ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಎಂ ಅರವಿಂದ್ ಕೇಜ್ರಿವಾಲ್ ಯಾಕೆ ನಾಮಪತ್ರ ಸಲ್ಲಿಸಲಿಲ್ಲ ಗೊತ್ತೆ?

|
Google Oneindia Kannada News

Recommended Video

ಯಡಿಯೂರಪ್ಪ ವಿರುದ್ಧ ಸಿದ್ದರಾಮಯ್ಯ ಗರಂ | SIDDARAMAIAH | YEDIYURAPPA | ONEINDIA KANNADA

ನವದೆಹಲಿ, ಜನವರಿ.20: ದೆಹಲಿಯಲ್ಲಿ ವಿಧಾನಸಭಾ ಚುನಾವಣೆ ರಂಗು ಪಡೆದುಕೊಳ್ಳುತ್ತಿದ್ದು, ಸೋಮವಾರ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಾಮಪತ್ರ ಸಲ್ಸಿಸಬೇಕಿತ್ತು. ಆದರೆ ಪೂರ್ವ ನಿಗದಿಯಂತೆ ಕೇಜ್ರಿವಾಲ್ ನಾಮಪತ್ರ ಸಲ್ಲಿಸಲು ಸಾಧ್ಯವಾಗಲಿಲ್ಲ.

ಸಿಎಂ ಅರವಿಂದ್ ಕೇಜ್ರಿವಾಲ್ ಸೋಮವಾರ ಮಧ್ಯಾಹ್ನ 3 ಗಂಟೆಗೆ ಬೃಹತ್ ರೋಡ್ ಶೋನಲ್ಲಿ ತೆರಳಿ ನಾಮಪತ್ರ ಸಲ್ಲಿಸಬೇಕಿತ್ತು. ಅದಕ್ಕೂ ಮೊದಲು ದೆಹಲಿಯಲ್ಲಿ ಬೃಹತ್ ರೋಡ್ ಶೋ ನಡೆಸಲಾಯಿತು. ಈ ವೇಳೆ ನಿರೀಕ್ಷೆಗೂ ಮೀರಿದ ಮಟ್ಟದಲ್ಲಿ ಕಾರ್ಯಕರ್ತರು ಹಾಗೂ ಜನರು ರೋಡ್ ಶೋನಲ್ಲಿ ಹರಿದು ಬಂದರು. ಹೀಗಾಗಿ ಅಂದುಕೊಂಡ ಸಮಯಕ್ಕೆ ಅರವಿಂದ್ ಕೇಜ್ರಿವಾಲ್ ನಾಮಪತ್ರ ಸಲ್ಲಿಸಲು ಸಾಧ್ಯವಾಗಲಿಲ್ಲ.

ದೆಹಲಿ ಚುನಾವಣೆ: 57 ಅಭ್ಯರ್ಥಿಗಳ ಬಿಜೆಪಿ ಪಟ್ಟಿ ಬಿಡುಗಡೆದೆಹಲಿ ಚುನಾವಣೆ: 57 ಅಭ್ಯರ್ಥಿಗಳ ಬಿಜೆಪಿ ಪಟ್ಟಿ ಬಿಡುಗಡೆ

ಎರಡು ಬಾರಿ ಗೆಲುವು ಸಾಧಿಸಿದ ನವದೆಹಲಿ ವಿಧಾನಸಭಾ ಕ್ಷೇತ್ರದಿಂದಲೇ ಈ ಬಾರಿ ಅರವಿಂದ್ ಕೇಜ್ರಿವಾಲ್ ಕಣಕ್ಕೆ ಇಳಿಯಲಿದ್ದಾರೆ. ಸೋಮವಾರದ ಬದಲು ಮಂಗಳವಾರ ನಾಮಪತ್ರ ಸಲ್ಲಿಸುತ್ತೇನೆ ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.

Delhi CM Arvind Kejriwal Fails To File Nomination Today

ಚಾಂದಿನಿ ಚೌಕ್ ನಿಂದ ಅಲ್ಕಾ ಲಂಬಾ, 54 ಕೈ ಅಭ್ಯರ್ಥಿಗಳ ಪಟ್ಟಿ ಪ್ರಕಟಚಾಂದಿನಿ ಚೌಕ್ ನಿಂದ ಅಲ್ಕಾ ಲಂಬಾ, 54 ಕೈ ಅಭ್ಯರ್ಥಿಗಳ ಪಟ್ಟಿ ಪ್ರಕಟ

ರೋಡ್ ಶೋನಲ್ಲಿ ಭಾಗವಹಿಸಿದ ಜನರಿಗೆ ಸಿಎಂ ಧನ್ಯವಾದ:

ಸೋಮವಾರ ನಡೆದ ಆಮ್ ಆದ್ಮಿ ಪಕ್ಷದ ವತಿಯಿಂದ ನಡೆದ ರೋಡ್ ಶೋನಲ್ಲಿ ಹರಿದು ಬಂದ ಎಲ್ಲರಿಗೂ ಸಿಎಂ ಅರವಿಂದ್ ಕೇಜ್ರಿವಾಲ್ ಧನ್ಯವಾದ ಅರ್ಪಿಸಿದರು. ಈಗಾಗಲೇ ದೆಹಲಿಯ 70 ವಿಧಾನಸಭಾ ಕ್ಷೇತ್ರಗಳಿಗೆ ಆಮ್ ಆದ್ಮಿ ಪಕ್ಷವು ಅಭ್ಯರ್ಥಿಗಳನ್ನು ಘೋಷಿಸಿ ಆಗಿದೆ. ಜನವರಿ.21 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದ್ದು, ಫೆಬ್ರವರಿ.08ರಂದು ಮತದಾನ ಪ್ರಕ್ರಿಯೆ ನಡೆಯಲಿದೆ.

English summary
Delhi CM Arvind Kejriwal Fails To File Nomination Today For Due To Massive Road Show.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X