ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ ಚುನಾವಣೆ; ಅಚ್ಚರಿಗೆ ಕಾರಣವಾದ 'ನೋಟಾ' ಮತಗಳ ಸಂಖ್ಯೆ

|
Google Oneindia Kannada News

ನವದೆಹಲಿ, ಫೆಬ್ರವರಿ 13: ದೆಹಲಿ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡಿದೆ. ಆಮ್ ಆದ್ಮಿ ಪಕ್ಷ ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಮತ್ತೆ ಅಧಿಕಾರಕ್ಕೆ ಬಂದಿದೆ. ವಿವಿಧ ರಾಜಕೀಯ ಪಕ್ಷಗಳು ಪಡೆದ ಮತಕ್ಕಿಂತ ಹೆಚ್ಚು ನೋಟಾ ಚಲಾವಣೆಯಾಗಿದೆ.

ದೆಹಲಿಯಲ್ಲಿ ವಿವಿಧ ಪಕ್ಷಗಳು ಪಡೆದ ಮತಗಳಿಕೆಯ ಪ್ರಮಾಣವನ್ನು ಗಮನಿಸಿದರೆ ನೋಟಾ 6ನೇ ಸ್ಥಾನದಲ್ಲಿ ನಿಲ್ಲುತ್ತದೆ. ಇದು ಸಿಪಿಐ, ಸಿಪಿಐ(ಎಂ), ಎಲ್‌ಜೆಪಿ ಮತ್ತು ಎನ್‌ಸಿಪಿ ಪಕ್ಷಗಳು ಪಡೆದ ಮತಗಳಿಗಿಂತ ಹೆಚ್ಚಾಗಿದೆ.

ದೆಹಲಿ ಚುನಾವಣೆ; ಎಎಪಿಗೆ ಶಕ್ತಿ ತಂದ 'TINA' ಪ್ರಚಾರ ತಂತ್ರ! ದೆಹಲಿ ಚುನಾವಣೆ; ಎಎಪಿಗೆ ಶಕ್ತಿ ತಂದ 'TINA' ಪ್ರಚಾರ ತಂತ್ರ!

ವಿವಿಧ ಚುನಾವಣೆಗಳಲ್ಲಿ ಮತದಾರರು ' ನೋಟಾ' ಬಳಕೆ ಮಾಡಲು ಅವಕಾಶವನ್ನು ನೀಡಲಾಗಿದೆ. ಚುನಾವಣೆಯಲ್ಲಿ ಕಣಕ್ಕಿಳಿದಿರುವ ಯಾವ ಅಭ್ಯರ್ಥಿಯೂ ಅರ್ಹ ಎಂದು ಅನ್ನಿಸದಿದ್ದಲ್ಲಿ ಜನರು ನೋಟಾ ಬಟನ್ ಒತ್ತಬಹುದು.

ಮುಂಬೈನಲ್ಲಿ ನೋಟಾ ಮುಂದೆ ನೆಲಕಚ್ಚಿದ ಬಿಗ್ ಬಾಸ್ ಮಾಜಿ ಸ್ಪರ್ಧಿ! ಮುಂಬೈನಲ್ಲಿ ನೋಟಾ ಮುಂದೆ ನೆಲಕಚ್ಚಿದ ಬಿಗ್ ಬಾಸ್ ಮಾಜಿ ಸ್ಪರ್ಧಿ!

ಶೇ 50ಕ್ಕಿಂತ ಹೆಚ್ಚು ನೋಟಾ ಮತಗಳು ಚಲಾವಣೆಯಾಗಿದ್ದರೂ ಅಭ್ಯರ್ಥಿಗಳು ಪಡೆದಿರುವ ಮತಗಳ ಆಧಾರದ ಮೇಲೆ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ. ಮತ್ತೊಮ್ಮೆ ಮತದಾನವನ್ನು ನಡೆಸುವುದಿಲ್ಲ ಎಂದು ಚುನಾವಣಾ ಆಯೋಗ ಹೇಳಿದೆ.

ನಗರಸಭೆ ಚುನಾವಣೆಯಲ್ಲೂ ನೋಟಾ ಬಳಕೆಗೆ ಸಂಪುಟದ ಒಪ್ಪಿಗೆನಗರಸಭೆ ಚುನಾವಣೆಯಲ್ಲೂ ನೋಟಾ ಬಳಕೆಗೆ ಸಂಪುಟದ ಒಪ್ಪಿಗೆ

ಎಷ್ಟು ಮತಗಳ ಚಲಾವಣೆಯಾಗಿದೆ

ಎಷ್ಟು ಮತಗಳ ಚಲಾವಣೆಯಾಗಿದೆ

ದೆಹಲಿ ಚುನಾವಣೆಯಲ್ಲಿ ಶೇ 0.46ರಷ್ಟು ನೋಟಾ ಮತಗಳು ಚಲಾವಣೆಗೊಂಡಿವೆ. ಒಟ್ಟು 70 ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 42,406 ಮತಗಳು ಚಲಾವಣೆಗೊಂಡಿವೆ. ಮತಗಳಿಕೆ ಪ್ರಮಾಣದಲ್ಲಿ ನೋಟಾ 6ನೇ ಸ್ಥಾನದಲ್ಲಿದೆ.

ಪಡೆದ ಮತಗಳ ವಿವರ

ಪಡೆದ ಮತಗಳ ವಿವರ

ಸಿಪಿಐ(ಎಂ) ಪಕ್ಷಕ್ಕೆ 1236, ಸಿಪಿಐ 1954 ಮತ, ಎಲ್‌ಜೆಪಿ 32760 ಮತ, ಆರ್‌ಜೆಡಿ 3452 ಮತಗಳನ್ನು ಚುನಾವಣೆಯಲ್ಲಿ ಪಡೆದಿವೆ. ಚುನಾವಣಾ ಕಣದಲ್ಲಿದ್ದ ಪಕ್ಷೇತರ ಅಭ್ಯರ್ಥಿಗಳು 35365 ಮತಗಳನ್ನು ಪಡೆದಿದ್ದಾರೆ.

ಎಎಪಿ ಪಡೆದ ಮತಗಳು

ಎಎಪಿ ಪಡೆದ ಮತಗಳು

ದೆಹಲಿ ಚುನಾವಣೆಯಲ್ಲಿ 62 ಸ್ಥಾನಗಳಲ್ಲಿ ಜಯಗಳಿಸಿ ಅಧಿಕಾರವನ್ನು ಪಡೆದ ಆಮ್ ಆದ್ಮಿ ಪಕ್ಷ 48,98,816 ಮತಗಳನ್ನು ಪಡೆದಿದೆ. ಬಿಜೆಪಿ 35,20,339 ಮತಗಳು ಮತ್ತು ಕಾಂಗ್ರೆಸ್ 3,91,757 ಮತಗಳನ್ನು ಪಡೆದಿದೆ.

ವೋಟ್‌ ಶೇರ್‌ನಲ್ಲಿ ಎಎಪಿ ಮುಂದೆ

ವೋಟ್‌ ಶೇರ್‌ನಲ್ಲಿ ಎಎಪಿ ಮುಂದೆ

ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ 53.57ರಷ್ಟು ಮತಗಳನ್ನು ಪಡೆದು ಮತಗಳಿಕೆ ಪ್ರಮಾಣದಲ್ಲಿ ಮೊದಲ ಸ್ಥಾನದಲ್ಲಿದೆ. ಬಿಜೆಪಿ 38.51ರಷ್ಟು ಮತ, ಯಾವುದೇ ಸ್ಥಾನದಲ್ಲಿ ಜಯಗಳಿಸದಿದ್ದರೂ ಕಾಂಗ್ರೆಸ್ 4.26ರಷ್ಟು ಮತಗಳನ್ನು ಪಡೆದಿದೆ.

English summary
In Delhi assembly election NOTA stood at the sixth position in terms of number of votes polled and polling percentage. This was higher than the percentage of parties such as the CPI, CPI (M), LJP and NCP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X