ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ ಚುನಾವಣೆ: ಮತ ಚಲಾಯಿಸಿದ 111 ವರ್ಷದ ಅಜ್ಜಿ

|
Google Oneindia Kannada News

ನವದೆಹಲಿ, ಫೆಬ್ರವರಿ 8: ದೆಹಲಿ ವಿಧಾನಸಭೆ ಚುನಾವಣೆಯಲ್ಲಿ 111 ವರ್ಷದ ಅತ್ಯಂತ ಹಿರಿಯ ಮಹಿಳೆ ಕಲಿತಾರಾ ಮಂಡಲ್ ಶನಿವಾರ ಮತ ಚಲಾಯಿಸಿದರು.

ದೆಹಲಿ ಚುನಾವಣೆಯಲ್ಲಿ ಅತ್ಯಂತ ಹಿರಿಯ ಮತದಾರರೆನಿಸಿರುವ ಮಂಡಲ್, ತಮ್ಮ ಹಕ್ಕು ಚಲಾವಣೆಯ ಜತೆಗೆ. ಜವಾಬ್ದಾರಿಯುತ ಮತದಾರರು ಮತ ಚಲಾಯಿಸಬೇಕು ಎಂದು ಮನವಿ ಮಾಡಿದರು.

ನವದೆಹಲಿ ವಿಧಾನಸಭಾ ಚುನಾವಣೆ: ಇದು 6th ಸೆನ್ಸ್ ತೆರೆದಿಟ್ಟ ಸೀಕ್ರೆಟ್! ನವದೆಹಲಿ ವಿಧಾನಸಭಾ ಚುನಾವಣೆ: ಇದು 6th ಸೆನ್ಸ್ ತೆರೆದಿಟ್ಟ ಸೀಕ್ರೆಟ್!

ಸಿಆರ್ ಪಾರ್ಕ್ ವಿಧಾನಸಭೆ ಕ್ಷೇತ್ರದಲ್ಲಿನ ಮತಗಟ್ಟೆಗೆ ತಮ್ಮ ಮಗ, ಮೊಮ್ಮಗ ಮತ್ತು ಕುಟುಂಬದ ಇತರೆ ಸದಸ್ಯರೊಂದಿಗೆ ಬಂದ 111 ವರ್ಷದ ಮಂಡಲ್, ಮತ ಚಲಾಯಿಸಿದ ಬಳಿಕ ಛಾಯಾಗ್ರಾಹಕರಿಗೆ ಬೆರಳು ತೋರಿಸಿ ಸಂಭ್ರಮಿಸಿದರು.

Delhi Assembly Elections 2020 Oldest Voter 111 Old Kalitara Mandal Gets Inked

'ಈ ಚುನಾವಣೆಯಲ್ಲಿ ಮತಹಾಕಿರುವುದು ಖುಷಿ ನೀಡಿದೆ. ನಾನು ಎಷ್ಟು ಚುನಾವಣೆಗಳಲ್ಲಿ ಮತ ಹಾಕಿದ್ದೇನೆಯೋ ನನಗೆ ನೆನಪಾಗುತ್ತಿಲ್ಲ. ಆದರೆ ಜವಾಬ್ದಾರಿಯುತ ಪ್ರಜೆಗಳಾಗಿ ನಾವು ಮತ ಚಲಾಯಿಸಬೇಕು. ಇತರೆ ನಾಗರಿಕರೂ ಬಂದು ಮತ ಚಲಾಯಿಸಬೇಕು ಎಂದು ಕೋರುತ್ತೇನೆ' ಎಂದು ಮಂಡಲ್ ಹೇಳಿದ್ದಾರೆ.

ಅವಿಭಜಿತ ಭಾರತದ ಬರಿಸಾಲ್‌ನಲ್ಲಿ (ಈಗಿನ ಬಾಂಗ್ಲಾದೇಶ) 1908ರಲ್ಲಿ ಜನಿಸಿದ ಮಂಡಲ್, ಎರಡು ವಿಭಜನೆಗಳ ಸಹಿತ ಉಪಖಂಡದ ಅನೇಕ ರಾಜಕೀಯ ಮತ್ತು ಭೌಗೋಳಿಕ ಬದಲಾವಣೆಯ ಹಂತಗಳಿಗೆ ಸಾಕ್ಷಿಯಾಗಿದ್ದಾರೆ. ರಾಜಧಾನಿ ದೆಹಲಿಯಲ್ಲಿ ನೆಲೆ ಕಂಡುಕೊಳ್ಳುವವರೆಗೂ ಎರಡು ಬಾರಿ ಭಾರತದಲ್ಲಿಯೇ 'ನಿರಾಶ್ರಿತ'ರಾಗಿದ್ದರು.

ವಿಡಿಯೋ: ಹನುಮ ದೇವರನ್ನು ಅಶುದ್ಧಗೊಳಿಸಿದರೇ ಕೇಜ್ರಿವಾಲ್?ವಿಡಿಯೋ: ಹನುಮ ದೇವರನ್ನು ಅಶುದ್ಧಗೊಳಿಸಿದರೇ ಕೇಜ್ರಿವಾಲ್?

ದೆಹಲಿ ವಿಧಾನಸಭೆ ಚುನಾವಣೆಯಲ್ಲಿ 68 ಪುರುಷರು ಮತ್ತು 64 ಮಹಿಳೆಯರು ಸೇರಿದಂತೆ 132 ಶತಾಯುಷಿ ಮತದಾರರಿದ್ದಾರೆ. ಅವರಲ್ಲಿ ಮಂಡಲ್ ಅತಿ ಹಿರಿಯರು.

English summary
Oldest voter in the Delhi assembly elections 2020, 111 year old Kalitara Mandal costed her vote on Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X