಿದ್ದಾರೆ.-ಮನೀಷ್ ಸಿಸೋಡಿಯಾ
      2:54 PM, 11 Feb

      ದೇಶ ಒಡೆಯಲು ಹೊರಟಿದ್ದವರಿಗೆ ಪಾಠ

      ಇದು ದೆಹಲಿಯ ಅಭಿವೃದ್ಧಿ ಹಾಗೂ ಜನರ ಗೆಲುವು, ದೇಶವನ್ನು ಒಡೆಯಲು ಹೊರಟಿದ್ದವರಿಗೆ ಇದೊಂದು ಪಾಠವಾಗಿದೆ. ಸುಂದರ ದೆಹಲಿ ಕಟ್ಟುವ ಕೇಜ್ರಿವಾಲ್ ಅವರ ಕನಸು ನನಸಾಗಿದೆ.- ಅಖಿಲೇಶ್ ಪಾಟಿ ತ್ರಿಪಾಠಿ , ಮಾಡೆಲ್ ಟೌನ್ ಆಪ್ ಅಭ್ಯರ್ಥಿ
      2:50 PM, 11 Feb

      ಗೆಲುವಿನ ನಗೆ ಬೀರಿದ ಮನೀಷ್ ಸಿಸೋಡಿಯಾ

      ದೆಹಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ 3514 ಸಾವಿರ ಮತಗಳಿಂದ ಮುನ್ನಡೆ ಸಾಧಿಸಿದ್ದು, ಗೆಲುವಿನ ನಗೆ ಬೀರಿದ್ದಾರೆ. ಅವರು ಪಟ್ಪರ್ ಗಂಜ್‌ನಿಂದ ಕಣಕ್ಕಿಳಿದಿದ್ದರು.
      READ MORE

      English summary
      Delhi Assembly Election Results 2020 Live Updates in Kannada : Get all the live updates on constituency wise and party wise results. Latest Breaking News, Pictures and Videos only on kannada oneindia.
      ತಾಜಾ ಸುದ್ದಿ ತಕ್ಷಣ ಪಡೆಯಿರಿ
      Enable
      x
      Notification Settings X
      Time Settings
      Done
      Clear Notification X
      Do you want to clear all the notifications from your inbox?
      Settings X