ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯಲ್ಲಿ ಲಾಕ್ ಡೌನ್‌ ವಿನಾಯಿತಿ; ರಾಜ್ಯದ ಗಡಿಗಳು ಬಂದ್

|
Google Oneindia Kannada News

ನವದೆಹಲಿ, ಜೂನ್ 01 : ಲಾಕ್ ಡೌನ್ ನಿಯಮದಲ್ಲಿ ಹಲವು ವಿನಾಯಿತಿಗಳನ್ನು ದೆಹಲಿ ಸರ್ಕಾರ ಘೋಷಣೆ ಮಾಡಿದೆ. ಆದರೆ, ಮುಂದಿನ ಏಳು ದಿನಗಳ ತನಕ ರಾಜ್ಯದ ಗಡಿಗಳನ್ನು ಮುಚ್ಚಲಾಗಿದೆ. ಅಗತ್ಯ ವಸ್ತು, ತುರ್ತು ಸೇವೆಗಳ ವಾಹನಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶವಿದೆ.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೋಮವಾರ ಪತ್ರಿಕಾಗೋಷ್ಠಿ ನಡೆಸಿದರು. "ಇದುವರೆಗೂ ಅವಕಾಶ ನೀಡಿರುವ ವಾಣಿಜ್ಯ ಚಟುವಟಿಕೆಗಳ ಜೊತೆಗೆ ಬಾರ್ಬರ್ ಶಾಪ್, ಸಲೂನ್ ತೆರೆಯಲು ಅವಕಾಶ ನೀಡಲಾಗಿದೆ" ಎಂದು ಹೇಳಿದರು.

Today's Update: ದೆಹಲಿ 1295 ಸೋಂಕು, ತಮಿಳುನಾಡು 1,149 ಕೇಸ್ ಪತ್ತೆToday's Update: ದೆಹಲಿ 1295 ಸೋಂಕು, ತಮಿಳುನಾಡು 1,149 ಕೇಸ್ ಪತ್ತೆ

"ಇದುವರೆಗೂ ಸಮ-ಬೆಸ ಮಾದರಿಯಲ್ಲಿ ನಾವು ಅಂಗಡಿಗಳನ್ನು ತೆರೆಯಲು ಅವಕಾಶ ನೀಡಿದ್ದೆವು. ಆದರೆ. ಕೇಂದ್ರ ಸರ್ಕಾರ ಇಂತಹ ಯಾವುದೇ ಪ್ರಸ್ತಾವನೆ ಸಲ್ಲಿಸಿಲ್ಲ. ಇದರಿಂದಾಗಿ ಎಲ್ಲಾ ಅಂಗಡಿಗಳು ಈಗ ಬಾಗಿಲು ತೆರಯಬಹುದು" ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು.

ವೇತನ ನೀಡಲು ದುಡ್ಡಿಲ್ಲ, 5000 ಕೋಟಿ ಅನುದಾನಕ್ಕೆ ದೆಹಲಿ ಮನವಿವೇತನ ನೀಡಲು ದುಡ್ಡಿಲ್ಲ, 5000 ಕೋಟಿ ಅನುದಾನಕ್ಕೆ ದೆಹಲಿ ಮನವಿ

 Delhi Borders To Be Sealed For One Week Says Kejriwal

"ದೆಹಲಿ ಗಡಿಯನ್ನು ಏಳು ದಿನಗಳ ಅವಧಿಗೆ ಮುಚ್ಚಲಾಗಿದೆ. ಅಗತ್ಯ ವಸ್ತುಗಳ ಸಾಗಣೆಗೆ ಅವಕಾಶ ನೀಡಲಾಗಿದೆ. ಒಂದು ವಾರದ ಬಳಿಕ ಗಡಿಗಳನ್ನು ಪುನಃ ತೆರೆಯುವ ಕುರಿತು ತೀರ್ಮಾನವನ್ನು ಕೈಗೊಳ್ಳುತ್ತೇವೆ" ಎಂದು ಅರವಿಂದ್ ಕೇಜ್ರಿವಾಲ್ ತಿಳಿಸಿದರು.

ದೆಹಲಿ ತಬ್ಲಿಘಿ ನಂಟು: 294 ವಿದೇಶಿಗರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆದೆಹಲಿ ತಬ್ಲಿಘಿ ನಂಟು: 294 ವಿದೇಶಿಗರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆ

ಯಾವುದಕ್ಕೆ ವಿನಾಯಿತಿ?

* ಎಲ್ಲಾ ಅಂಗಡಿಗಳನ್ನು ತೆರೆಯಲು ದೆಹಲಿ ಸರ್ಕಾರ ಅನುಮತಿ ನೀಡಿದೆ. ಆದರೆ, ಸಾಮಾಜಿಕ ಅಂತರವನ್ನು ಜನರು ಕಾಪಾಡಬೇಕು. ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ.

* ಆಟೋ, ಇ-ಆಟೋಗಳಲ್ಲಿ ಜನರ ಸಂಚಾರಕ್ಕೆ ಇದ್ದ ಮಿತಿಯನ್ನು ತೆರವುಗೊಳಿಸಲಾಗಿದೆ.

* ಬಾರ್ಬರ್ ಶಾಪ್, ಸಲೂನ್‌ಗಳನ್ನು ತೆರೆಯಬಹುದು. ಆದರೆ, ಸ್ಪಾಗಳನ್ನು ತೆರೆಯಲು ಅನುಮತಿ ಇಲ್ಲ.

* ರಾಜ್ಯದೊಳಗೆ ಆಗಮಿಸಲು ಅಗತ್ಯ ಸೇವೆಗಳ ವಾಹನಗಳಿಗೆ ಮಾತ್ರ ಅವಕಾಶ. ರಾಜ್ಯದ ಗಡಿಗಳು ಒಂದುವಾರಗಳ ಕಾಲ ಬಂದ್.

English summary
Delhi Chief Minister Arvind Kejriwal said that Delhi borders to be sealed for the next one week. Essential services are exempted.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X