ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯಲ್ಲಿ ಕೊನೆಗೂ ಪೆಟ್ರೋಲ್‌ಗಿಂತ ಕಡಿಮೆಯಾದ ಡೀಸೆಲ್ ದರ: ವ್ಯಾಟ್ ಇಳಿಕೆ

|
Google Oneindia Kannada News

ನವದೆಹಲಿ, ಜುಲೈ 31: ರಾಷ್ಟ್ರ ರಾಜಧಾನಿಯಲ್ಲಿ ಕೊನೆಗೂ ಡೀಸೆಲ್ ದರವು ಪೆಟ್ರೋಲ್‌ಗಿಂತ ಕಡಿಮೆಯಾಗಿದೆ. ಶುಕ್ರವಾರ(ಜುಲೈ 30)ರಂದು ದೆಹಲಿ ಸರ್ಕಾರವು ಈ ಹಿಂದೆ ವಿಧಿಸಿದ್ದ ವ್ಯಾಟ್ ಶೇ 30 ರಿಂದ 16.75 ಪರ್ಸೆಂಟ್‌ಗೆ ತಗ್ಗಿಸಿತು.

ದೆಹಲಿ ಸರ್ಕಾರದ ವ್ಯಾಟ್ ಇಳಿಕೆಯ ನಿರ್ಧಾರದಿಂದ ಡೀಸೆಲ್ ಪ್ರತಿ ಲೀಟರ್‌ಗೆ 81.94 ರೂಪಾಯಿಯಿಂದ 73.56 ರೂಪಾಯಿಗೆ ತಗ್ಗಿದೆ. ಇದರಿಂದಾಗಿ ಡೀಸೆಲ್ ಪ್ರತಿ ಲೀಟರ್‌ಗೆ 8.38 ರೂಪಾಯಿ ಕಡಿಮೆಯಾಗಿದ್ದು, ಜುಲೈ 31ರ ಬೆಳಗ್ಗೆ 6 ಗಂಟೆಯಿಂದಲೇ ಹೊಸ ದರ ಜಾರಿಯಾಗಿದೆ.

ಡೀಸೆಲ್ ಮೇಲಿನ VAT ಇಳಿಸಲು ದೆಹಲಿ ಸರ್ಕಾರ ನಿರ್ಧಾರಡೀಸೆಲ್ ಮೇಲಿನ VAT ಇಳಿಸಲು ದೆಹಲಿ ಸರ್ಕಾರ ನಿರ್ಧಾರ

ಇನ್ನು ಪೆಟ್ರೋಲ್ ದರವು ಯಾವುದೇ ಬದಲಾವಣೆ ಇಲ್ಲದೆ ಪ್ರತಿ ಲೀಟರ್‌ಗೆ 80.43 ರೂಪಾಯಿನಷ್ಟಿದೆ.

Delhi: Diesel Becomes Cheaper Than Petrol After Vat Cut

ಕೊರೊನಾ ಸಾಂಕ್ರಾಮಿಕ ಲಾಕ್‌ಡೌನ್ ಸಂದರ್ಭದಲ್ಲಿ ದೆಹಲಿ ಸರ್ಕಾರ ಸೇರಿದಂತೆ ದೇಶದ ಅನೇಕ ರಾಜ್ಯಗಳು ಆದಾಯ ಕೊರತೆ ಎದುರಿಸುತ್ತಿದ್ದವು. ಈ ಹಿನ್ನೆಲೆಯಲ್ಲಿ ತೈಲಗಳ ಮೇಲೆ ವ್ಯಾಟ್ ದರ ಏರಿಸಿದ್ದವು. ದೆಹಲಿಯಲ್ಲಿ ಡೀಸೆಲ್ ಮೇಲಿನ ವ್ಯಾಟ್ ಶೇ. 30ರಷ್ಟು ಏರಿಕೆ ಮಾಡಲಾಗಿತ್ತು. ಇದರಿಂದಾಗಿ ಡೀಸೆಲ್, ಪೆಟ್ರೋಲ್‌ಗಿಂತಲೂ ದುಬಾರಿಯಾಗಿದ್ದು. ಇದೀಗ ಕೊನೆಗೂ ಡೀಸೆಲ್ ಪೆಟ್ರೋಲ್‌ಗಿಂತ ಕಡಿಮೆಯಾಗಿದೆ.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಕಚ್ಚಾ ತೈಲ ಮತ್ತು ವಿದೇಶೀ ವಿನಿಮಯ ದರಗಳಿಂದ ವಿಶಾಲವಾಗಿ ನಿರ್ಧರಿಸಲಾಗುತ್ತದೆ. ಆದಾಗ್ಯೂ, ಸ್ಥಳೀಯ ತೆರಿಗೆಯಿಂದಾಗಿ ಚಿಲ್ಲರೆ ದರಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ.

English summary
The price of diesel came down by Rs 8.38 in the national capital on Friday, a day after the Delhi government announced a reduction in the value added tax or VAT applicable to the fuel.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X