ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರೋಪಿಯನ್ನೇ ಒತ್ತೆ ಇಟ್ಟ ಪೊಲೀಸರು: ಕೋಟಿ ಕೋಟಿಗೆ ಬ್ಲ್ಯಾಕ್ ಮೇಲ್

|
Google Oneindia Kannada News

ನವದೆಹಲಿ, ಡಿ 6: ಬೇಲಿಯೇ ಎದ್ದು ಹೊಲ ಮೇಯ್ದಂತೆ, ರಕ್ಷಣೆ ಕೊಡಬೇಕಾದ ಪೊಲೀಸರೇ, ಆರೋಪಿಯೊಬ್ಬನನ್ನು ಒತ್ತೆ ಇಟ್ಟುಕೊಂಡು, ಕೋಟ್ಯಾಂತರ ರೂಪಾಯಿಗೆ ಡಿಮಾಂಡ್ ಮಾಡಿದ ಘಟನೆ, ರಾಷ್ಟ್ರ ರಾಜಧಾನಿಯಿಂದ ವರದಿಯಾಗಿದೆ.

ಸುಳ್ಯದಲ್ಲಿ ಚಕ್ರಬಡ್ಡಿ ಸುಳಿಗೆ ಸಿಲುಕಿದ ಕೃಷಿಕನ ಮೇಲೆ ಖಾಕಿ ದರ್ಪ ಸುಳ್ಯದಲ್ಲಿ ಚಕ್ರಬಡ್ಡಿ ಸುಳಿಗೆ ಸಿಲುಕಿದ ಕೃಷಿಕನ ಮೇಲೆ ಖಾಕಿ ದರ್ಪ

ವಂಚನೆ ಆರೋಪದಡಿ, ದೆಹಲಿ ಪೊಲೀಸರು ಚಂಡೀಗಢದ ಆರು ಜನರ ಮೇಲೆ ಕೇಸ್ ದಾಖಲಿಸಿಕೊಂಡಿದ್ದರು. ಇದರಲ್ಲಿ ಐವರನ್ನು ಬಂಧಿಸಿ, ಇನ್ನೊಬ್ಬನ ಹುಡುಕಾಟದಲ್ಲಿ ತೊಡಗಿದ್ದರು.

ಎಸಿಪಿ ವೆಂಕಟೇಶ್ ಪ್ರಸನ್ನಗೆ ಜೀವ ಬೆದರಿಕೆ: ಆಂಬಿಡೆಂಟ್ ಕೇಸ್ ಎಫೆಕ್ಟ್ ಎಸಿಪಿ ವೆಂಕಟೇಶ್ ಪ್ರಸನ್ನಗೆ ಜೀವ ಬೆದರಿಕೆ: ಆಂಬಿಡೆಂಟ್ ಕೇಸ್ ಎಫೆಕ್ಟ್

ಪ್ರಧಾನ್ ಎನ್ನುವ ಆರೋಪಿಯನ್ನು ಕೊನೆಗೂ ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸರು, ಆತನನ್ನು ಠಾಣೆಗೆ ಕರೆದುಕೊಂಡು ಬರದೇ, ದೆಹಲಿಯ ಉತ್ತಮ್ ನಗರದ ಪ್ರದೇಶದಲ್ಲಿ ಒತ್ತೆಯಿಟ್ಟುಕೊಂಡು, ಆತನ ಪತ್ನಿಗೆ ಕರೆಮಾಡಿ ಒಂದೂವರೆ ಕೋಟಿ ರೂಪಾಯಿ ಹಣದ ಬೇಡಿಕೆಯನ್ನು ಇಟ್ಟಿದ್ದಾರೆ.

Delhi Cops Sacked For Kidnapping Accused, Demanding Rs. 1.5 Crore Ransom

ಬೇಡಿಕೆಯಿಟ್ಟ ಹಣ ನೀಡದೇ ಹೋದರೆ ಮತ್ತು ಈ ವಿಷಯವನ್ನು ಎಲ್ಲಾದರೂ ಬಹಿರಂಗ ಪಡಿಸಿದರೆ, ಸುಳ್ಳುಕೇಸ್ ಹಾಕಿ, ಜೈಲಿನಲ್ಲೇ ಕಳೆಯುವಂತೆ ಮಾಡುತ್ತೇವೆ ಎಂದು ಪ್ರಧಾನ್ ಪತ್ನಿಗೆ, ಮೂವರು ಪೊಲೀಸರು ಬೆದರಿಕೆಯನ್ನು ಹಾಕಿದ್ದಾರೆ.

ತಮ್ಮ ಸಹದ್ಯೋಗಿಗಳೇ ಮಣ್ಣು ತಿನ್ನುವ ಕೆಲಸವನ್ನು ಮಾಡಿದ್ದಾರೆ ಎನ್ನುವುದನ್ನು ಅರಿತ ಹಿರಿಯ ಪೊಲೀಸ್ ಅಧಿಕಾರಿಗಳು, ಆರೋಪಿಯನ್ನು ಒತ್ತೆಯಿಟ್ಟುಕೊಂಡಿದ್ದ ರಣಹಾಲ್ ಠಾಣೆಯ ಸುಭೆಸಿಂಗ್, ಇಂದು ಪಾವಟ್ ಮತ್ತು ಅಜಯ್ ಕುಮಾರ್ ಅವರನ್ನು ಸೇವೆಯಿಂದ ವಜಾಗೊಳಿಸಿದ್ದಾರೆ. ರಣಹಾಲ್ ಠಾಣೆಯ ಸ್ಟೇಷನ್ ಮಾಸ್ಟರ್ ಅವರನ್ನೂ ಅಲ್ಲಿಂದ ವರ್ಗಾಯಿಸಲಾಗಿದೆ.

English summary
Three police officials in Delhi allegedly kidnapped a man and demanded Rs. 1.5 crore as ransom from his wife. ASI Sube Singh, Head Constable Indu Pawat and Constable Ajay Kumar of Ranhola police station have been dismissed from service with immediate effect.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X