ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೌರ್ನರ್ ಆದೇಶವನ್ನು ಸಾರ್ವಜನಿಕವಾಗಿ ಹರಿದು ಹಾಕಿದ ಅರವಿಂದ್ ಕೇಜ್ರಿವಾಲ್

By Manjunatha
|
Google Oneindia Kannada News

ನವದೆಹಲಿ, ಜುಲೈ 30: ದೆಹಲಿ ಸರ್ಕಾರ ಮತ್ತು ಅಲ್ಲಿನ ಗೌರ್ನರ್ ನಡುವಿನ ಕಿತ್ತಾಟ ಮುಗಿಯುವ ಯಾವ ಲಕ್ಷಣವೂ ಕಾಣುತ್ತಿಲ್ಲ.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಗೌರ್ನರ್ ಆದೇಶವನ್ನು ತುಂಬಿದ ಸಾರ್ವಜನಿಕ ಸಭೆಯಲ್ಲಿಯೇ ಹರಿದು ಬಿಸಾಡಿ ಗೌರ್ನರ್ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ.

ದೆಹಲಿಗೆ ಪೂರ್ಣ ರಾಜ್ಯದ ಸ್ಥಾನಮಾನವಿಲ್ಲ: ಸುಪ್ರೀಂ ಕೋರ್ಟ್ದೆಹಲಿಗೆ ಪೂರ್ಣ ರಾಜ್ಯದ ಸ್ಥಾನಮಾನವಿಲ್ಲ: ಸುಪ್ರೀಂ ಕೋರ್ಟ್

ಸಾರ್ವಜನಿಕ ಸಂವಾದದಲ್ಲಿ ಭಾಗವಹಿಸಿದ್ದ ಅರವಿಂದ ಕೇಜ್ರಿವಾಲ್ ಅವರು, ಗೌರ್ನರ್ ಅವರು ಸಿಸಿಟಿವಿ ಅಳವಡಿಕೆ ಸಂಬಂಧ ನೀಡಿದ್ದ ಆದೇಶದ ಪ್ರತಿಯನ್ನು ಜನರ ಎದುರು ಹರಿದು ಬಿಸಾಡಿದರು.

Delhi CM Arvind Kejriwal tears off Governors order in public program

ಸಿಸಿಟಿವಿ ಹಾಕಿಕೊಳ್ಳಲು ಪರವಾನಗಿ ಪಡೆಯಬೇಕು ಎಂದು ಗೌರ್ನರ್ ಆದೇಶ ಹೊರಡಿಸಿದ್ದರು. ಆದರೆ ಈ ಆದೇಶಕ್ಕೆ ವಿರೋಧ ವ್ಯಕ್ತಪಡಿಸಿದ ಅರವಿಂದ ಕೇಜ್ರಿವಾಲ್ ಇದೊಂದು ಜನರಿಂದ ವಸೂಲಿ ಮಾಡುವ ಆದೇಶ ಇಂತಹಾ ಆದೇಶಕ್ಕೆ ಈ ರೀತಿಯ ಮರ್ಯಾದೆ ಮಾಡಬೇಕು ಎಂದು ಆದೇಶದ ಪ್ರತಿಯನ್ನು ಹರಿದು ಹಾಕಿದರು.

ಕೊನೆಗೂ ಪ್ರತಿಭಟನೆ ಹಿಂಪಡೆದ ಅರವಿಂದ ಕೇಜ್ರಿವಾಲ್ಕೊನೆಗೂ ಪ್ರತಿಭಟನೆ ಹಿಂಪಡೆದ ಅರವಿಂದ ಕೇಜ್ರಿವಾಲ್

ಕೆಲವು ದಿನಗಳ ಹಿಂದೆಯಷ್ಟೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸೇರಿ ಕೆಲವು ಸಚಿವರು ಗೌರ್ನರ್ ಅವರ ನಿವಾಸದಲ್ಲಿ ಉಪವಾಸ ಸತ್ಯಾಗ್ರಹ ಕೂತು ಪ್ರತಿಭಟನೆ ಮಾಡಿದ್ದರು.

English summary
Delhi CM Arvind Kejriwal tears off Governor's order about CCTV installation in a public program. He said it is a money minded order it should be treat like this only.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X