ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ ವಿಧಾನಸಭಾ ಸ್ಪೀಕರ್‌ ರಾಮ್ ನಿವಾಸ್ ಗೋಯೆಲ್‌ಗೆ 6 ತಿಂಗಳು ಜೈಲು

|
Google Oneindia Kannada News

ನವದೆಹಲಿ, ಅಕ್ಟೋಬರ್ 18: ದೆಹಲಿ ವಿಧಾನಸಭಾ ಸ್ಪೀಕರ್ ರಾಮ್ ನಿವಾಸ್ ಗೋಯೆಲ್‌ಗೆ ದೆಹಲಿ ರೋಸ್ ಅವೆನ್ಯೂ ಕೋರ್ಟ್ 6 ತಿಂಗಳ ಜೈಲು ಶಿಕ್ಷೆ ವಿಧಿಸಿದೆ.

ಬಿಜೆಪಿ ಮುಖಂಡ ಮನೀಶ್ ಘಯೀ ಅವರ ಮನೆಗೆ ಅತಿಕ್ರಮಣ ಪ್ರವೇಶ ಮಾಡಿರುವ ಪ್ರಕರಣದಲ್ಲಿ ಅವರಿಗೆ ಶಿಕ್ಷೆ ನೀಡಲಾಗಿದೆ. ರಾಮನಿವಾಸ್ ಗೋಯಲ್ ಜೊತೆಗೆ ಅವರ ಪುತ್ರ ಸುಮಿತ್ ಗೋಯಲ್ ಅವರಿಗೂ ಕೂಡ ಆರು ತಿಂಗಳ ಜೈಲು ಶಿಕ್ಷೆ ನೀಡಿದೆ.

ಜೊತೆಗೆ ಒಂದೊಂದು ಸಾವಿರ ಜುರ್ಮಾನೆ ಹಾಕಲಾಗಿದೆ. ರಾಮ್ ನಿವಾಸ್ ಗೋಯೆಲ್ ಹಾಗೂ ಉಳಿದ ನಾಲ್ಕು ಮಂದಿಗೆ ಮನೀಶ್ ಅವರ ಮನೆಗೆ ಅತಿಕ್ರಮ ಪ್ರವೇಶ ಮಾಡಿರುವ ಕಾರಣ ಸಜೆಯನ್ನು ವಿಧಿಸಲಾಗಿದೆ.

Delhi Assembly Speaker Ram Niwas Goel To 6 Months Jail

ಏನಿದು ಘಟನೆ: 2015ರ ಫೆಬ್ರವರಿ 6ರಂದು ಎಲ್ಲರೂ ಬಿಜೆಪಿ ಮುಕಂಡ ಮನೀಶ್ ಅವರ ಮನೆಗೆ ಅತಿಕ್ರಮ ಪ್ರವೇಶ ಮಾಡಿದ್ದರು. ಜೊತೆಗೆ ಹೊಡೆದಾಟವೂ ಕೂಡ ಆಗಿತ್ತು.

ಮನೀಶ್ ಅವರು ಚುನಾವಣೆಯಲ್ಲಿ ಜನರ ಮತ ಖರೀದಿಸಲು ಅವರ ಮನೆಯಲ್ಲಿ ಮದ್ಯದ ಬಾಟಲಿಗಳನ್ನು ಶೇಖರಿಸಿಟ್ಟಿದ್ದಾರೆ ಎಂದು ಆರೋಪಿಸಿ ಅವರ ಮನೆಗೆ ನುಗ್ಗಿದ್ದರು.

ಆಮ್ ಆದ್ಮಿ ಪಕ್ಷದ ಶಾಸಕ ಸಂದೀಪ್ ಕುಮಾರ್ ಅನರ್ಹಆಮ್ ಆದ್ಮಿ ಪಕ್ಷದ ಶಾಸಕ ಸಂದೀಪ್ ಕುಮಾರ್ ಅನರ್ಹ

ಹಾಗೆಯೇ ಈ ವಿಚಾರವನ್ನು ಪೊಲೀಸರಿಗೂ ತಿಳಿಸಿ ಮನೀಶ್ ಅವರಿಗೆ ಮನೆಗೆ ಹೋಗಿದ್ದರು, ಆದರೆ ಕೋರ್ಟ್ ರಾಮ್ ನಿವಾಸ್ ಗೋಯೆಲ್ ಹಾಗೂ ಇತರೆ ನಾಲ್ವರ ಆರೋಪವನ್ನು ಒಪ್ಪಲಿಲ್ಲ ಬದಲಾಗಿ ಆರು ತಿಂಗಳ ಜೈಲುಶಿಕ್ಷೆ ವಿಧಿಸಿದೆ.

English summary
A Delhi Court today sentenced Delhi Assembly Speaker Ram Niwas Goel to 6 months jail in connection with 2015 trespassing case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X