ದೆಹಲಿಯಲ್ಲಿ 8.36 ರೂಪಾಯಿ ಕಡಿಮೆಯಾಗಲಿದೆ ಡೀಸೆಲ್ ದರ: ವ್ಯಾಟ್ ಇಳಿಸಲು ಕ್ಯಾಬಿನೆಟ್ ನಿರ್ಧಾರ
ನವದೆಹಲಿ, ಜುಲೈ 30: ರಾಷ್ಟ್ರ ರಾಜಧಾನಿಯಲ್ಲಿ ದೆಹಲಿಯಲ್ಲಿ ವ್ಯಾಟ್ ದರವನ್ನು ಇಳಿಸಲು ದೆಹಲಿ ಸರ್ಕಾರದ ಕ್ಯಾಬಿನೆಟ್ ನಿರ್ಧರಿಸಿದ್ದು, ಈ ಹಿಂದೆ ವಿಧಿಸಿದ್ದ ವ್ಯಾಟ್ ಶೇ 30 ರಿಂದ 16.75 ಪರ್ಸೆಂಟ್‌ಗೆ ತಗ್ಗಲಿದೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಕೊರೊನಾ ಸಾಂಕ್ರಾಮಿಕ ಲಾಕ್‌ಡೌನ್ ಸಂದರ್ಭದಲ್ಲಿ ದೆಹಲಿ ಸರ್ಕಾರ ಸೇರಿದಂತೆ ದೇಶದ ಅನೇಕ ರಾಜ್ಯಗಳು ಆದಾಯ ಕೊರತೆ ಎದುರಿಸುತ್ತಿದ್ದವು. ಈ ಹಿನ್ನೆಲೆಯಲ್ಲಿ ತೈಲಗಳ ಮೇಲೆ ವ್ಯಾಟ್ ದರ ಏರಿಸಿದ್ದವು. ದೆಹಲಿಯಲ್ಲಿ ಡೀಸೆಲ್ ಮೇಲಿನ ವ್ಯಾಟ್ ಶೇ. 30ರಷ್ಟು ಏರಿಕೆ ಮಾಡಲಾಗಿತ್ತು. ಇದರಿಂದಾಗಿ ಡೀಸೆಲ್, ಪೆಟ್ರೋಲ್‌ಗಿಂತಲೂ ದುಬಾರಿಯಾಗಿದ್ದು ಕೂಡ ವರದಿಯಾಗಿತ್ತು.
ದೆಹಲಿಯಲ್ಲಿ ಶೇ.88ರಷ್ಟು ಮಂದಿ ಕೊವಿಡ್ 19ನಿಂದ ಚೇತರಿಕೆ
ದೆಹಲಿ ಸರ್ಕಾರದ ವ್ಯಾಟ್ ಇಳಿಕೆಯ ನಿರ್ಧಾರದಿಂದ ಡೀಸೆಲ್ ಪ್ರತಿ ಲೀಟರ್‌ಗೆ 82 ರೂಪಾಯಿಯಿಂದ 73.64 ರೂಪಾಯಿಗೆ ತಗ್ಗಲಿದೆ. ಇದರಿಂದಾಗಿ ಡೀಸೆಲ್ ಪ್ರತಿ ಲೀಟರ್‌ಗೆ 8.36 ರೂಪಾಯಿ ಕಡಿಮೆಯಾಗಲಿದೆ.
ದೆಹಲಿ ಸರ್ಕಾರದ ಈ ನಿರ್ಧಾರವು ಇತರೇ ರಾಜ್ಯಗಳಲ್ಲಿ ಈಗಾಗಲೇ ತೈಲದ ಮೇಲಿನ ವ್ಯಾಟ್ ಏರಿಕೆಯನ್ನು ತಗ್ಗಿಸಲು ಪ್ರೇರೇಪಿಸುತ್ತದೇ ಎಂಬುದನ್ನು ಕಾದು ನೋಡಬೇಕು.
ಇನ್ನು ಇದೇ ವೇಳೆಯಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಕೆಲವೇ ದಿನಗಳ ಹಿಂದೆ ಘೋಷಿಸಲಾದ ಜಾಬ್ ಪೋರ್ಟಲ್‌ನಲ್ಲಿ ನಮಗೆ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ಸುಮಾರು 7,577 ಕಂಪನಿಗಳು ನೋಂದಣಿಯಾಗಿವೆ, 2,04,785 ಉದ್ಯೋಗಗಳನ್ನು ಜಾಹೀರಾತು ಮಾಡಲಾಗಿದೆ ಮತ್ತು 3,22,865 ಜನರು ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದಿದ್ದಾರೆ.



Click it and Unblock the Notifications
























