ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಶಿ ತರೂರ್ ವಿದೇಶಕ್ಕೆ ತೆರಳಲು ಅನುಮತಿ ನೀಡಿದ ದೆಹಲಿ ಕೋರ್ಟ್

|
Google Oneindia Kannada News

ನವದೆಹಲಿ, ಏಪ್ರಿಲ್ 30: ಪತ್ನಿ ಸುನಂದಾ ಪುಷ್ಕರ್ ಸಾವಿನ ಪ್ರಕರಣದಲ್ಲಿ ಆರೋಪಿಯಾಗಿರುವ ಕಾಂಗ್ರೆಸ್ ನಾಯಕ ಶಶಿ ತರೂರ್ ವಿದೇಶಕ್ಕೆ ತೆರಳಲು ದೆಹಲಿ ಕೋರ್ಟ್ ಮಂಗಳವಾರ ಅನುಮತಿ ನೀಡಿದೆ. ಮೇ ಐದರಿಂದ ಇಪ್ಪತ್ತನೇ ತಾರೀಕಿನ ತನಕ ಅಮೆರಿಕಕ್ಕೆ ತೆರಳಲು ಶಶಿ ತರೂರ್ ಅವರಿಗೆ ವಿಶೇಷ ನ್ಯಾಯಾಧೀಶ ಅರುಣ್ ಭಾರದ್ವಾಜ್ ಅನುಮತಿ ನೀಡಿದ್ದಾರೆ.

ಅಮೆರಿಕದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಭಾಗಿ ಆಗಬೇಕಿದೆ ಎಂದು ತಮ್ಮ ಅರ್ಜಿಯಲ್ಲಿ ತಿಳಿಸಿದ್ದರು. ಜಾಮೀನು ನೀಡುವ ವೇಳೆ, ಅನುಮತಿ ಇಲ್ಲದೆ ವಿದೇಶಕ್ಕೆ ತೆರಳಬಾರದು ಎಂದು ಕೋರ್ಟ್ ನಿರ್ದೇಶನ ನೀಡಿತ್ತು. ಕೇಂದ್ರದ ಮಾಜಿ ಸಚಿವ ಶಶಿ ತರೂರ್ ವಿರುದ್ಧ ಐಪಿಸಿ ಸೆಕ್ಷನ್ 498-A ಹಾಗೂ 306 ಅಡಿ ದೂರು ದಾಖಲಾಗಿದೆ.

 Delhi Court allows Shashi Tharoor to travel abroad

ದೆಹಲಿಯ ವಿಲಾಸಿ ಹೋಟೆಲ್ ನ ಕೋಣೆಯಲ್ಲಿ ಸುನಂದಾ ಪುಷ್ಕರ್ ಅವರು 2014ರ ಜನವರಿ 17ನೇ ತಾರೀಕು ರಾತ್ರಿ ಶವವಾಗಿ ಪತ್ತೆಯಾಗಿದ್ದರು. ಆ ಸಂದರ್ಭದಲ್ಲಿ ಶಶಿ ತರೂರ್ ಅವರ ಅಧಿಕೃತ ಬಂಗಲೆ ನವೀಕರಣ ಆಗುತ್ತಿದ್ದರಿಂದ ಈ ದಂಪತಿ ಹೋಟೆಲ್ ನಲ್ಲಿ ಉಳಿದುಕೊಂಡಿದ್ದರು.

English summary
A Delhi Court on Tuesday allowed Congress leader Shashi Tharoor, an accused in a case related to wife Sunanda Pushkar’s death, to travel abroad. Special Judge Arun Bhardwaj granted permission to Mr. Tharoor to go to the USA from May 5 to 20.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X