ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ ಬಿಜೆಪಿ ನಾಯಕ ಕಪಿಲ್ ಮಿಶ್ರಾಗೆ ಚುನಾವಣಾ ಆಯೋಗ ನಿರ್ಬಂಧ

|
Google Oneindia Kannada News

ನವದೆಹಲಿ, ಜನವರಿ 25: ದೆಹಲಿಯ ಬಿಜೆಪಿ ನಾಯಕ, ವಿಧಾನಸಭೆ ಚುನಾವಣಾ ಅಭ್ಯರ್ಥಿ ಕಪಿಲ್ ಮಿಶ್ರಾ ಗೆ ಚುನಾವಣಾ ಆಯೋಗವು 48 ಗಂಟೆ ನಿರ್ಬಂಧ ಹೇರಿದೆ.

ಕಪಿಲ್ ಮಿಶ್ರಾ ದೆಹಲಿಯ ಪ್ರಮುಖ ಬಿಜೆಪಿ ನಾಯಕರಾಗಿದ್ದು, ಫೆಬ್ರವರಿ 8 ರಂದು ನಡೆಯಲಿರುವ ವಿಧಾನಸಭೆ ಚುನಾವಣೆಗೆ ದೆಹಲಿಯ ಮಾಡೆಲ್ ಟೌನ್ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ.

ಭಾರತ-ಪಾಕಿಸ್ತಾನ ಕದನ ಎಂದ ಕಪಿಲ್ ಟ್ವೀಟ್ ಮೇಲೆ ಆಯೋಗ ಕೆಂಗಣ್ಣುಭಾರತ-ಪಾಕಿಸ್ತಾನ ಕದನ ಎಂದ ಕಪಿಲ್ ಟ್ವೀಟ್ ಮೇಲೆ ಆಯೋಗ ಕೆಂಗಣ್ಣು

ಕಪಿಲ್ ಮಿಶ್ರಾ ಅವರು ದೆಹಲಿ ಚುನಾವಣೆಯನ್ನು ಭಾರತ-ಪಾಕಿಸ್ತಾನ ಯುದ್ಧಕ್ಕೆ ಹೋಲಿಸಿ ಟ್ವೀಟ್ ಮಾಡಿದ್ದರು. ಇದು ಆಯೋಗದ ಕೆಂಗಣ್ಣಿಗೆ ಗುರಿಯಾಗಿದ್ದು, ಕಪಿಲ್ ಮಿಶ್ರಾ ಗೆ 48 ಗಂಟೆ ಚುನಾವಣಾ ಪ್ರಚಾರದಿಂದ ನಿರ್ಬಂಧ ಹೇರಿ ಶನಿವಾರ ಆದೇಶ ಹೊರಡಿಸಿದೆ.

Delhi BJP Leader Kapil Mishra Banned From Campaigning

ಅಷ್ಟೆ ಅಲ್ಲದೆ ಕಪಿಲ್ ಮಿಶ್ರಾ ವಿರುದ್ಧ ಐಪಿಸಿ ಸೆಕ್ಷನ್ 123 ರ ಅಡಿಯಲ್ಲಿ ಪ್ರಕರಣ ಸಹ ದಾಖಲಿಸುವಂತೆ ಆಯೋಗವು ದೆಹಲಿ ಪೊಲೀಸರಿಗೆ ಸೂಚನೆ ನೀಡಿದೆ.

ಫೆಬ್ರವರಿ 8ಕ್ಕೆ ಭಾರತ-ಪಾಕಿಸ್ತಾನ ಕದನ ಎಂದ ಕಪಿಲ್ ಮಿಶ್ರಾಫೆಬ್ರವರಿ 8ಕ್ಕೆ ಭಾರತ-ಪಾಕಿಸ್ತಾನ ಕದನ ಎಂದ ಕಪಿಲ್ ಮಿಶ್ರಾ

ದೆಹಲಿ ಚುನಾವಣೆಯನ್ನು ಭಾರತ-ಪಾಕಿಸ್ತಾನ ಯುದ್ಧಕ್ಕೆ ಹೋಲಿಸಿ ಟ್ವೀಟ್ ಮಾಡಿದ್ ಕಪಿಲ್ ಮಿಶ್ರಾ, ದೆಹಲಿಯಲ್ಲಿ 'ಮಿನಿ ಪಾಕಿಸ್ತಾನ'ಗಳನ್ನು ಸೃಷ್ಟಿಸಲಾಗಿದೆ, ದೆಹಲಿಯ ಬೀದಿಗಳನ್ನೆಲ್ಲಾ ಅವರೇ ವಶಕ್ಕೆ ಪಡೆದುಬಿಟ್ಟಿದ್ದಾರೆ ಎಂದು ಟ್ವೀಟ್ ಮಾಡಿದ್ದರು. ಇದು ವಿವಾದ ಎಬ್ಬಿಸಿತ್ತು.

ದೆಹಲಿ ವಿಧಾನಸಭೆ ಚುನಾವಣೆಯು ಫೆಬ್ರವರಿ 8 ರಂದು ನಡೆಯಲಿದ್ದು, ಫೆಬ್ರವರಿ 11 ರಂದು ಫಲಿತಾಂಶ ಹೊರಬೀಳಲಿದೆ.

English summary
Election commission of India banned BJP candidate Kapil Mishra from campaigning for 48 hours. He compared Delhi election with India-Pakistan war in twitter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X