ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಡಾಣದಂಥ ಹೊಟ್ಟೆಯಲ್ಲಿತ್ತು 12 ಚಿನ್ನದ ಬಿಸ್ಕತ್ತು!

By Srinath
|
Google Oneindia Kannada News

ನವದೆಹಲಿ, ಏಪ್ರಿಲ್ 21: ದೆಹಲಿಯ ಚಾಂದಿನಿ ಚೌಕ್‌ ಮೂಲದ 63 ವರ್ಷದ ಉದ್ಯಮಿ. ಆದರೆ ಆತ ಹೊಟ್ಟೆಗೆ ಆಹಾರ ತೆಗೆದುಕೊಳ್ಳುವ ಬದಲು 12 ಚಿನ್ನದ ಬಿಸ್ಕತ್ತುಗಳನ್ನೇ ತಿಂದುಬಿಟ್ಟಿದ್ದ. ಹಾಗಂತ ಹಸಿವು ನೀಗಿಸಿಕೊಳ್ಳಲು ಪೊಪಾಟು ಬಿದ್ದು ಆತನೇನೂ ಚಿನ್ನದ ಬಿಸ್ಕತ್ ನುಂಗಿರಲಿಲ್ಲ. ಆತನಿಗೆ ಬೇರೆಯದ್ದೇ ಹಸಿವು ಇತ್ತು.

ಅದು ಹಣ ಮಾಡಬೇಕೆಂಬ ದುರಾಸೆ. ಅದಕ್ಕೇ ಆತ ಏನು ಮಾಡಿದನೆಂದರೆ ಮೊನ್ನೆ ಸಿಂಗಪುರದಿಂದ ಭಾರತಕ್ಕೆ ಬರುವಾಗ 12 ಬಂಗಾರದ ಬಿಸ್ಕತ್ತುಗಳನ್ನು ತಿಂದುಕೊಂಡು ಬಂದಿದ್ದ. ಅಂದರೆ ಅಕ್ರಮವಾಗಿ ಚಿನ್ನ ಸಾಗಿಸಲು ಆತ ಕಂಡುಕೊಂಡಿದ್ದ ಸುರಕ್ಷಿತ ಮಾರ್ಗ ಇದಾಗಿತ್ತು.

ಅದೂ ಅಷ್ಟೂ ಬಿಸ್ಕತ್ತುಗಳನ್ನು ಬೇರೆ ಲೋಹದಿಂದ ಮುಚ್ಚಿ, ನುಂಗಿಬಿಟ್ಟಿದ್ದ. ಇಂತಿಪ್ಪ ವ್ಯಾಪಾರಿ ಏಪ್ರಿಲ್ 9ರಂದು ದೆಹಲಿಗೆ ಬಂದಿಳಿದಾಗ ಅಲ್ಲಿನ ಸೀಮಾಸುಂಕ ಅಧಿಕಾರಿಗಳಿಗೂ ಗೊತ್ತಾಗಲಿಲ್ಲ. ಸಿಂಗಾಪುರದಿಂದ ಇಲ್ಲಿನ ವಿಮಾನದಲ್ಲಿ ಬಂದಿಳಿದ ವ್ಯಾಪಾರಿಯನ್ನು ಯಾವುದೇ ಅನುಮಾನ ಬಾರದಿರುವುದರಿಂದ ಸಾಮಾನ್ಯ ಪ್ರಯಾಣಿಕರಂತೆ ಕಳುಹಿಸಿಕೊಟ್ಟಿದ್ದರು.

Delhi doctor removes gold biscuits from 63-year-old man belly

ಸರಿ ಏರ್ ಪೋರ್ಟ್ ನಿಂದ ಯಶಸ್ವಿಯಾಗಿ ಹೊರಬಂದವನೇ ಸೀದಾ ಪ್ರಸಿದ್ಧ ಸರ್ ಗಂಗಾರಾಮ್‌ ಆಸ್ಪತ್ರೆಯ ವೈದ್ಯರ ಬಳಿ ಧಾವಿಸಿದ್ದಾನೆ. 'ತನಗೆ ಹೊಟ್ಟೆಯಲ್ಲಿ ಹೆಂಗೆಂಗೋ ಆಗ್ತಿದೆ. ವಾಂತಿಗೆ ಬರೋಂಗೆ ಆಗುತ್ತಿದೆ. ಕಕ್ಕ ಬರ್ತಿದೆ. ತಡೆಯಕ್ಕಾಗ್ತಿಲ್ಲ. ಮೊದಲು ಹೊಟ್ಟೆ ಸೀಳಿ' ಎಂದು ದುಂಬಾಲು ಬಿದ್ದಿದ್ದಾನೆ.

ವೈದ್ಯರು ಸ್ಕ್ಯಾನ್‌ ಮಾಡಿದಾಗ ಹೊಟ್ಟೆಯಲ್ಲಿ ಮುಚ್ಚಳ ಕಾಣದೇ ಲೋಹ ಪತ್ತೆಯಾಗಿದೆ. ಆದರೆ ಉದ್ಯಮಿ ಹೆಚ್ಚು ವಿಷಯ ಬಾಯ್ಬಿಟ್ಟಿಲ್ಲ. ಕಡೆಗೆ ವೈದ್ಯರು 3 ಗಂಟೆ ಕಾಲ ಶಸ್ತ್ರಚಿಕಿತ್ಸೆ ನಡೆಸಿ ನೋಡಿದಾಗ ದಂಗುಬಡಿದಿದ್ದಾರೆ. ಏಕೆಂದರೆ ಉದ್ಯಮಿಯ ಹೊಟ್ಟೆಯಿಂದ ಬರೋಬ್ಬರಿ 12 ಬಂಗಾರದ ಬಿಸ್ಕತ್ತುಗಳು ಹೊರಬಂದಿದ್ದವು!

ಅಲ್ಲಾ ಪೇಷೆಂಟುಗಳ ಹೊಟ್ಟೆಯಿಂದ ಏನೇನನ್ನೋ ತೆಗೆದುಹಾಕಿದ್ದೇನೆ. ಆದರೆ ಮೊದಲ ಬಾರಿಗೆ ಇಂತಹ ಪೇಷೆಂಟನ್ನು ನೋಡಿದೆ. ಅವನ ಹೊಟ್ಟೆಯಲ್ಲಿ ಬರೀ ಚಿನ್ನವೇ ತುಂಬಿತ್ತು ಎಂದು ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರಾದ ಡಾ ಸಿಎಸ್ ರಾಮಚಂದ್ರನ್ ತಿಳಿಸಿದ್ದಾರೆ.

ಒಂದೊಂದು ಬಿಸ್ಕತ್ತೂ 33 ಗ್ರಾಂ ತೂಗುತ್ತಿದ್ದವು. ಅದರ ಮೌಲ್ಯ ಒಟ್ಟು 12 ಲಕ್ಷ ರೂ.ನಷ್ಟಾಗುತ್ತದೆ. ವೈದ್ಯರು ತಡಮಾಡದೆ ತಕ್ಷಣ ಪೊಲೀಸರು ಮತ್ತು ಸೀಮಾಸುಂಕ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಇದೀಗ ಉದ್ಯಮಿ ಪೊಲೀಸರ ಅತಿಥಿಯಾಗಿದ್ದಾನೆ.

English summary
Delhi doctor removes gold biscuits from 63-year-old man belly. Doctor, Dr CS Ramachandran who performed the operation on 9 April, told that police and customs authorities had questioned the businessman and confiscated the gold.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X