ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ ತೆರವು ಕಾರ್ಯಚರಣೆ: 'ಸ್ವತಂತ್ರ ಭಾರತದ ಅತಿದೊಡ್ಡ ವಿನಾಶ' ಕೇಜ್ರಿವಾಲ್

|
Google Oneindia Kannada News

ದೆಹಲಿ ಮೇ 16: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸೋಮವಾರ ಆಮ್ ಆದ್ಮಿ ಪಕ್ಷದ (ಎಎಪಿ) ಶಾಸಕರೊಂದಿಗೆ ಸಿವಿಲ್ ಲೈನ್ಸ್‌ನಲ್ಲಿರುವ ತಮ್ಮ ನಿವಾಸದಲ್ಲಿ ದಕ್ಷಿಣ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಎಂಸಿಡಿ) ರಾಷ್ಟ್ರ ರಾಜಧಾನಿಯಲ್ಲಿ ಅತಿಕ್ರಮಣ ವಿರೋಧಿ ಅಭಿಯಾನದ ಕುರಿತು ಸಭೆ ನಡೆಸಿದರು. ಎಂಸಿಡಿಯಲ್ಲಿ ಬಿಜೆಪಿಯ 15 ವರ್ಷಗಳ ದುರಾಡಳಿತ, ಅವ್ಯವಸ್ಥೆ ಮತ್ತು ರಾಷ್ಟ್ರ ರಾಜಧಾನಿಯಲ್ಲಿನ ಅಕ್ರಮ ಆಸ್ತಿಯ ತೆರವು ಕಾರ್ಯಚರಣೆಯ ಬಗ್ಗೆ ಕಟುವಾಗಿ ಟೀಕಿಸಿದ ಅವರು, ದೆಹಲಿಯಲ್ಲಿ ಅಕ್ರಮ ಕಟ್ಟಡ ತೆರವು ಕಾರ್ಯಚರಣೆ ಯೋಜಿತ ರೀತಿಯಲ್ಲಿ ಮಾಡಲಾಗಿಲ್ಲ ಎಂದು ದೂರಿದ್ದಾರೆ.

"ದೆಹಲಿಯ ಶೇಕಡಾ 80ಕ್ಕಿಂತ ಹೆಚ್ಚು ಪ್ರದೇಶವನ್ನು ಅಕ್ರಮ ಮತ್ತು ಅತಿಕ್ರಮಣ ಎಂದು ಕರೆಯಬಹುದು, ಅಂದರೆ ನೀವು ಶೇಕಡಾ 80 ರಷ್ಟು ದೆಹಲಿಯನ್ನು ನಾಶಪಡಿಸುತ್ತೀರಾ?" ಎಂದು ಅವರು ಕೇಸರಿ ಪಕ್ಷವನ್ನು ಆನ್‌ಲೈನ್ ಬ್ರೀಫಿಂಗ್‌ನಲ್ಲಿ ಪ್ರಶ್ನೆ ಮಾಡಿದ್ದಾರೆ.

'ಬುಲ್ಡೋಜರ್‌ಗಳೊಂದಿಗೆ ಕಾಲೋನಿಗಳನ್ನು ತಲುಪಿ ಹಲವು ಅಂಗಡಿ ಮತ್ತು ಮನೆಯನ್ನು ಧ್ವಂಸ ಮಾಡುತ್ತಿದ್ದಾರೆ, ಜನರು ಕಟ್ಟಡವನ್ನು ಅಕ್ರಮವಾಗಿಲ್ಲ ಎಂದು ಸಾಬೀತುಪಡಿಸಲು ಕಾಗದಗಳನ್ನು ತೋರಿಸಿದರೂ ಅವರು ಅವುಗಳನ್ನು ಪರಿಶೀಲಿಸುವುದಿಲ್ಲ' ಎಂದು ಅವರು ಹೇಳಿದರು.

Delhi clearance operation: Kejriwal said the greatest destruction of independent India

ಜೊತೆಗೆ ಎಂಸಿಡಿಯನ್ನು ಟೀಕಿಸಿದ ಅವರು ದೆಹಲಿಯಲ್ಲಿ ಅಕ್ರಮವೆಂದು ಪರಿಗಣಿಸಲಾದ 63 ಲಕ್ಷ ಜನರ ಅಂಗಡಿಗಳು ಮತ್ತು ಮನೆಗಳನ್ನು ಬುಲ್ಡೋಜರ್‌ಗಳು ಧ್ವಂಸಗೊಳಿಸಿದರೆ, ಅದು ಸ್ವತಂತ್ರ ಭಾರತದಲ್ಲಿ "ದೊಡ್ಡ ವಿನಾಶ" ಎಂದು ಹೇಳಿದರು. ಅತಿಕ್ರಮಣ ವಿರೋಧಿ ಆಂದೋಲನ ನಡೆಸುತ್ತಿರುವ ರೀತಿಗೆ ಪಕ್ಷವು ವಿರುದ್ಧವಾಗಿದೆ ಎಂದು ಅವರು ಹೇಳಿದರು. ಸುಮಾರು 50 ಲಕ್ಷ ಜನರು ಅನಧಿಕೃತ ಕಾಲೋನಿಗಳಲ್ಲಿದ್ದಾರೆ, 10 ಲಕ್ಷ ಜನರು 'ಜುಗ್ಗಿ'ಗಳಲ್ಲಿದ್ದಾರೆ. ಇವರ ಕಾರ್ಯಚರಣೆ ಮೂಲ ನಕ್ಷೆಗಳಿಗೆ ಅನುಗುಣವಾಗಿಲ್ಲ ಎಂದು ದೂರಿದ್ದಾರೆ.

Delhi clearance operation: Kejriwal said the greatest destruction of independent India

"ಅಲ್ಲಿಗೆ ಅವರು 63 ಲಕ್ಷ ಜನರ ಮನೆಗಳು ಮತ್ತು ಅಂಗಡಿಗಳನ್ನು ಬುಲ್ಡೋಜರ್‌ನಿಂದ ಕೆಡವಿದ್ದಾರೆ. ಇದು ಸ್ವತಂತ್ರ ಭಾರತದಲ್ಲಿ ಸಂಭವಿಸುವ ಅತಿದೊಡ್ಡ ವಿನಾಶವಾಗಿದೆ" ಎಂದು ಅವರು ಕಿಡಿ ಕಾರಿದ್ದಾರೆ. ಆಮ್ ಆದ್ಮಿ ಪಕ್ಷವು ತೆರವು ವಿರುದ್ಧವಾಗಿದೆ ಮತ್ತು ದೆಹಲಿ ಸುಂದರವಾಗಿ ಕಾಣಬೇಕೆಂದು ಬಯಸುತ್ತದೆ. 63 ಲಕ್ಷ ಜನರ ಮನೆ ಮತ್ತು ಅಂಗಡಿಗಳನ್ನು ಧ್ವಂಸಗೊಳಿಸುವುದನ್ನು ಸಹಿಸಲಾಗುವುದಿಲ್ಲ ಎಂದು ಹೇಳಿದ್ದಾರೆ. ಎಎಪಿ ಅತಿಕ್ರಮಣ ಸಮಸ್ಯೆಯನ್ನು ಪರಿಹರಿಸುತ್ತದೆ ಮತ್ತು ಅನಧಿಕೃತ ಕಾಲೋನಿಗಳಲ್ಲಿ ವಾಸಿಸುವ ಜನರು ಮಾಲೀಕತ್ವದ ಹಕ್ಕುಗಳನ್ನು ಪಡೆಯುತ್ತಾರೆ ಎಂದು ಅವರು ಜನರಿಗೆ ಭರವಸೆ ನೀಡಿದರು.

English summary
"More than 80 per cent of the area of ​​Delhi can be called illegal and encroachment, meaning you are destroying 80 per cent of Delhi?" CM Arvind Kejriwal has questioned the saffron party.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X