ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ಷರಧಾಮ್ ದೇವಸ್ಥಾನದಲ್ಲಿ ದೀಪಾವಳಿ ಪೂಜೆ ನೆರವೇರಿಸಿದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್

|
Google Oneindia Kannada News

ನವದೆಹಲಿ, ನವೆಂಬರ್ 15: ಭಜನೆ, ಆರತಿ ಮತ್ತು ದೀಪಗಳೊಂದಿಗೆ ಅದ್ಧೂರಿ ಸಮಾರಂಭದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಶನಿವಾರ ಅಕ್ಷರಧಾಮ್ ದೇವಸ್ಥಾನದಲ್ಲಿ ತಮ್ಮ ಕುಟುಂಬ ಮತ್ತು ಕ್ಯಾಬಿನೆಟ್ ಸಚಿವರೊಂದಿಗೆ ದೀಪಾವಳಿ ಪೂಜೆಯನ್ನು ನಡೆಸಿದರು.

ದೆಹಲಿಯಲ್ಲಿ ಮಾಲಿನ್ಯ ಮಟ್ಟ ಹೆಚ್ಚುತ್ತಿರುವುದರಿಂದ ಮತ್ತು ಕೊರೊನಾವೈರಸ್ ಹಿನ್ನೆಲೆಯಿಂದಾಗಿ ಪಟಾಕಿಗಳನ್ನು ಸಿಡಿಸಬಾರದು ಎಂದು ಕೇಜ್ರಿವಾಲ್ ಜನರಲ್ಲಿ ಮನವಿ ಮಾಡಿದ್ದರು. ಟಿವಿ ಚಾನೆಲ್‌ಗಳು ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ನೇರ ಪ್ರಸಾರವಾಗುತ್ತಿದ್ದ "ದೀಪಾವಳಿ ಪೂಜಾ' ಕಾರ್ಯಕ್ರಮದಲ್ಲಿ ತಮ್ಮೊಂದಿಗೆ ಸೇರಿಕೊಳ್ಳಬೇಕೆಂದು ಅವರು ವಿನಂತಿಸಿದ್ದರು.

ಹೊಗೆಯಿಂದ ಆವೃತವಾದ ದೆಹಲಿ; ಇನ್ನಷ್ಟು ಕುಸಿದ ವಾಯು ಗುಣಮಟ್ಟಹೊಗೆಯಿಂದ ಆವೃತವಾದ ದೆಹಲಿ; ಇನ್ನಷ್ಟು ಕುಸಿದ ವಾಯು ಗುಣಮಟ್ಟ

"ಇಂದು ಎರಡು ಕೋಟಿ ದೆಹಲಿ ಜನರ ಕುಟುಂಬದೊಂದಿಗೆ ಒಟ್ಟಾಗಿ ದೀಪಾವಳಿ ಪೂಜೆ ನೆರವೇರಿಸಿದೆ. ಎಲ್ಲರ ಸಂತೋಷ, ಆರೋಗ್ಯ ಮತ್ತು ಸಮೃದ್ಧಿಗಾಗಿ ಪ್ರಾರ್ಥಿಸಿದೆ. ಎಲ್ಲರೂ ಯೋಗಕ್ಷೇಮವಾಗಿರಲಿ' ಎಂದು ಕೇಜ್ರಿವಾಲ್ ಕಾರ್ಯಕ್ರಮದ ನಂತರ ಟ್ವೀಟ್ ಮಾಡಿದ್ದಾರೆ.

Delhi CM Arvind Kejriwal Performs Deepavali Puja At Akshardham Temple

ದೆಹಲಿ ವಿಧಾನಸಭಾ ಸ್ಪೀಕರ್ ರಾಮ್ ನಿವಾಸ್ ಗೋಯೆಲ್, ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಎಎಪಿ ಸಂಸದರು ಮತ್ತು ಶಾಸಕರು ಮತ್ತು ದೆಹಲಿ ಸರ್ಕಾರದ ಹಿರಿಯ ಅಧಿಕಾರಿಗಳು "ದೀಪಾವಳಿ ಪೂಜಾ' ಸಮಾರಂಭದ ಭಾಗವಾಗಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ಅರ್ಚಕರು ಮಂತ್ರಗಳನ್ನು ಪಠಿಸಿದಂತೆ, ಮುಖ್ಯಮಂತ್ರಿ ಮತ್ತು ಅವರ ಮಂತ್ರಿಗಳು ಮಂತ್ರಗಳನ್ನು ಹೇಳಿದರು. ಖ್ಯಾತ ಗಾಯಕ ಅನೂಪ್ ಜಲೋಟಾ ಸಮಾರಂಭದಲ್ಲಿ ವಿವಿಧ ಭಜನೆಗಳನ್ನು ಹಾಡಿದರು.

English summary
Delhi Chief Minister Arvind Kejriwal held a Deepavali puja with his family and cabinet ministers at the Akshardham Temple on Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X