ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಖ್ ನರಮೇಧ: ಅರವಿಂದ್ ಕೇಜ್ರಿವಾಲ್ ಒಂದು ಟ್ವೀಟಿಗೆ ಸಾವಿರ ಮರುಪ್ರಶ್ನೆ

|
Google Oneindia Kannada News

Recommended Video

ಕೇಜ್ರಿವಾಲ್ ಅವರ ಟ್ವೀಟಿಗೆ ಸುಮಾರು 1,600ಕ್ಕೂ ಹೆಚ್ಚು ಕಾಮೆಂಟುಗಳು ಬಂದಿವೆ

1984 ರಲ್ಲಿ ನಡೆದ ಸಿಖ್ ನರಮೇಧಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ಸಜ್ಜನ್ ಕುಮಾರ್ ಅವರನ್ನು ದೆಹಲಿಯ ನ್ಯಾಯಾಲಯ ದೋಷಿ ಎಂದು ಪರಿಗಣಿಸಿ, ಜೀವಾವಧಿ ಶಿಕ್ಷೆ ವಿಧಿಸಿದ್ದು, ಅವರು ಡಿ.31ರೊಳಗೆ ಶರಣಾಗುವಂತೆ ಆದೇಶಿಸಿದೆ. ಆ ಮೂಲಕ, ಘಟನೆ ನಡೆದ 34ವರ್ಷಗಳ ನಂತರ ತೀರ್ಪು ಹೊರಬಿದ್ದಿದೆ.

ದೆಹಲಿ ನ್ಯಾಯಾಲಯದ ತೀರ್ಪು ಕಾಂಗ್ರೆಸ್ ನಾಯಕರಲ್ಲಿ ನಡುಕ ಹುಟ್ಟಿಸಿದೆ. ಸಿಖ್ಕರ ವಿರುದ್ದ ನಡೆದ ದೊಂಬಿಯಲ್ಲಿ ಕೇಳಿಬರುತ್ತಿದ್ದ ಮತ್ತೊಂದು ಹೆಸರು ಕಮಲ್ ನಾಥ್, ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ದಿನವೇ, ಕೋರ್ಟ್ ತೀರ್ಪು ಹೊರಬಿದ್ದಿರುವುದು ವಿಶೇಷ.

1984ರ ಸಿಖ್ ದಂಗೆ:ಕಾಂಗ್ರೆಸ್ಸಿನ ಸಜ್ಜನ್ ಕುಮಾರ್ ಗೆ ಜೀವಾವಧಿ ಶಿಕ್ಷೆ1984ರ ಸಿಖ್ ದಂಗೆ:ಕಾಂಗ್ರೆಸ್ಸಿನ ಸಜ್ಜನ್ ಕುಮಾರ್ ಗೆ ಜೀವಾವಧಿ ಶಿಕ್ಷೆ

31.10.1984ರಂದು ಇಂದಿರಾ ಗಾಂಧಿ ತಮ್ಮ ಅಂಗರಕ್ಷರಿಂದಲೇ ಹತ್ಯೆಯಾದ ನಂತರದ ಮೂರ್ನಾಲ್ಕು ದಿನಗಳಲ್ಲಿ ನಡೆದ ಹಿಂಸಾಚಾರದಲ್ಲಿ ಮೂರು ಸಾವಿರಕ್ಕೂ ಹೆಚ್ಚು ಸಿಖ್ ಸಮುದಾಯದವರ ಮಾರಣಹೋಮ ನಡೆದಿತ್ತು. ದೊಡ್ಡದೊಂದು ಮರಬಿದ್ದಾಗ, ಸುತ್ತಮುತ್ತಲಿನ ಭೂಮಿ ಕಂಪಿಸುವುದು ಸಹಜ ಎಂದು, ರಾಜೀವ್ ಗಾಂಧಿ ಪರೋಕ್ಷವಾಗಿ ನರಮೇಧವನ್ನು ಸಮರ್ಥಿಸಿಕೊಂಡಿದ್ದರು.

ದೆಹಲಿ ನ್ಯಾಯಾಲಯದ ತೀರ್ಪು ಪ್ರಕಟಗೊಂಡ ನಂತರ, ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿದ್ದು, ಇದು ಸಾಮಾಜಿಕ ತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಕೇಜ್ರಿವಾಲ್ ಅವರ ಟ್ವೀಟಿಗೆ ಸುಮಾರು 1,600ಕ್ಕೂ ಹೆಚ್ಚು ಕಾಮೆಂಟುಗಳು ಬಂದಿವೆ.

ಸಿಖ್ಖರ ಹತ್ಯಾಕಾಂಡದ ಅಪರಾಧಿ: ಯಾರು ಈ ಸಜ್ಜನ್ ಕುಮಾರ್? ಸಿಖ್ಖರ ಹತ್ಯಾಕಾಂಡದ ಅಪರಾಧಿ: ಯಾರು ಈ ಸಜ್ಜನ್ ಕುಮಾರ್?

ದೆಹಲಿ ನ್ಯಾಯಾಲಯದ ತೀರ್ಪನ್ನು ಸ್ವಾಗತಿಸಿ ಕೇಜ್ರಿವಾಲ್ ಟ್ವೀಟ್ ಮಾಡಿದ್ದರು. ತೀರ್ಪನ್ನು ಸ್ವಾಗತಿಸುವ ನಿಮಗೆ ಬದ್ದತೆ ಇದೆಯೇ ಎಂದು ಟ್ವಿಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಅದರಲ್ಲಿ ಕೆಲವೊಂದು ಆಯ್ದ ಕಾಮೆಂಟುಗಳನ್ನು ಇಲ್ಲಿ ಪ್ರಕಟಿಸಲಾಗಿದೆ.

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಟ್ವೀಟ್

1984ರ ಗಲಭೆ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ ಸಜ್ಜನ್ ಕುಮಾರ್ ದೋಷಿ ಎಂದು ನೀಡಿರುವ ತೀರ್ಪನ್ನು ನಾನು ಸ್ವಾಗತಿಸುತ್ತೇನೆ. ಅಧಿಕಾರದಲ್ಲಿದ್ದವರಿಂದ ಕೊಲ್ಲಲ್ಪಟ್ಟ ಮುಗ್ಧರು ತುಂಬಾ ನೋವಿನಿಂದ ಈ ತೀರ್ಪಿಗಾಗಿ ಕಾಯುತ್ತಿದ್ದರು ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿದ್ದರು.

ಇವರೆಲ್ಲಾ ವಿದ್ಯಾವಂತ ಕತ್ತೆಗಳು

ಇವರೆಲ್ಲಾ ವಿದ್ಯಾವಂತ ಕತ್ತೆಗಳು

ಇವರೆಲ್ಲಾ ವಿದ್ಯಾವಂತ ಕತ್ತೆಗಳು, ತೀರ್ಪನ್ನು ಸ್ವಾಗತಿಸುವ ಇವರುಗಳು, ಕಾಂಗ್ರೆಸ್ ಮುಖ್ಯಮಂತ್ರಿಗಳ ಪ್ರಮಾಣವಚನದಲ್ಲಿ ಭಾಗವಹಿಸುತ್ತಾರೆ. ನಿಮಗೆ ನಾಚಿಕೆಯಾಗಬೇಕು, ಕಮಲ್ ನಾಥ್ ಪ್ರಮಾಣವಚನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೀರಿ, ಅವರು ಕೂಡಾ ಹತ್ಯಾಕಾಂಡದ ಆರೋಪಿಗಳಲ್ಲಿ ಒಬ್ಬರು.

1984 ಸಿಖ್ ಹತ್ಯಾಕಾಂಡ : ಸೀಮೆಎಣ್ಣೆ ಸುರಿದು ಸರ್ದಾರ್ಜಿಗೆ ಬೆಂಕಿ ಹಚ್ಚಿದ್ದ ದುರುಳರು 1984 ಸಿಖ್ ಹತ್ಯಾಕಾಂಡ : ಸೀಮೆಎಣ್ಣೆ ಸುರಿದು ಸರ್ದಾರ್ಜಿಗೆ ಬೆಂಕಿ ಹಚ್ಚಿದ್ದ ದುರುಳರು

ಸುಪ್ರೀಂಕೋರ್ಟ್ ತೀರ್ಪು ಹೊರಬರಬೇಕಾಗಿದೆ

ಸುಪ್ರೀಂಕೋರ್ಟ್ ತೀರ್ಪು ಹೊರಬರಬೇಕಾಗಿದೆ

ಕಮಲ್ ನಾಥ್ ಅವರ ಪ್ರಮಾಣವಚನಕ್ಕೆ ಯಾಕೆ ಹೋಗಿದ್ದೀರಿ.. 34ವರ್ಷಗಳ ನಂತರ ತೀರ್ಪು ಹೊರಬಿದ್ದಿದೆ. ಇನ್ನು ಸುಪ್ರೀಂಕೋರ್ಟ್ ತೀರ್ಪು ಹೊರಬರಬೇಕಾಗಿದೆ. ಇಷ್ಟು ವರ್ಷ ಕಾಂಗ್ರೆಸ್ ಇದನ್ನು ತಳ್ಳಿಕೊಂಡೇ ಬಂತು.. ದಂಗೆಯ ಹಿಂದೆ ಕಮಲ್ ನಾಥ್, ಜಗದೀಶ್ ಟೈಟ್ಲರ್, ಸಜ್ಜನ್ ಕುಮಾರ್ ಅವರ ಕೈವಾಡವಿರುವುದೂ ಸ್ಪಷ್ಟ.

ಕಾಂಗ್ರೆಸ್ ಹೆಸರು ಹೇಳಲು ನಾಚಿಕೆಯಾಗುತ್ತಿದೆಯಾ?

ಕಾಂಗ್ರೆಸ್ ಹೆಸರು ಹೇಳಲು ನಾಚಿಕೆಯಾಗುತ್ತಿದೆಯಾ?

ಕಾಂಗ್ರೆಸ್ ಹೆಸರು ಹೇಳಲು ನಾಚಿಕೆಯಾಗುತ್ತಿದೆಯಾ? ಕಾಂಗ್ರೆಸ್ ಪ್ಲೇಟಿನಲ್ಲಿ ಊಟ ಮಾಡುವ ನೀವು, ಇನ್ನೊಂದು ಕಡೆ ನೋವು ತೋಡಿಕೊಳ್ಳುತ್ತಾ, ಕಮಲ್ ನಾಥ್ ಅವರ ಶಪಥಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೀರಿ.. ದೆಹಲಿಯಲ್ಲಿ ಕಾಂಗ್ರೆಸ್ ಜೊತೆ ಕೈಜೋಡಿಸಿ ಚುನಾವಣೆಗೆ ಇಳಿಯುವ ಸಾಧ್ಯತೆಯಿದೆ.. ಎನ್ನುವ ಟ್ವೀಟ್..

'ನಮ್ಮ ತಾಯಿಯ ಹತ್ಯೆ ಮಾಡಲಾಗಿದೆ. ಸರ್ದಾರರನ್ನು ಕೊಲ್ಲಿರಿ'!'ನಮ್ಮ ತಾಯಿಯ ಹತ್ಯೆ ಮಾಡಲಾಗಿದೆ. ಸರ್ದಾರರನ್ನು ಕೊಲ್ಲಿರಿ'!

ಭ್ರಷ್ಟಾಚಾರದ ವಿರುದ್ದ ಹೋರಾಟ ಎಂದಿದ್ದ ನಿಮಗೆ ಈಗ ಕುರ್ಚಿ ಮುಖ್ಯ

ಭ್ರಷ್ಟಾಚಾರದ ವಿರುದ್ದ ಹೋರಾಟ ಎಂದಿದ್ದ ನಿಮಗೆ ಈಗ ಕುರ್ಚಿ ಮುಖ್ಯ

ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳುತ್ತೀರಿ.. ಕಾಂಗ್ರೆಸ್ ವಿರುದ್ದ ಹೋರಾಟ ಎಂದಿದ್ದ ನೀವು, ಅದೇ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳಲು ಹೊರಟಿದ್ದೀರಾ..ಭ್ರಷ್ಟಾಚಾರದ ವಿರುದ್ದ ಹೋರಾಟ ಎಂದಿದ್ದ ನಿಮಗೆ ಈಗ ಕುರ್ಚಿ ಮುಖ್ಯ. ನೀವು ಜನರ ವಿಶ್ವಾಸಕ್ಕೆ ದ್ರೋಹ ಬಗೆದಿದ್ದೀರಿ.. ಜನ ನಿಮ್ಮನ್ನು ಕ್ಷಮಿಸುವುದಿಲ್ಲ.

English summary
Delhi Chief Minister Arvind Kejriwal on Delhi High Court verdict on 1984 Sikh Verdict, twitterite strong comments to Kejriwal tweet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X