ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯಲ್ಲಿ ಅಕ್ಟೋಬರ್ 15ರಿಂದ ಚಿತ್ರಮಂದಿರಗಳು ಓಪನ್: ಕೇಜ್ರಿವಾಲ್

|
Google Oneindia Kannada News

ನವದೆಹಲಿ, ಅಕ್ಟೋಬರ್ 07: ದೆಹಲಿಯಲ್ಲಿ ಅಕ್ಟೋಬರ್ 15 ರಿಂದ ಎಲ್ಲಾ ಚಿತ್ರಮಂದಿರಗಳು ತೆರೆಯಲಿವೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.

ಕೊರೊನಾ ಸೋಂಕಿನಿಂದ ಸತತ ಎಂಟು ತಿಂಗಳ ಕಾಲ ಮುಚ್ಚಲಾಗಿದ್ದ ಚಿತ್ರ ಮಂದಿರಗಳು, ಕೇಂದ್ರ ಸರ್ಕಾರ ಮಾರ್ಗಸೂಚಿ ಮೇರೆಗೆ ತೆರೆಯಲಾಗುತ್ತದೆ ಎಂದು ಹೇಳಿದ್ದಾರೆ.

ಭಾರತ; 24 ಗಂಟೆಯಲ್ಲಿ 72,049 ಹೊಸ ಕೋವಿಡ್ ಪ್ರಕರಣ ದಾಖಲು ಭಾರತ; 24 ಗಂಟೆಯಲ್ಲಿ 72,049 ಹೊಸ ಕೋವಿಡ್ ಪ್ರಕರಣ ದಾಖಲು

ಹಾಗೆಯೆ ಎಲ್ಲಾ ವಾರದ ಮಾರುಕಟ್ಟೆಗಳು ತೆರೆಯಲಿವೆ, ಇದುವರೆಗೂ ದಿನದಲ್ಲಿ ಎರಡು ಮಾರುಕಟ್ಟೆಗಳಿಗೆ ತೆರೆಯಲು ಅವಕಾಶ ನೀಡಲಾಗಿತ್ತು. ನಾವು ಕೇಂದ್ರದ ಮಾರ್ಗಸೂಚಿಯನ್ನು ಪಾಲಿಸುತ್ತೇವೆ ಎಂದು ಅವರು ಹೇಳಿದ್ದಾರೆ.

Delhi: Cinema Halls To Open From 15 October

ಚಿತ್ರಮಂದಿರದಲ್ಲಿ ಶೇ.50ರಷ್ಟು ಮಂದಿಗೆ ಮಾತ್ರ ಅವಕಾಶವಿರಲಿದೆ. ಹಾಗೆಯೇ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಪ್ರತಿಯೊಬ್ಬರೂ ಮಾಸ್ಕ್ ಧರಿಸಬೇಕು.

ಹ್ಯಾಂಡ್ ಸ್ಯಾನಿಟೈಸರ್‌ಗಳ ಬಳಕೆ, ಪ್ರತಿಯೊಬ್ಬರೂ ಆರೋಗ್ಯ ಸೇತು ಅಪ್ಲಿಕೇಷನ್ ಡೌನ್‌ಲೋಡ್ ಮಾಡಿಕೊಳ್ಳಬೇಕು.ಚಿತ್ರಮಂದಿರಗಳಲ್ಲಿ ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯ, ಯಾವುದೇ ಲಕ್ಷಣಗಳಿಲ್ಲದವರು ಮಾತ್ರ ಚಿತ್ರಮಂದಿರದೊಳಗೆ ಹೋಗಲು ಅವಕಾಶ.

ನಗದು ಹಣವನ್ನು ನೀಡದೆ ಡಿಜಿಟಲ್ ಮಾದರಿಯನ್ನು ಬಳಸುವಂತೆ ಸೂಚಿಸಲಾಗಿದೆ. ಇಂಟರ್‌ಮಿಷನ್ ಸಂದರ್ಭದಲ್ಲಿ ಹೊರಗೆ ಹೋಗದಿರುವಂತೆ ಸೂಚಿಸಿದೆ, ಚಿತ್ರಮಂದಿರದೊಳಗೆ ಯಾವುದೇ ಆಹಾರವನ್ನು ಡೆಲಿವರಿ ಮಾಡಲಾಗುವುದಿಲ್ಲ. ಎಸಿ 24-30 ಡಿಗ್ರಿ ಸೆಲ್ಸಿಯಸ್ ಒಳಗಿರಬೇಕು. ದೆಹಲಿಯಲ್ಲಿ 5616 ಹೊಸ ಪ್ರಕರಣಗಳು ಪತ್ತೆಯಾಗಿವೆ. 35 ಮಂದಿ ಸಾವನ್ನಪ್ಪಿದ್ದಾರೆ.

English summary
Amid the Unlock 5 plan announced by the Centre for the month of October, which further relaxes the restrictions imposed due to novel coronavirus pandemic, Delhi government today announced that cinema halls, theatres can open from 15 October
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X