ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯಲ್ಲಿ ಬಿಜೆಪಿ ಗೆಲ್ಲದಿದ್ದರೆ ಮೋದಿಗೆ ತೀವ್ರ ಮುಖಭಂಗ !

By ಬಾಲರಾಜ್ ತಂತ್ರಿ
|
Google Oneindia Kannada News

2004ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ NDA ಸರಕಾರ ಮತ್ತೆ ಅಧಿಕಾರಕ್ಕೆ ಬರುತ್ತೆ ಎಂದೇ ನಂಬಲಾಗಿತ್ತು. ಸಮೀಕ್ಷೆಗಳೂ ಅದನ್ನೇ ಸಾರಿದ್ದವು, ಬಿಜೆಪಿಯಂತೂ ಓವರ್ ಕಾನ್ಫಿಡೆನ್ಸ್ ನಿಂದ ತೇಲಾಡುತ್ತಿತ್ತು. ಆದರೆ ಫಲಿತಾಂಶ ಬಂದಿದ್ದೇ ಬೇರೆ.

ಫೆಬ್ರವರಿ ಏಳರಂದು ದೆಹಲಿ ಅಸೆಂಬ್ಲಿಗೆ ಚುನಾವಣೆ ನಡೆಯಲಿದೆ. ಕೆಲವು ದಿನಗಳಿಂದ ವಿವಿಧ ವಾಹಿನಿ/ಸಂಸ್ಥೆಗಳು ನಡೆಸುತ್ತಿರುವ ಚುನಾವಣಾಪೂರ್ವ ಸಮೀಕ್ಷೆಯ ಫಲಿತಾಂಶಗಳು ಗೆದ್ದೇ ಗೆಲ್ಲುತ್ತೇವೆ ಎನ್ನುವ ಬಿಜೆಪಿಯ ಅತಿಯಾದ ಆತ್ಮವಿಶ್ವಾಸಕ್ಕೆ ಹೊಡೆತ ನೀಡುವಂತಿದೆ.

2ತಿಂಗಳ ಹಿಂದೆ ದೆಹಲಿಯಲ್ಲಿ ಬಿಜೆಪಿಗಿದ್ದ ಅನುಕೂಲಕರ ಪರಿಸ್ಥಿತಿ ಈಗಿಲ್ಲ. ಕೇಂದ್ರ ಸರಕಾರದ ಆಡಳಿತದ ಪ್ರಭಾವ ದೆಹಲಿ ಮೇಲೆ ಬೀರುವುದರಿಂದ ಮೋದಿ ಕಾರ್ಯವೈಖರಿಯೂ ಇಲ್ಲಿ ಲೆಕ್ಕಕ್ಕೆ ಬರುತ್ತದೆ.

ನರೇಂದ್ರ ಮೋದಿ ಅಧಿಕಾರಕ್ಕೆ ಬರುವ ಮುನ್ನ ನೀಡಿದ್ದ ಆಶ್ವಾಸನೆಗಳು ತೀವ್ರ ಗತಿಯಲ್ಲಿ ಕಾರ್ಯರೂಪಕ್ಕೆ ಬರದೇ ಇರುವುದರಿಂದ, ಜನರಿಗೆ ಅವರ ಮೇಲಿದ್ದ ವಿಶ್ವಾಸ ಕೊಂಚ ಕಮ್ಮಿಯಾಗುತ್ತಿರುವುದನ್ನು ಸಮೀಕ್ಷೆಗಳೂ ಹೈಲೈಟ್ ಮಾಡುತ್ತಿವೆ. (ದೆಹಲಿ: ಬದಲಾಯಿತೇ ಮತದಾರನ ಮೂಡ್)

ಟಿಕೆಟ್ ಹಂಚಿಕೆ ವಿಚಾರದಲ್ಲಿ ಭಿನ್ನಮತ ಎನ್ನುವುದು ಯಾವುದೇ ಪಕ್ಷಕ್ಕೆ ಹೊರತಾಗಿಲ್ಲ. ಕಿರಣ್ ಬೇಡಿಯವರನ್ನು ಬಿಜೆಪಿ ತನ್ನ ಸಿಎಂ ಅಭ್ಯರ್ಥಿ ಎಂದು ಘೋಷಿಸಿದ ಮೇಲೆ ಪಕ್ಷದಲ್ಲಿನ ಆಂತರಿಕ ಬೇಗುದಿ ಮತ್ತಷ್ಟು ಹೆಚ್ಚಾಗಿದೆ. ಮೂಲ ಕಾರ್ಯಕರ್ತರನ್ನು ಬಿಜೆಪಿ ಹೈಕಮಾಂಡ್ ಕಡೆಗಣಿಸಿದೆ ಎನ್ನುವ ಸಿಟ್ಟು ಬಿಜೆಪಿಗೆ ಚುನಾವಣೆಯಲ್ಲಿ ಮುಳುವಾದರೂ ಆಗಬಹುದು.

ದೆಹಲಿಯ ಸಿಎಂ ಅಭ್ಯರ್ಥಿಗಳ ಪಟ್ಟಿಯಲ್ಲಿ ದೆಹಲಿ ಘಟಕದ ಅಧ್ಯಕ್ಷರೂ ಆಗಿರುವ ಸತೀಶ್ ಉಪಾಧ್ಯಾಯ ಅವರ ಹೆಸರೂ ಕೇಳಿ ಬಂದಿತ್ತು. ಆದರೆ ಬಿಜೆಪಿ ಅವರಿಗೆ ಮೆಹ್ರೂಲಿ ಕ್ಷೇತ್ರದಿಂದ ಟಿಕೆಟ್ ನಿರಾಕರಿಸಿರುವುದು ಅವರ ಅಪಾರ ಬೆಂಬಲಿಗರ ಸಿಟ್ಟಿಗೂ ಕಾರಣವಾಗಿದೆ. ಇದಲ್ಲದೇ ದೆಹಲಿ ಘಟಕದ ಉಪಾಧ್ಯಕ್ಷರಿಗೆ ಮತ್ತು ಕಳೆದ ಚುನಾವಣೆಯಲ್ಲಿ ಗೆದ್ದಿದ್ದ ಪ್ರಮುಖ ನಾಯಕರಿಬ್ಬರಿಗೆ ಟಿಕೆಟ್ ನಿರಾಕರಿಸಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.

ನಮಗೆ ಒಪ್ಪಿಗೆ ಇಲ್ಲದ ಅಭ್ಯರ್ಥಿಗಳ ಪರ ನಾವು ಪ್ರಚಾರ ಮಾಡುವುದಿಲ್ಲ ಎಂದು ಕೆಲವು ಹಿರಿಯ ಸ್ಥಳೀಯ ಮುಖಂಡರು ಪಟ್ಟು ಹಿಡಿದು ಕೂತಿರುವುದು ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರಿಗೆ ತಲೆನೋವಾಗಿ ಪರಿಣಮಿಸಿದೆ. (ಸಿಎಂ ಹುದ್ದೆಗೆ ಯಾರು ಬೆಸ್ಟ್)

ಎಲ್ಲಾ ರಾಜ್ಯದಂತೆ ಇಲ್ಲೂ ಪ್ರಮುಖ ಮೂರು ಪಕ್ಷಗಳು ಜಾತಿ ಲೆಕ್ಕಾಚಾರದ ಮೊರೆ ಹೋದರೂ, ಕೇಂದ್ರ ಸರಕಾರದ ಪ್ರಭಾವ ಮತ್ತು ಸಿಎಂ ಅಭ್ಯರ್ಥಿಯ ವರ್ಚಸ್ಸು ಲೆಕ್ಕಕ್ಕೆ ಬರುತ್ತದೆ. ಚುನಾವಣೆಗೆ ಇನ್ನುಳಿದಿರುವ ಎರಡು ವಾರದಲ್ಲಿ ಬಿಜೆಪಿ ಮೊದಲು ಪಕ್ಷದೊಳಗಿನ ಭಿನ್ನಮತ ಸರಿ ಪಡಿಸಿಕೊಂಡು ಹೋಗದಿದ್ದಲ್ಲಿ ದೆಹಲಿ ಚುನಾವಣೆಯಲ್ಲಿ ಹಿನ್ನಡೆ ನಿಶ್ಚಿತ. ಜೊತೆಗೆ ಪ್ರಧಾನಿ ಮೋದಿಗೆ ರಾಷ್ಟ್ರ ರಾಜಧಾನಿಯಲ್ಲಿ ತೀವ್ರ ಮುಖಭಂಗ ಎದುರಾಗಬಹುದು. (ಬೇಡಿಗೆ ಆಪ್ ಮುಖಂಡ ಶಾಂತಿ ಭೂಷಣ್ ಬೆಂಬಲ)

ದೆಹಲಿಯಲ್ಲಿನ ಜಾತಿ ಸಮೀಕರಣ ಮತ್ತು ಇದುವರೆಗಿನ ಸಮೀಕ್ಷೆಗಳು ಏನನ್ನುತ್ತವೆ, ಸ್ಲೈಡಿನಲ್ಲಿ ಮುಂದುವರಿಸಲಾಗಿದೆ...

ದೆಹಲಿಯ ಜಾತಿ ಲೆಕ್ಕಾಚಾರ ಹೀಗಿದೆ (2013ರ ಪ್ರಕಾರ, ಶೇಕಡಾವಾರು)

ದೆಹಲಿಯ ಜಾತಿ ಲೆಕ್ಕಾಚಾರ ಹೀಗಿದೆ (2013ರ ಪ್ರಕಾರ, ಶೇಕಡಾವಾರು)

ಪೂರ್ವಾಂಚಲೀಸ್ - 26
ಬನಿಯಾಸ್ - 7
ಪಂಜಾಬೀಸ್ - 12
ದಕ್ಷಿಣ ಭಾರತೀಯರು ಮತ್ತು ಇತರರು - 5
ಎಸ್ ಸಿ ಮತ್ತು ಎಸ್ ಟಿ - 12
ಮುಸ್ಲಿಂ - 14
ಗುಜ್ಜರ್ - 2
ಜಾಟ್ಸ್ - 3
ಸಿಖ್ - 5
ಪಹ್ರೀಸ್ - 14

ಯಾರು ಸಿಎಂ ಹುದ್ದೆಗೆ ಸೂಕ್ತ

ಯಾರು ಸಿಎಂ ಹುದ್ದೆಗೆ ಸೂಕ್ತ

ಎಬಿಪಿ ನ್ಯೂಸ್ - ನೀಲ್ಸನ್ ಜಂಟಿ ಸಮೀಕ್ಷೆ ಪ್ರಕಾರ ಕಿರಣ್ ಬೇಡಿಯವರನ್ನು ಸಿಎಂ ಸ್ಥಾನಕ್ಕೆ ಸೂಕ್ತ ಎಂದು ಶೇ. 44ರಷ್ಟು ಜನ ಹೇಳಿದರೆ, ಕೇಜ್ರಿವಾಲ್ ಶೇ. 47ರಷ್ಟು ಜನ ಸೂಕ್ತ ಎಂದಿದ್ದಾರೆ. ಸಮೀಕ್ಷೆಯಲ್ಲಿ ಶೇ.43.8 ಜನ ಕಿರಣ್ ಬೇಡಿ ಆಮ್ ಆದ್ಮಿ ಪಕ್ಷಕ್ಕೆ ಸೇರಬೇಕಿತ್ತು ಎಂದು ಜನ ಬಯಸಿದ್ದರೆ, ಶೇ. 32.9ರಷ್ಟು ಬಿಜೆಪಿ ಸೇರಿದ ಅವರ ನಿರ್ಧಾರ ಸರಿ ಎಂದಿದ್ದರು. ಆದರೆ, 49 ದಿನಗಳ ಕೇಜ್ರಿವಾಲ್ ಆಡಳಿತ ಚೆನ್ನಾಗಿತ್ತು ಎಂದು ಶೇ. 61ರಷ್ಟು ಮಂದಿ ಅಭಿಪ್ರಾಯ ಪಟ್ಟಿರುವುದು ಆಮ್ ಆದ್ಮಿ ಪಕ್ಷಕ್ಕೆ ಪ್ಲಸ್ ಪಾಯಿಂಟ್.

ವಿವಿಧ ಸರ್ವೇಗಳು

ವಿವಿಧ ಸರ್ವೇಗಳು

ಜೀ ನ್ಯೂಸ್
ಬಿಜೆಪಿ - 37
ಕಾಂಗ್ರೆಸ್ - 04
ಆಪ್ - 29

ಎಬಿಪಿ ನ್ಯೂಸ್
ಬಿಜೆಪಿ : 34
ಆಮ್ ಆದ್ಮಿ : 28
ಕಾಂಗ್ರೆಸ್ : 8

ಇಂಡಿಯಾ ಟುಡೆ
ಬಿಜೆಪಿ : 34 ರಿಂದ 40 (31)
ಆಮ್ ಆದ್ಮಿ ಪಾರ್ಟಿ : 24 ರಿಂದ 31 (28)
ಕಾಂಗ್ರೆಸ್ : 3 ರಿಂದ 5 (8)
ಇತರರು : 0 ದಿಂದ 2 (3)

ಬಿಜೆಪಿ ಅಧಿಕಾರದಲ್ಲಿದ್ದರೆ ಸೂಕ್ತ

ಬಿಜೆಪಿ ಅಧಿಕಾರದಲ್ಲಿದ್ದರೆ ಸೂಕ್ತ

ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿ ಇರುವುದರಿಂದ ದೆಹಲಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಸೂಕ್ತ ಎಂದು ಶೇ. 54.1 ಜನ ಅಭಿಪ್ರಾಯ ಪಟ್ಟಿದ್ದರು. ಎಬಿಪಿ ನ್ಯೂಸ್ ಮತ್ತು ಎ ಸಿ ನೀಲ್ಸನ್ ನಡೆಸಿದ್ದ ಸರ್ವೇ ಪ್ರಕಾರ ಮೋದಿ ಜನಪ್ರಿಯತೆ ಕುಗ್ಗುತ್ತಿದೆ. ನವೆಂಬರ್ ನಲ್ಲಿ ನಡೆಸಿದ್ದ ಸಮೀಕ್ಷೆಯಲ್ಲಿ ಮೋದಿ ಶೇ. 63, ಕೇಜ್ರಿವಾಲ್ ಶೇ. 25, ಡಿಸೆಂಬರ್ ನಲ್ಲಿ ಮೋದಿ ಶೇ. 58, ಕೇಜ್ರಿ ಶೇ. 33 ಮತ್ತು ಜನವರಿಯಲ್ಲಿ ನಡೆದ ಸಮೀಕ್ಷೆಯಲ್ಲಿ ಮೋದಿ ಶೇ. 49 ಮತ್ತು ಅರವಿಂದ್ ಕೇಜ್ರಿವಾಲ್ ಶೇ. 42 ಜನಪ್ರಿಯ ನಾಯಕರೆಂದು ಸಮೀಕ್ಷೆಯಲ್ಲಿ ಜನಾಭಿಪ್ರಾಯ ವ್ಯಕ್ತವಾಗಿತ್ತು.

ಸಿಎಂ ಆಗಿ ಕಿರಣ್ ಬೇಡಿ ಆಯ್ಕೆಯಾಗುವ ಮುನ್ನ, ಯಾರು ಬೆಸ್ಟ್ ಸಿಎಂ

ಸಿಎಂ ಆಗಿ ಕಿರಣ್ ಬೇಡಿ ಆಯ್ಕೆಯಾಗುವ ಮುನ್ನ, ಯಾರು ಬೆಸ್ಟ್ ಸಿಎಂ

ನವೆಂಬರ್
ಕೇಜ್ರಿವಾಲ್ : ಶೇ. 39
ಹರ್ಷವರ್ಧನ್ : ಶೇ. 38

ಡಿಸೆಂಬರ್
ಕೇಜ್ರಿವಾಲ್ : ಶೇ. 43
ಹರ್ಷವರ್ಧನ್ : ಶೇ. 39

ಜನವರಿ
ಕೇಜ್ರಿವಾಲ್ : ಶೇ. 54
ಹರ್ಷವರ್ಧನ್ : ಶೇ. 29

English summary
Delhi Assembly Election 2015, BJP over confidence in winning the election may give setback to party.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X