ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈ ಬಳಿಕ ದೆಹಲಿಯಲ್ಲಿ ಆತಂಕ, ವಲಸೆ ಕಾರ್ಮಿಕರಿಗೆ ಸಿಎಂ ಸಂದೇಶ

|
Google Oneindia Kannada News

ದೆಹಲಿ, ಏಪ್ರಿಲ್ 14: ಲಾಕ್‌ಡೌನ್‌ ನಡುವೆ ಸಾವಿರಾರು ವಲಸೆ ಕಾರ್ಮಿಕರು ರೈಲು ಹಾಗೂ ಬಸ್ ನಿಲ್ದಾಣಕ್ಕೆ ಧಾವಿಸಿದ್ದ ಘಟನೆ ಮುಂಬೈನ ಬಾಂದ್ರಾದಲ್ಲಿ ಆತಂಕ ಹೆಚ್ಚಿಸಿದೆ. ನಂತರ ಜನರನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದರು. ಕೇಂದ್ರ ಗೃಹಮಂತ್ರಿ ಅಮಿತ್ ಶಾ, ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆಗೆ ಕರೆ ಮಾಡಿ, ಪರಿಸ್ಥಿತಿ ನಿಯಂತ್ರಿಸಿ ಎಂದು ಸೂಚಿಸಿದರು.

ಮುಂಬೈನಲ್ಲಿ ನಡೆದ ಘಟನೆಯ ಬೆನ್ನಲ್ಲೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮುಂಜಾಗ್ರತೆ ಕ್ರಮವಾಗಿ ವಲಸೆ ಕಾರ್ಮಿಕರಲ್ಲಿ ಸಂದೇಶ ರವಾನಿಸಿದ್ದಾರೆ. ''ಮೇ 3ರ ತನಕ ನೀವು ಇದ್ದಲ್ಲಿಯೇ ಇರಿ'' ಎಂದು ಮನವಿ ಮಾಡಿದ್ದಾರೆ.

ಬೀದಿಗಿಳಿದ ವಲಸೆ ಕಾರ್ಮಿಕರು; ಠಾಕ್ರೆಗೆ ಅಮಿತ್ ಶಾ ಕರೆಬೀದಿಗಿಳಿದ ವಲಸೆ ಕಾರ್ಮಿಕರು; ಠಾಕ್ರೆಗೆ ಅಮಿತ್ ಶಾ ಕರೆ

''ಮೇ 3ರ ತನಕ ಶಿಸ್ತು ಕಾಪಾಡಿಕೊಳ್ಳಬೇಕೆಂದು ನಾನು ನಿಮ್ಮಲ್ಲಿ ವಿನಂತಿಸುತ್ತಿದ್ದೇನೆ. ಕಳೆದ 21 ದಿನಗಳಲ್ಲಿ ನೀವು ಸಮಾಧಾನವಾಗಿ ನಿಮ್ಮ ಮನೆಗಳಲ್ಲಿ ಉಳಿದುಕೊಂಡು ಲಾಕ್‌ಡೌನ್‌ ಯಶಸ್ವಿಗೊಳಿಸಿದ್ದೀರ. ಈಗ ಮೇ 3ರ ತನಕ ಹೀಗೆ ಮುಂದುವರಿಸಬೇಕು'' ಎಂದು ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.

Delhi CM Request To Migrant Workers To Stay Home

ವದಂತಿ ಹಬ್ಬಿಸುವವರ ವಿರುದ್ಧ ಮತ್ತು ಹಣಕ್ಕಾಗಿ ಅಪಪ್ರಚಾರ ಮಾಡುವವರಿಗೆ ಸಿಎಂ ಎಚ್ಚರಿಕೆ ನೀಡಿದ್ದಾರೆ. ''ಜನರು ವಂದತಿಗಳನ್ನು ಹಬ್ಬಿಸಲು ಪ್ರಯತ್ನಪಡಬಹುದು. ಹಣದ ಆಮಿಷಕ್ಕಾಗಿ ಒಳಗಾಗಬೇಡಿ. ನಿಮ್ಮನ್ನು ಊರಿಗೆ ಈಗ ಯಾರೂ ಕರೆದುಕೊಂಡು ಹೋಗಲ್ಲ. ಡಿಟಿಸಿ ಬಸ್ ಇದೆ ಎಂದು ಹೇಳಬಹುದು. ಆದರೆ, ಯಾವುದೇ ಡಿಟಿಸಿ ಬಸ್ ಇರುವುದಿಲ್ಲ. ಯುಪಿ ಅಥವಾ ಇನ್ನಿತರ ಪ್ರದೇಶಗಳಿವೆ ಬಸ್ ಇದೆ ಎಂದು ಹೇಳಬಹುದು. ಇಂತಹ ಯಾವುದೇ ಬಸ್ ಇರುವುದಿಲ್ಲ. ಒಂದು ವೇಳೆ ನೀವು ಹೊರಟೆ ನಿಮ್ಮವರು ತೊಂದರೆಗೆ ಒಳಗಾಗಬಹುದು'' ಎಂದು ಸಂದೇಶ ನೀಡಿದ್ದಾರೆ.

ಬಾಂದ್ರಾದ ವಲಸೆ ಕಾರ್ಮಿಕರಿಗೆ ಸಿಎಂ ಉದ್ಧವ್ ಠಾಕ್ರೆ ಅಭಯಬಾಂದ್ರಾದ ವಲಸೆ ಕಾರ್ಮಿಕರಿಗೆ ಸಿಎಂ ಉದ್ಧವ್ ಠಾಕ್ರೆ ಅಭಯ

ಲಾಕ್‌ಡೌನ್‌ ವಿಸ್ತರಣೆ ಮಾಡಿರುವುದಕ್ಕೆ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಸ್ವಾಗತಿಸಿದ್ದಾರೆ. ಕೊರೊನಾ ವೈರಸ್ ನಿಯಂತ್ರಿಸುವಲ್ಲಿ ನಾವು ಕಟ್ಟುನಿಟ್ಟಾಗಿ ಹೋರಾಡಬೇಕು ಎಂದು ಹೇಳಿದ್ದರು. ದೆಹಲಿಯಲ್ಲಿ ನಾವು ಕೊರೊನಾ ವಿರುದ್ಧ ಸಮರ್ಪಕವಾಗಿ ಹೋರಾಡುತ್ತೇವೆ ಎಂಬ ಭರವಸೆ ನನಗಿದೆ'' ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

English summary
After Mumbai incident, delhi chief minister arvind kejriwal request to migrant workers to stay where they are till the lockdown ends on May 3.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X