ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಸ್ಪತ್ರೆಗಳಲ್ಲಿ ಅಕ್ರಮ: 'ನಿಮ್ಮನ್ನು ಸುಮ್ಮನೆ ಬಿಡಲ್ಲ' ಎಂದ ದೆಹಲಿ ಸಿಎಂ

|
Google Oneindia Kannada News

ದೆಹಲಿ, ಜೂನ್ 6: ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಿರುವ ಈ ಸಂದರ್ಭದಲ್ಲಿ ಸರ್ಕಾರಕ್ಕೆ ಸಹಕಾರ ನೀಡುತ್ತಿಲ್ಲ ಎಂಬ ಕಾರಣಕ್ಕೆ ಕೆಲವು ಖಾಸಗಿ ಆಸ್ಪತ್ರೆಗಳಿಗೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಎಚ್ಚರಿಕೆ ನೀಡಿದ್ದಾರೆ.

Recommended Video

ಪಕ್ಷದ ಮುಖಂಡರನ್ನ ವಾಪಸ್ ಕರೆತರೋ ಬಿಗ್ಗೆ ಮಾತನಾಡಿದ ಡಿಕೆಶಿ | DK Shivakumar | Oneindia Kannada

ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲು ನಿರಾಕರಣೆ ಮಾಡಲಾಗುತ್ತಿದೆ. ಹಾಸಿಗೆಗಳು ಇದ್ದರೂ ಇಲ್ಲವೆಂದು ಸುಳ್ಳು ಹೇಳುತ್ತಿದ್ದಾರೆ. ನಂತರ ಕೆಲವು ರಾಜಕೀಯ ಪಕ್ಷಗಳ ಜೊತೆ ಕೈಸೇರಿಸಿ ಹಾಸಿಗೆ ವಿಚಾರದಲ್ಲಿ ಅಕ್ರಮ ಎಸೆಯಲಾಗುತ್ತಿದೆ. ಇದನ್ನು ನೋಡಿಕೊಂಡು ಸುಮ್ಮಿರುವುದಿಲ್ಲ. ಇದು ನಿಮಗೆ ಕೊನೆ ಎಚ್ಚರಿಕೆ ಎಂದು ಕೇಜ್ರಿವಾಲ್ ವಾರ್ನ್ ಮಾಡಿದ್ದಾರೆ.

ಆಸ್ಪತ್ರೆಯ ಹಾಸಿಗೆಗಳ ಲಭ್ಯತೆ ಕುರಿತ ಮಾಹಿತಿಗೆ 'ದೆಹಲಿ ಕೊರೊನಾ' ಅಪ್ಲಿಕೇಷನ್ ಆಸ್ಪತ್ರೆಯ ಹಾಸಿಗೆಗಳ ಲಭ್ಯತೆ ಕುರಿತ ಮಾಹಿತಿಗೆ 'ದೆಹಲಿ ಕೊರೊನಾ' ಅಪ್ಲಿಕೇಷನ್

ಇಂದು ಬೆಳಿಗ್ಗೆ ದೆಹಲಿಯಲ್ಲಿನ ಕೊರೊನಾ ಪರಿಸ್ಥಿತಿ ಕುರಿತು ಮಾಹಿತಿ ನೀಡಿದ ಸಿಎಂ ''ಖಾಸಗಿ ಆಸ್ಪತ್ರೆಗಳು ತಮ್ಮ ಬಳಿ ಬರುವ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಬೇಕಾಗುತ್ತದೆ. ಇಂದು ವೇಳೆ ಚಿಕಿತ್ಸೆ ನಿರಾಕರಣೆ ಮಾಡಿದ್ರೆ ಅಂತಹ ಆಸ್ಪತ್ರೆಗಳು ಕಾರ್ಯನಿರ್ವಹಿಸಲು ಬಿಡುವುದಿಲ್ಲ'' ಎಂದು ಹೇಳಿದ್ದಾರೆ.

''ಅಕ್ರಮವಾಗಿ ಬೆಡ್ ಮಾರಾಟವನ್ನು ನಿಲ್ಲಿಸಲು ನಾವು ಮೊಬೈಲ್ ಅಪ್ಲಿಕೇಶನ್ ಪ್ರಾರಂಭಿಸಿದ್ದೇವೆ. ಆಸ್ಪತ್ರೆಗಳಲ್ಲಿನ ಹಾಸಿಗೆಗಳು ಮತ್ತು ವೆಂಟಿಲೇಟರ್‌ಗಳ ಸಂಖ್ಯೆಯ ಮಾಹಿತಿಯನ್ನು ಪಾರದರ್ಶಕವಾಗಿಸಲು ನಾವು ಯೋಚಿಸಿದ್ದೇವೆ ಎಂದು ಕೇಜ್ರಿವಾಲ್ ಮಾಹಿತಿ ನೀಡಿದ್ದಾರೆ.

Delhi Chief Minister Arvind Kejriwal warn private hospitals

ಕೊರೊನಾ ವೈರಸ್ ಪರಿಸ್ಥಿತಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಕೆಲವು ಆಸ್ಪತ್ರೆಗಳು, ಸರ್ಕಾರಕ್ಕೆ ಸರಿಯಾದ ಮಾಹಿತಿ ನೀಡುತ್ತಿಲ್ಲ. ಕೊವಿಡ್‌ ರೋಗಿಗಳು ಬಂದ್ರೆ ಹಾಸಿಗೆಗಳು ಇಲ್ಲ ಎಂದು ಹೇಳಿ ಕಳುಹಿಸುತ್ತಿದೆ. ಆದರೆ, ಅಕ್ರಮವಾಗಿ ಬೇರೆಯವರಿಗೆ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪ ಇದೆ.

ಕೊರೊನಾ ಪೀಡಿತ ಮುಂಬೈನಿಂದ ಹೊರಬಿದ್ದ ಗುಡ್ ನ್ಯೂಸ್ಕೊರೊನಾ ಪೀಡಿತ ಮುಂಬೈನಿಂದ ಹೊರಬಿದ್ದ ಗುಡ್ ನ್ಯೂಸ್

ಪ್ರಸ್ತುತ ದೆಹಲಿಯಲ್ಲಿ 26333 ಜನರಿಗೆ ಕೊರೊನಾ ಸೋಂಕು ತಗುಲಿದೆ. 708 ಮಂದಿ ಸೋಂಕಿನಿಂದ ಚೇತರಿಸಿಕೊಳ್ಳದೇ ಮೃತಪಟ್ಟಿದ್ದಾರೆ.

English summary
Some hospitals are denying admission to COVID19 patients. I am warning, if you continue this kind of work, you will not be spared: Arvind Kejriwal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X