ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜೀವ್ ಗಾಂಧಿ 'ಭಾರತ ರತ್ನ' ವಾಪಸ್‌: ದೆಹಲಿ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ

|
Google Oneindia Kannada News

Recommended Video

ರಾಜೀವ್ ಗಾಂಧಿ 'ಭಾರತ ರತ್ನ' ವಾಪಸ್‌..! | Oneindia Kannada

ನವದೆಹಲಿ, ಡಿಸೆಂಬರ್ 21: ಇಂದಿರಾ ಗಾಂಧಿ ಅವರ ಹತ್ಯೆಯಾದ ಬಳಿಕ 1984ರಲ್ಲಿ ನಡೆದ ಸಿಖ್ಖರ ನರಮೇಧ, ಹಿಂಸಾಚಾರವನ್ನು ತಡೆಯಲು ವಿಫಲರಾದ ಪ್ರಧಾನಿ ರಾಜೀವ್ ಗಾಂಧಿ ಅವರಿಗೆ ನೀಡಲಾಗಿರುವ ಭಾರತ ರತ್ನವನ್ನು ಹಿಂದಕ್ಕೆ ಪಡೆದುಕೊಳ್ಳಬೇಕು ಎಂದು ದೆಹಲಿ ವಿಧಾನಸಭೆಯಲ್ಲಿ ಶುಕ್ರವಾರ ನಿರ್ಣಯ ಅಂಗೀಕರಿಸಲಾಗಿದೆ.

1984 ರ ಸಿಖ್ ದಂಗೆ ಪ್ರಕರಣ: ಸಜ್ಜನ್ ಕುಮಾರ್ ಅರ್ಜಿ ವಜಾ1984 ರ ಸಿಖ್ ದಂಗೆ ಪ್ರಕರಣ: ಸಜ್ಜನ್ ಕುಮಾರ್ ಅರ್ಜಿ ವಜಾ

70 ಸದಸ್ಯರ ದೆಹಲಿ ವಿಧಾನಸಭೆಯಲ್ಲಿ 66 ಶಾಸಕರು ಎಎಪಿಯವರಾಗಿದ್ದರು, ಉಳಿದ ಕೇವಲ ನಾಲ್ಕು ಸ್ಥಾನಗಳಲ್ಲಿ ಬಿಜೆಪಿ ಶಾಸಕರಿದ್ದಾರೆ. ತಿಲಕ್ ನಗರದ ಶಾಸಕ ಜರ್ನೈಲ್ ಸಿಂಗ್ ನಿರ್ಣಯ ಮಂಡಿಸಿದ್ದರು.

delhi assembly passed resolution withdrawal Bharat ratna award rajiv gandhi sikh 1984 riot

ರಾಜೀವ್ ಗಾಂಧಿ ಅವರಿಗೆ ಸಂಬಂಧಿಸಿದ ನಿರ್ಣಯವು ಕೈಬರಹದಲ್ಲಿ ಇರುವುದರಿಂದ ಅದನ್ನು ಪರಿಗಣನೆಗೆ ತೆಗೆದುಕೊಳ್ಳಲು ಸಾಧ್ಯವಿಲ್ಲ. ಆದರೆ, ಸಿಖ್ಖರ ಹತ್ಯಾಕಾಂಡವನ್ನು ತಡೆಯುವಲ್ಲಿ ವಿಫಲರಾದ ರಾಜೀವ್ ಅವರ ವಿರುದ್ಧ ಪ್ರತಿಭಟನೆ ವ್ಯಕ್ತಪಡಿಸುವ ಸಲುವಾಗಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಎಎಪಿ ಸ್ಪಷ್ಟಪಡಿಸಿದೆ.

ಸಿಖ್ ನರಮೇಧ: ಅರವಿಂದ್ ಕೇಜ್ರಿವಾಲ್ ಒಂದು ಟ್ವೀಟಿಗೆ ಸಾವಿರ ಮರುಪ್ರಶ್ನೆ ಸಿಖ್ ನರಮೇಧ: ಅರವಿಂದ್ ಕೇಜ್ರಿವಾಲ್ ಒಂದು ಟ್ವೀಟಿಗೆ ಸಾವಿರ ಮರುಪ್ರಶ್ನೆ

ರಾಷ್ಟ್ರದ ರಾಜಧಾನಿಯ ಇತಿಹಾಸದಲ್ಲಿಯೇ ಅತ್ಯಂತ ಭೀಕರ ಹತ್ಯಾಕಾಂಡ ಎನಿಸಿರುವ ಘಟನೆಯಲ್ಲಿ ಬಲಿಯಾದವರ ಕುಟುಂಬಸ್ಥರಿಗೆ ನ್ಯಾಯ ವಂಚನೆಯಾಗುತ್ತಲೇ ಇದೆ ಎಂದಿರುವ ನಿರ್ಣಯದಲ್ಲಿ, ಅಪರಾಧಿಗಳ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಎಲ್ಲ ಪ್ರಯತ್ನಗಳನ್ನೂ ಮಾಡುವಂತೆ ಗೃಹ ಸಚಿವಾಲಯವನ್ನು ಒತ್ತಾಯಿಸುವಂತೆ ಅಂಗೀಕರಿಸಲಾಯಿತು.

English summary
Delhi assembly on Friday passed a resolution recommending the withdrawal of the Bharat Ratna award conferred upon former Prime Minister Rajiv Gandhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X