ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ ಮತದಾನ ಅಂತ್ಯ, ಯಾರಿಗೆ ಸಿಗಲಿದೆ ಪಾರುಪತ್ಯ

By Mahesh
|
Google Oneindia Kannada News

ನವದೆಹಲಿ, ಡಿ.4: ದೆಹಲಿ ವಿಧಾನಸಭೆ ಚುನಾವಣೆ ಮತದಾನ ಅಂತ್ಯಗೊಂಡಿದ್ದು, ಶೇ 74ರಷ್ಟು ಮತ ಚಲಾವಣೆಯಾಗಿದೆ. ಈ ಬಾರಿಯ ಚುನಾವಣೆ ದೆಹಲಿಯಲ್ಲಿ ತೀವ್ರ ಕದನ ಕುತೂಹಲ ಮೂಡಿಸಿದ್ದು, ಸಮ್ಮಿಶ್ರ ಸರ್ಕಾರ ನಿರ್ಮಾಣವಾಗುವ ಶಂಕೆ ಮೂಡಿಸಿದೆ.

ಒಂದು ವೇಳೆ ಹಾಲಿ ಮುಖ್ಯಮಂತ್ರಿ ಶೀಲಾದೀಕ್ಷಿತ್ ನೇತೃತ್ವದ ಕಾಂಗ್ರೆಸ್ ಗೆದ್ದರೆ, ದೀಕ್ಷಿತ್ ಸತತ ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಲಿದ್ದಾರೆ. ಸದ್ಯ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಸ್ಪರ್ಧಾಕಣದಲ್ಲಿರುವುದು ಬಿಜೆಪಿ, ಕಾಂಗ್ರೆಸ್ ಪಕ್ಷಗಳ ಬಹುತೇಕ ಮತವನ್ನು ಕಸಿಯುವ ಸಾಧ್ಯತೆ ಇದೆ.

ದೆಹಲಿ ವಿಧಾನಸಭಾ ಕ್ಷೇತ್ರಗಳನ್ನು ಅವಲೋಕಿಸಿದರೆ ಒಟ್ಟು ಮತ ದಾರರು 1.2 ಕೋಟಿ, ಒಟ್ಟು ಕ್ಷೇತ್ರಗಳು 70, ಸ್ಪರ್ಧಿಸಿರುವ ಒಟ್ಟು ಅಭ್ಯರ್ಥಿಗಳು 810. ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷ ಎಲ್ಲ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ, ಬಿಜೆಪಿ 68 ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧಿಸಿದೆ.

ಕಳೆದ 5 ವರ್ಷಗಳಿಂದ ಮುಸ್ಲಿಂ ಅಭ್ಯರ್ಥಿಗಳ ಸಂಖ್ಯೆ ದೆಹಲಿ ವಿಧಾನ­ಸಭಾ ಕ್ಷೇತ್ರದಲ್ಲಿ ಹೆಚ್ಚಾಗುತ್ತಿದ್ದು, ಈ ಬಾರಿ ಒಟ್ಟು 108 ಮುಸ್ಲಿಂ ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ಎಲ್ಲಾ ಪಕ್ಷಗಳು ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಾರೆ. 2008ರಲ್ಲಿ 92 ಮುಸ್ಲಿಂ ಅಭ್ಯರ್ಥಿಗಳು ಕಣದಲ್ಲಿದ್ದರು.

ಭಾರಿ ಕುತೂಹಲ ಕೆರಳಿಸಿರುವ ಚುನಾವಣೆ ಫಲಿತಾಂಶ ಡಿ.8 ರಂದು ಹೊರ ಬೀಳಲಿದೆ. ಒನ್ ಇಂಡಿಯಾ ಕನ್ನಡ ನಿಮಗಾಗಿ ಸಮಗ್ರ ಫಲಿತಾಂಶ, ಟ್ರೆಂಡಿಂಗ್, ಪಕ್ಷವಾರು ಸೀಟು ಗಳಿಕೆ ವಿವರಗಳನ್ನು ನೀಡುತ್ತಿದೆ.. ಇಲ್ಲಿ ನೋಡಿ

ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಮುಖ್ಯಮಂತ್ರಿ ಶೀಲಾ ದೀಕ್ಷಿತ್, ಬಿಜೆಪಿ ಸಿಎಂ ಅಭ್ಯರ್ಥಿ ಹರ್ಷವರ್ಧನ್, ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ಅನೇಕ ಗಣ್ಯರು ಮತ ಚಲಾಯಿಸಿದರು. ದೆಹಲಿ ವಿಧಾನಸಭೆ ಚುನಾವಣೆಯ ಮತದಾನ ಪ್ರಕ್ರಿಯೆ ಚಿತ್ರಗಳು ಇಲ್ಲಿವೆ ನೋಡಿ...

ಬಿಗಿ ಭದ್ರತೆ

ಬಿಗಿ ಭದ್ರತೆ

ದೆಹಲಿ ವಿಧಾನಸಭಾ ಚುನಾವಣೆಯ ಮತದಾನದ ಸಂದರ್ಭದಲ್ಲಿ ವಿವಿಧ ಬೂತ್ ಗಳಲ್ಲಿ ಬಿಗಿ ಭದ್ರತೆ ಒದಗಿಸಲಾಗಿತ್ತು.

ಯುವರಾಜ ನನ್ನ ಸಾಲಲ್ಲಿ

ಯುವರಾಜ ನನ್ನ ಸಾಲಲ್ಲಿ

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ನಿರ್ಮಾಣ್ ಭವನ್ ಮತದಾನ ಕೇಂದ್ರದಲ್ಲಿ ಸರತಿ ಸಾಲಿನಲ್ಲಿ ನಿಂತಿರುವುದನ್ನು ಕಂಡ ಯುವತಿ ಅಚ್ಚರಿಯಿಂದ ನೋಡಿದ್ದಾರೆ.

ನನ್ನ ಹೆಸರು ಎಲ್ಲಿದೆ

ನನ್ನ ಹೆಸರು ಎಲ್ಲಿದೆ

ಅನೇಕ ಬೂತ್ ಗಳಲ್ಲಿ ಆಮ್ ಆದ್ಮಿ ಪಕ್ಷ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಜಟಾ ಪಟಿ ನಡೆದ ವರದಿಗಳು ಬಂದಿವೆ. ಇದೆಲ್ಲದರ ನಡುವೆ ಮತದಾರರು ಶಾಂತಚಿತ್ತರಾಗಿ ತಮ್ಮ ಹೆಸರಿರುವ ಕೇಂದ್ರಗಳಿಗೆ ತೆರಳಿ ಮತ ಚಲಾಯಿಸಿದ್ದಾರೆ.

ಸೋನಿಯಾ, ಶೀಲಾ

ಸೋನಿಯಾ, ಶೀಲಾ

ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಹಾಗೂ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರು ಮತ ಕೇಂದ್ರದ ಬಳಿ...ಇನ್ನಷ್ಟು ಚಿತ್ರಗಳನ್ನು ನಿರೀಕ್ಷಿಸಿ

ಕಾಂಗ್ರೆಸ್ ಯುವರಾಜ

ಕಾಂಗ್ರೆಸ್ ಯುವರಾಜ

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ನಿರ್ಮಾಣ್ ಭವನ್ ಮತದಾನ ಮಾಡಿದರು

ಭಾರಿ ಕುತೂಹಲ ಕೆರಳಿಸಿರುವ ಚುನಾವಣೆ ಫಲಿತಾಂಶ ಡಿ.8 ರಂದು ಹೊರ ಬೀಳಲಿದೆ ಒನ್ ಇಂಡಿಯಾ ಕನ್ನಡ ನಿಮಗಾಗಿ ಸಮಗ್ರ ಫಲಿತಾಂಶ, ಟ್ರೆಂಡಿಂಗ್, ಪಕ್ಷವಾರು ಸೀಟು ಗಳಿಕೆ ವಿವರಗಳನ್ನು ನೀಡಲಿದೆ ತಪ್ಪದೇ ನಿರೀಕ್ಷಿಸಿ
ಶೀಲಾ ದೀಕ್ಷಿತ್

ಶೀಲಾ ದೀಕ್ಷಿತ್

ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಮತದಾನ ಮಾಡಿದ ನಂತರ...
ಭಾರಿ ಕುತೂಹಲ ಕೆರಳಿಸಿರುವ ಚುನಾವಣೆ ಫಲಿತಾಂಶ ಡಿ.8 ರಂದು ಹೊರ ಬೀಳಲಿದೆ ಒನ್ ಇಂಡಿಯಾ ಕನ್ನಡ ನಿಮಗಾಗಿ ಸಮಗ್ರ ಫಲಿತಾಂಶ, ಟ್ರೆಂಡಿಂಗ್, ಪಕ್ಷವಾರು ಸೀಟು ಗಳಿಕೆ ವಿವರಗಳನ್ನು ನೀಡಲಿದೆ ತಪ್ಪದೇ ನಿರೀಕ್ಷಿಸಿ

ಸರತಿ ಸಾಲಿನಲ್ಲಿ ಮತದಾರರು

ಸರತಿ ಸಾಲಿನಲ್ಲಿ ಮತದಾರರು

ಭಾರಿ ಕುತೂಹಲ ಕೆರಳಿಸಿರುವ ಚುನಾವಣೆ ಫಲಿತಾಂಶ ಡಿ.8 ರಂದು ಹೊರ ಬೀಳಲಿದೆ ಒನ್ ಇಂಡಿಯಾ ಕನ್ನಡ ನಿಮಗಾಗಿ ಸಮಗ್ರ ಫಲಿತಾಂಶ, ಟ್ರೆಂಡಿಂಗ್, ಪಕ್ಷವಾರು ಸೀಟು ಗಳಿಕೆ ವಿವರಗಳನ್ನು ನೀಡಲಿದೆ ತಪ್ಪದೇ ನಿರೀಕ್ಷಿಸಿ

ಡಾ. ಹರ್ಷವರ್ಧನ್

ಡಾ. ಹರ್ಷವರ್ಧನ್

ಮತದಾನ ಮಾಡಿದ ಬಿಜೆಪಿ ಸಿಎಂ ಅಭ್ಯರ್ಥಿ ಡಾ. ಹರ್ಷವರ್ಧನ್

ದಂಪತಿಗಳಿಂದ ಮತದಾನ

ದಂಪತಿಗಳಿಂದ ಮತದಾನ

ಪ್ರಿಯಾಂಕಾ ಗಾಂಧಿ ಹಾಗೂ ರಾಬರ್ಟ್ ವಾಧ್ರಾ ಅವರು ಮತ ಹಕ್ಕು ಚಲಾಯಿಸಿದರು.

ರಾಹುಲ್ ಗಾಂಧಿ

ರಾಹುಲ್ ಗಾಂಧಿ

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಗುರುತಿನ ಚೀಟಿ ಪ್ರದರ್ಶಿಸುತ್ತಿದ್ದಾರೆ.

ಪೂರ್ವ ದೆಹಲಿಯಲ್ಲಿ

ಪೂರ್ವ ದೆಹಲಿಯಲ್ಲಿ

ಪೂರ್ವ ದೆಹಲಿಯಲ್ಲಿ ಮತದಾನ ಮಾಡಿದ ಬಿಜೆಪಿ ಸಿಎಂ ಹರ್ಷವರ್ಧನ್ ಅವರು ತಮ್ಮ ಕುಟುಂಬ ವರ್ಗದೊಡನೆ

ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ

ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ

ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ಅವರು ನಿರ್ಮಾನ್ ಭವನ್ ನಲ್ಲಿ ಮತ ಚಲಾಯಿಸಿದರು.

ಪ್ರಿಯಾಂಕಾ ಗಾಂಧಿ

ಪ್ರಿಯಾಂಕಾ ಗಾಂಧಿ

ಮತ ಚಲಾಯಿಸಿದ ಪ್ರಿಯಾಂಕಾ ಗಾಂಧಿ ಅವರು ಸಾರ್ವಜನಿಕರೊಡನೆ ಮಾತುಕತೆ

ಅರವಿಂದ್ ಕೇಜ್ರಿವಾಲ್

ಅರವಿಂದ್ ಕೇಜ್ರಿವಾಲ್

ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್ ಅವರು ಮತ ಚಲಾಯಿಸಿದರು

ಅರವಿಂದ್ ಕುಟುಂಬ ವರ್ಗ

ಅರವಿಂದ್ ಕುಟುಂಬ ವರ್ಗ

ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್ ಕುಟುಂಬ ವರ್ಗ

ಶೀಲಾ, ಸೋನಿಯಾ ಗಾಂಧಿ

ಶೀಲಾ, ಸೋನಿಯಾ ಗಾಂಧಿ

ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಹಾಗೂ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರು ಮತ ಕೇಂದ್ರದ ಬಳಿ

ಸೋನಿಯಾ, ಶೀಲಾ

ಸೋನಿಯಾ, ಶೀಲಾ

ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಹಾಗೂ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರು ಮತ ಕೇಂದ್ರದ ಬಳಿ

ಸರತಿ ಸಾಲಿನಲ್ಲಿ ಮತದಾರರು

ಸರತಿ ಸಾಲಿನಲ್ಲಿ ಮತದಾರರು

ಭಾರಿ ಕುತೂಹಲ ಕೆರಳಿಸಿರುವ ಚುನಾವಣೆ ಫಲಿತಾಂಶ ಡಿ.8 ರಂದು ಹೊರ ಬೀಳಲಿದೆ ಒನ್ ಇಂಡಿಯಾ ಕನ್ನಡ ನಿಮಗಾಗಿ ಸಮಗ್ರ ಫಲಿತಾಂಶ, ಟ್ರೆಂಡಿಂಗ್, ಪಕ್ಷವಾರು ಸೀಟು ಗಳಿಕೆ ವಿವರಗಳನ್ನು ನೀಡಲಿದೆ ತಪ್ಪದೇ ನಿರೀಕ್ಷಿಸಿ

ಸರತಿ ಸಾಲಿನಲ್ಲಿ ಮತದಾರರು

ಸರತಿ ಸಾಲಿನಲ್ಲಿ ಮತದಾರರು

ಭಾರಿ ಕುತೂಹಲ ಕೆರಳಿಸಿರುವ ಚುನಾವಣೆ ಫಲಿತಾಂಶ ಡಿ.8 ರಂದು ಹೊರ ಬೀಳಲಿದೆ ಒನ್ ಇಂಡಿಯಾ ಕನ್ನಡ ನಿಮಗಾಗಿ ಸಮಗ್ರ ಫಲಿತಾಂಶ, ಟ್ರೆಂಡಿಂಗ್, ಪಕ್ಷವಾರು ಸೀಟು ಗಳಿಕೆ ವಿವರಗಳನ್ನು ನೀಡಲಿದೆ ತಪ್ಪದೇ ನಿರೀಕ್ಷಿಸಿ

ಅರವಿಂದ್ ಕೇಜ್ರಿವಾಲ್

ಅರವಿಂದ್ ಕೇಜ್ರಿವಾಲ್

ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್

ದೆಹಲಿ ಗದ್ದುಗೆಗೆ ಮತದಾನ

ದೆಹಲಿ ಗದ್ದುಗೆಗೆ ಮತದಾನ

ಭಾರಿ ಕುತೂಹಲ ಕೆರಳಿಸಿರುವ ಚುನಾವಣೆ ಫಲಿತಾಂಶ ಡಿ.8 ರಂದು ಹೊರ ಬೀಳಲಿದೆ ಒನ್ ಇಂಡಿಯಾ ಕನ್ನಡ ನಿಮಗಾಗಿ ಸಮಗ್ರ ಫಲಿತಾಂಶ, ಟ್ರೆಂಡಿಂಗ್, ಪಕ್ಷವಾರು ಸೀಟು ಗಳಿಕೆ ವಿವರಗಳನ್ನು ನೀಡಲಿದೆ ತಪ್ಪದೇ ನಿರೀಕ್ಷಿಸಿ

ಮುಖ್ಯಮಂತ್ರಿ ಕುರ್ಚಿ ಮೇಲೆ ಅರವಿಂದ್ ಕೇಜ್ರಿವಾಲ್, ಡಾ. ಹರ್ಷವರ್ಧನ್ ಹಾಗೂ ಶೀಲಾ ದೀಕ್ಷಿತ್ ಕಣ್ಣಿಟ್ಟಿದ್ದಾರೆ.

English summary
Todays news stories in pics : Delhi went to the polls on Wednesday. The top leaders cast their votes during the day. The results will be declared on December 8 and Many more pics across the globe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X