ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಆಸ್ತಿ ಏರಿಕೆ ಎಷ್ಟು?

|
Google Oneindia Kannada News

Recommended Video

ಹೆಚ್ಚಾಯ್ತು ದೆಹಲಿ ಮುಖ್ಯಮಂತ್ರಿ ಆಸ್ತಿ | Oneindia Kannada

ನವದೆಹಲಿ, ಜನವರಿ 22: ದೇಶದ ಅತಿ ಪ್ರಮಾಣಿಕ ಮುಖ್ಯಮಂತ್ರಿ ಎಂದು ಹೇಳಿಕೊಳ್ಳುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆಸ್ತಿಯು ಕಳೆದ ಐದು ವರ್ಷಗಳಲ್ಲಿ 1.3 ಕೋಟಿ ಏರಿಕೆಯಾಗಿದೆ.

2015ರ ಚುನಾವಣೆ ಸಂದರ್ಭದಲ್ಲಿ 2.1 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದ ಕೇಜ್ರಿವಾಲ್ ಈಗ 3.4 ಕೋಟಿಗೆ ಏರಿಕೆಯಾಗಿದೆ.

ದೆಹಲಿಯಲ್ಲಿ ಮಂಗಳವಾರ ಸಂಜೆ ಸುಮಾರು 6 ಗಂಟೆ ಕಾದು ನಾಮಪತ್ರ ಸಲ್ಲಿಸಿದ ಕೇಜ್ರಿವಾಲ್ ಆಸ್ತಿ ವಿವರದ ಪ್ರಮಾಣಪತ್ರ ಸಲ್ಲಿಸಿದ್ದಾರೆ.

ಕೇಜ್ರಿವಾಲ್ ಪತ್ನಿ ಸುನಿತಾ ಕೇಜ್ರಿವಾಲ್ ಅವರ ಉಳಿತಾಯ ಖಾತೆಯಲ್ಲಿ 2015ರಲ್ಲಿ 15ಲಕ್ಷವಿತ್ತು ಈಗ ಅದು 57 ಲಕ್ಷಕ್ಕೆ ಏರಿಕೆಯಾಗಿದೆ.

ಸತತ ಆರು ಗಂಟೆ ಕಾದು ನಾಮಪತ್ರ ಸಲ್ಲಿಸಿದ ಸಿಎಂ ಕೇಜ್ರಿವಾಲ್ಸತತ ಆರು ಗಂಟೆ ಕಾದು ನಾಮಪತ್ರ ಸಲ್ಲಿಸಿದ ಸಿಎಂ ಕೇಜ್ರಿವಾಲ್

ಕೇಂದ್ರದ ತೆರಿಗೆ ಇಲಾಖೆಯಿಂದ ಸ್ವಯಂ ನಿವೃತ್ತಿ ಪಡೆದ ಬಳಿಕ ಪಡೆದ ಪಿಂಚಣಿ ಹಣ ಹಾಗೂ ಉಳಿತಾಯದಿಂದ ಈ ಏರಿಕೆಯಾಗಿದೆ ಎಂದು ಕೇಜ್ರಿವಾಲ್ ತಿಳಿಸಿದ್ದಾರೆ. ಇನ್ನು ಮುಖ್ಯಮಂತ್ರಿ ಕೇಜ್ರಿವಾಲ್ ಠೇವಣಿಯಲ್ಲಿನ ಉಳಿತಾಯ ಮೊತ್ತ ಕೂಡ ಏರಿಕೆಯಾಗಿದೆ.

2015ರಲ್ಲಿ ಖಾತೆಯಲ್ಲಿ 2.56 ಲಕ್ಷ ಹೊಂದಿದ್ದ ಕೇಜ್ರಿವಾಲ್ ಈಗ 9.65 ಲಕ್ಷ ಹೊಂದಿದ್ದಾರೆ. ಇದಲ್ಲದೆ ಕೇಜ್ರಿವಾಲ್ ಅವರ ಬಳಿ 92 ಲಕ್ಷ ಮೌಲ್ಯದ ಚರಾಸ್ತಿ ಇದ್ದಿದ್ದು ಅದು 1.77 ಕೋಟಿಗೆ ಏರಿಕೆಯಾಗಿದೆ.

ಗ್ಯಾಲರಿ: ದಿಲ್ಲಿ ಗಲ್ಲಿಗಲ್ಲಿಗಳಲ್ಲಿ ಚುನಾವಣೆ ರಂಗೋ ರಂಗು

ಆಮ್ ಆದ್ಮಿ ಪಕ್ಷದ ಹೇಳಿಕೆ ಪ್ರಕಾರ ಕೇಜ್ರಿವಾಲ್ ಚರಾಸ್ತಿ ಮೌಲ್ಯವು ಮಾರುಕಟ್ಟೆಯಲ್ಲಿ ಏರಿಕೆಯಾಗಿರುವುದರಿಂದ ಆಸ್ತಿ ಏರಿಕೆಯಾಗಿದೆ. ಅದನ್ನು ಹೊರತುಪಡಿಸಿದರೆ ಕೇಜ್ರಿವಾಲ್ ಆಸ್ತಿಯಲ್ಲಿಇನ್ಯಾವುದೇ ರೀತಿಯ ಏರಿಕೆಯಾಗಿಲ್ಲ ಎಂದು ಹೇಳಿದೆ.

ಸತತ ಆರು ಗಂಟೆ ಕಾದು ನಾಮಪತ್ರ ಸಲ್ಲಿಕೆ

ಸತತ ಆರು ಗಂಟೆ ಕಾದು ನಾಮಪತ್ರ ಸಲ್ಲಿಕೆ

ತತ ಆರು ಗಂಟೆ ಕಾದ ನಂತರ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಅವರು ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ. ನಿನ್ನೆಯೇ ಅರವಿಂದ ಕೇಜ್ರಿವಾಲ್ ಅವರು ದೆಹಲಿ ವಿಧಾನಸಭೆ ಚುನಾವಣೆಗೆ ನವದೆಹಲಿ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಬೇಕಾಗಿತ್ತು. ಆದರೆ ಅವರ ರೋಡ್‌ ಶೋ ದಿಂದಾಗಿ ನಿಗದಿತ ಸಮಯದ ಒಳಗೆ ನಾಮಪತ್ರ ಸಲ್ಲಿಸಲು ಸಾಧ್ಯವಾಗಿರಲಿಲ್ಲ. ಕಚೇರಿಯಲ್ಲಿದ್ದಾಗಲೇ ಟ್ವೀಟ್ ಮಾಡಿದ್ದ ಕೇಜ್ರಿವಾಲ್, 'ನನ್ನ ಟೋಕನ್ ಸಂಖ್ಯೆ 45, ಇಲ್ಲಿ ಹಲವರು ಚುನಾವಣೆಗೆ ನಾಮಪತ್ರ ಸಲ್ಲಿಸುತ್ತಿದ್ದಾರೆ ಎಂದು ಹೇಳಿದ್ದರು.

ಕೇಜ್ರಿವಾಲ್ ಪತ್ನಿ ಉಳಿತಾಯ ಖಾತೆಯಲ್ಲಿರುವ ಹಣವೆಷ್ಟು?

ಕೇಜ್ರಿವಾಲ್ ಪತ್ನಿ ಉಳಿತಾಯ ಖಾತೆಯಲ್ಲಿರುವ ಹಣವೆಷ್ಟು?

ಕೇಜ್ರಿವಾಲ್ ಪತ್ನಿ ಸುನಿತಾ ಕೇಜ್ರಿವಾಲ್ ಅವರ ಉಳಿತಾಯ ಖಾತೆಯಲ್ಲಿ 2015ರಲ್ಲಿ 15ಲಕ್ಷವಿತ್ತು ಈಗ ಅದು 57 ಲಕ್ಷಕ್ಕೆ ಏರಿಕೆಯಾಗಿದೆ. ಕೇಂದ್ರದ ತೆರಿಗೆ ಇಲಾಖೆಯಿಂದ ಸ್ವಯಂ ನಿವೃತ್ತಿ ಪಡೆದ ಬಳಿಕ ಪಡೆದ ಪಿಂಚಣಿ ಹಣ ಹಾಗೂ ಉಳಿತಾಯದಿಂದ ಈ ಏರಿಕೆಯಾಗಿದೆ ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.

 ಠೇವಣಿಯಲ್ಲಿನ ಉಳಿತಾಯ ಮೊತ್ತ ಕೂಡ ಏರಿಕೆ

ಠೇವಣಿಯಲ್ಲಿನ ಉಳಿತಾಯ ಮೊತ್ತ ಕೂಡ ಏರಿಕೆ

ಇನ್ನು ಮುಖ್ಯಮಂತ್ರಿ ಕೇಜ್ರಿವಾಲ್ ಠೇವಣಿಯಲ್ಲಿನ ಉಳಿತಾಯ ಮೊತ್ತ ಕೂಡ ಏರಿಕೆಯಾಗಿದೆ.ಅರವಿಂದ್ ಕೇಜ್ರಿವಾಲ್, ಆಸ್ತಿ, ಆಮ್ ಆದ್ಮಿ ಪಕ್ಷ, ನವದೆಹಲಿ

2015ರಲ್ಲಿ ಖಾತೆಯಲ್ಲಿ 2.56 ಲಕ್ಷ ಹೊಂದಿದ್ದ ಕೇಜ್ರಿವಾಲ್ ಈಗ 9.65 ಲಕ್ಷ ಹೊಂದಿದ್ದಾರೆ. ಇದಲ್ಲದೆ ಕೇಜ್ರಿವಾಲ್ ಅವರ ಬಳಿ 92 ಲಕ್ಷ ಮೌಲ್ಯದ ಚರಾಸ್ತಿ ಇದ್ದಿದ್ದು ಅದು 1.77 ಕೋಟಿಗೆ ಏರಿಕೆಯಾಗಿದೆ.

ಆಮ್‌ ಆದ್ಮಿ ಪಕ್ಷ ಕೊಟ್ಟ ಸ್ಪಷ್ಟನೆ ಏನು?

ಆಮ್‌ ಆದ್ಮಿ ಪಕ್ಷ ಕೊಟ್ಟ ಸ್ಪಷ್ಟನೆ ಏನು?

ಆಪ್ ಆದ್ಮಿ ಪಕ್ಷದ ಹೇಳಿಕೆ ಪ್ರಕಾರ ಕೇಜ್ರಿವಾಲ್ ಚರಾಸ್ತಿ ಮೌಲ್ಯವು ಮಾರುಕಟ್ಟೆಯಲ್ಲಿ ಏರಿಕೆಯಾಗಿರುವುದರಿಂದ ಆಸ್ತಿ ಏರಿಕೆಯಾಗಿದೆ.

ಅದನ್ನು ಹೊರತುಪಡಿಸಿದರೆ ಕೇಜ್ರಿವಾಲ್ ಆಸ್ತಿಯಲ್ಲಿಇನ್ಯಾವುದೇ ರೀತಿಯ ಏರಿಕೆಯಾಗಿಲ್ಲ ಎಂದು ಹೇಳಿದೆ.

English summary
Delhi Chief Minister Arvind Kejriwal Asset Increased by 1.3 crore. In 2015 It Was 2.1 crore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X