ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ ಚುನಾವಣೆ: ಭಾರೀ ಅಂತರದಿಂದ ಗೆದ್ದ 7 ಅಭ್ಯರ್ಥಿಗಳು ಇವರೇ

|
Google Oneindia Kannada News

ನವದೆಹಲಿ, ಫೆ 12: ಎಂಟು ಕ್ಷೇತ್ರಗಳನ್ನು ಹೊರತು ಪಡಿಸಿ ಮಿಕ್ಕೆಲ್ಲಾ 62ಕ್ಷೇತ್ರದಲ್ಲಿ ಜಯಭೇರಿ ಬಾರಿಸಿರುವ ಆಮ್ ಆದ್ಮಿ ಪಕ್ಷದ ನೂತನ ಸರಕಾರ, ಭಾನುವಾರ (ಫೆ 16) ಅಸ್ತಿತ್ವಕ್ಕೆ ಬರಲಿದೆ.

ಒಂದೇ ಒಂದು ಸ್ಥಾನವನ್ನೂ ಗೆಲ್ಲಲಾಗದೇ, ಸ್ಪರ್ಧಿಸಿದ ಎಪ್ಪತ್ತು ಕ್ಷೇತ್ರಗಳಲ್ಲಿ 63 ಕಡೆ ಠೇವಣಿ ಕಳೆದುಕೊಂಡಿರುವ ಕಾಂಗ್ರೆಸ್ ಭಾರೀ ಮುಖಭಂಗವನ್ನು ಎದುರಿಸಿದೆ. ಚುನಾವಣಾ ಸೋಲಿಗೆ ನೈತಿಕ ಹೊಣೆಯನ್ನು ಹೊತ್ತು, ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ಉಸ್ತುವಾರಿಯಾಗಿದ್ದ ಪಿ.ಸಿ.ಚಾಕೋ ರಾಜೀನಾಮೆ ನೀಡಿದ್ದಾರೆ.

ಆಮ್ ಆದ್ಮಿ ಪಕ್ಷಕ್ಕೆ ಕೆಲವೇ ಕೆಲವು ಕ್ಷೇತ್ರಗಳಲ್ಲಿ ತುರುಸಿನ ಸ್ಪರ್ಧೆ ಏರ್ಪಟ್ಟಿದ್ದನ್ನು ಬಿಟ್ಟರೆ, ಮಿಕ್ಕೆಲ್ಲಾ ಕಡೆ ನಿರಾಯಾಸವಾಗಿ ಆ ಪಕ್ಷದ ಅಭ್ಯರ್ಥಿಗಳು ಜಯಶೀಲರಾಗಿದ್ದಾರೆ.

ಹೀನಾಯ ಸೋಲಿನ ಮುನ್ಸೂಚನೆಯಿಂದಲೇ ಅಧ್ಯಕ್ಷ ಹುದ್ದೆಯಿಂದ ಕೆಳಗಿಳಿದ ಅಮಿತ್ ಶಾ? ಹೀನಾಯ ಸೋಲಿನ ಮುನ್ಸೂಚನೆಯಿಂದಲೇ ಅಧ್ಯಕ್ಷ ಹುದ್ದೆಯಿಂದ ಕೆಳಗಿಳಿದ ಅಮಿತ್ ಶಾ?

ಒಂದು ಸಾವಿರಕ್ಕೂ ಕಮ್ಮಿ ಮತಗಳ ಅಂತರದಿಂದ ಗೆದ್ದ ಅಭ್ಯರ್ಥಿಗಳು ಎಪ್ಪತ್ತು ಕ್ಷೇತ್ರಗಳ ಪೈಕಿ ಕೇವಲ ಇಬ್ಬರೇ. ಭಾರೀ ಅಂತರದ ಮೂಲಕ ತಮ್ಮ ಸಮೀಪದ ಪ್ರತಿಸ್ಪರ್ಧಿಗಳ ವಿರುದ್ದ ಏಳು ಅಭ್ಯರ್ಥಿಗಳ ಪಟ್ಟಿ ಇಂತಿದೆ:

ಸಂಜೀವ್ ಝಾ

ಸಂಜೀವ್ ಝಾ

ಕ್ಷೇತ್ರ: ಬುರಾರಿ
ಗೆದ್ದ ಅಭ್ಯರ್ಥಿ ಮತ್ತು ಪಕ್ಷ: ಸಂಜೀವ್ ಝಾ, ಆಮ್ ಆದ್ಮಿ ಪಕ್ಷ
ಸೋತ ಅಭ್ಯರ್ಥಿ ಮತ್ತು ಪಕ್ಷ: ಶೈಲೇಂದ್ರ ಕುಮಾರ್, ಜೆಡಿಯು
ಗೆಲುವಿನ ಅಂತರ: 88,158

ದೆಹಲಿಯಲ್ಲಿ ಆಪ್ ಅಬ್ಬರ

ದೆಹಲಿಯಲ್ಲಿ ಆಪ್ ಅಬ್ಬರ

ಕ್ಷೇತ್ರ: ಓಖಾಲಾ
ಗೆದ್ದ ಅಭ್ಯರ್ಥಿ ಮತ್ತು ಪಕ್ಷ: ಅಮಾನತುಲ್ಲಾ ಖಾನ್, ಆಮ್ ಆದ್ಮಿ ಪಕ್ಷ
ಸೋತ ಅಭ್ಯರ್ಥಿ ಮತ್ತು ಪಕ್ಷ: ಬ್ರಹಂ ಸಿಂಗ್, ಬಿಜೆಪಿ
ಗೆಲುವಿನ ಅಂತರ: 71,827

ದೆಹಲಿ ಫಲಿತಾಂಶ: ಖಾಲಿ ಕೈಯಲ್ಲಿ ಬಂದು, ಖಾಲಿ ಕೈಯಲ್ಲೇ ವಾಪಸ್ ಹೋದ ಕಾಂಗ್ರೆಸ್ದೆಹಲಿ ಫಲಿತಾಂಶ: ಖಾಲಿ ಕೈಯಲ್ಲಿ ಬಂದು, ಖಾಲಿ ಕೈಯಲ್ಲೇ ವಾಪಸ್ ಹೋದ ಕಾಂಗ್ರೆಸ್

ಶಾ-ಮೋದಿ ಆಟ ನಡೆಯಲಿಲ್ಲ

ಶಾ-ಮೋದಿ ಆಟ ನಡೆಯಲಿಲ್ಲ

ಕ್ಷೇತ್ರ: ಶ್ರೀರಾಂಪುರಿ (ಮೀಸಲು)
ಗೆದ್ದ ಅಭ್ಯರ್ಥಿ ಮತ್ತು ಪಕ್ಷ: ರಾಜೇಂದ್ರ ಪಾಲ್ ಗೌತಂ, ಆಮ್ ಆದ್ಮಿ ಪಕ್ಷ
ಸೋತ ಅಭ್ಯರ್ಥಿ ಮತ್ತು ಪಕ್ಷ: ಸಂತ್ ಲಾಲ್, ಎಲ್ಜೆಪಿ
ಗೆಲುವಿನ ಅಂತರ: 56,108

ದೆಹಲಿ ಅಸೆಂಬ್ಲಿ ಚುನಾವಣೆ

ದೆಹಲಿ ಅಸೆಂಬ್ಲಿ ಚುನಾವಣೆ

ಕ್ಷೇತ್ರ: ಮಟಿಯಾ ಮಹಲ್
ಗೆದ್ದ ಅಭ್ಯರ್ಥಿ ಮತ್ತು ಪಕ್ಷ: ಶೋಹೆಬ್ ಇಕ್ಬಾಲ್, ಆಮ್ ಆದ್ಮಿ ಪಕ್ಷ
ಸೋತ ಅಭ್ಯರ್ಥಿ ಮತ್ತು ಪಕ್ಷ: ರವೀಂದರ್ ಗುಪ್ತಾ, ಬಿಜೆಪಿ
ಗೆಲುವಿನ ಅಂತರ: 50,241

ಸುಲ್ತಾನ್ ಪುರ್

ಸುಲ್ತಾನ್ ಪುರ್

ಕ್ಷೇತ್ರ: ಸುಲ್ತಾನಪುರ ಮಜ್ರಾ (ಮೀಸಲು)
ಗೆದ್ದ ಅಭ್ಯರ್ಥಿ ಮತ್ತು ಪಕ್ಷ: ಮುಕೇಶ್ ಕುಮಾರ್ ಅಹ್ಲಾವತ್, ಆಮ್ ಆದ್ಮಿ ಪಕ್ಷ
ಸೋತ ಅಭ್ಯರ್ಥಿ ಮತ್ತು ಪಕ್ಷ: ರಾಂಚಂದ್ರ ಚಾವ್ರಿಯಾ, ಬಿಜೆಪಿ
ಗೆಲುವಿನ ಅಂತರ: 48,052

ರಾಜಧಾನಿಯ ಅಸೆಂಬ್ಲಿ ಚುನಾವಣೆ

ರಾಜಧಾನಿಯ ಅಸೆಂಬ್ಲಿ ಚುನಾವಣೆ

ಕ್ಷೇತ್ರ: ಸಂಗಂ ವಿಹಾರ್
ಗೆದ್ದ ಅಭ್ಯರ್ಥಿ ಮತ್ತು ಪಕ್ಷ: ದಿನೇಶ್ ಮೊಹಾನಿಯಾ, ಆಮ್ ಆದ್ಮಿ ಪಕ್ಷ
ಸೋತ ಅಭ್ಯರ್ಥಿ ಮತ್ತು ಪಕ್ಷ: ಶಿವಚರಣ್ ಲಾಲ್ ಗುಪ್ತಾ, ಜೆಡಿಯು
ಗೆಲುವಿನ ಅಂತರ: 42,522

ರಾಷ್ಟ್ರ ರಾಜಧಾನಿಯ ಅಸೆಂಬ್ಲಿ ಚುನಾವಣೆ

ರಾಷ್ಟ್ರ ರಾಜಧಾನಿಯ ಅಸೆಂಬ್ಲಿ ಚುನಾವಣೆ

ಕ್ಷೇತ್ರ: ವಿಕಾಸಪುರಿಳು
ಗೆದ್ದ ಅಭ್ಯರ್ಥಿ ಮತ್ತು ಪಕ್ಷ: ಮಹೀಂದರ್ ಯಾದವ್, ಆಮ್ ಆದ್ಮಿ ಪಕ್ಷ
ಸೋತ ಅಭ್ಯರ್ಥಿ ಮತ್ತು ಪಕ್ಷ: ಸಂಜಯ್ ಸಿಂಗ್, ಬಿಜೆಪಿ
ಗೆಲುವಿನ ಅಂತರ: 42,058

English summary
Delhi Assembly Elections 2020: Seven Candidate Won By Huge Margin.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X