ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ ಸೋಲು; ಮೊದಲ ಬಾರಿ ಮಾತನಾಡಿದ ಅಮಿತ್ ಶಾ

|
Google Oneindia Kannada News

Recommended Video

Amit Shah reacts for the first time after Delhi election results | Amit Shah | Delhi results | AAP

ನವದೆಹಲಿ ಫೆಬ್ರವರಿ 14: ದೆಹಲಿ ವಿಧಾನಸಭಾ ಚುನಾವಣೆಯ ಹೀನಾಯ ಸೋಲಿನ ನಂತರ ಇದೇ ಮೊದಲ ಬಾರಿಗೆ ಬಿಜೆಪಿ ಮುಖಂಡ ಹಾಗೂ ಕೇಂದ್ರ ಗೃಹ ಸಚಿವ ಅಮಿತ ಶಾ ಮಾತನಾಡಿದ್ದಾರೆ.

ಗುರುವಾರ ಸಂಜೆ ದೆಹಲಿಯಲ್ಲಿ ಮಾತನಾಡಿರುವ ಅವರು, "ನಮ್ಮದೇ ಕೆಲ ನಾಯಕರ ದ್ವೇಷ ಭಾಷಣ ಬಿಜೆಪಿ ಸೋಲಿಗೆ ಮುಳುವಾಯಿತು ಎಂದಿರುವ ಅವರು, ಗೋಲಿ ಮಾರೋ ಹೇಳಿಕೆಯೇ ನಮ್ಮ ಸೋಲಿಗೆ ಪ್ರಮುಖ ಕಾರಣ. ದೆಹಲಿ ಚುನಾವಣೆಯನ್ನು ನಮ್ಮವರು ಭಾರತ ಪಾಕಿಸ್ತಾನ ಕ್ರಿಕೆಟ್ ಪಂದ್ಯದ ರೀತಿ ತೆಗೆದುಕೊಂಡಿದ್ದು ನಮಗೇ ಮುಳುವಾಯಿತು ಎಂದಿದ್ದಾರೆ. ದ್ವೇಷ ಭಾಷಣ ಮಾಡುವ ಮುನ್ನ ನಾಯಕರು ಸ್ವಲ್ಪ ಯೋಚಿಸಬೇಕಿದೆ' ಎಂದು ಪರೋಕ್ಷವಾಗಿ ತಮ್ಮದೇ ನಾಯಕರಿಗೆ ಎಚ್ಚರಿಸಿದ್ದಾರೆ.

ಸಿಎಎ ವಿರುದ್ಧ ಹೋರಾಟ ಮಾಡುವವರನ್ನು ಗುಂಡಿಕ್ಕಿ ಕೊಲ್ಲಬೇಕೇ?ಸಿಎಎ ವಿರುದ್ಧ ಹೋರಾಟ ಮಾಡುವವರನ್ನು ಗುಂಡಿಕ್ಕಿ ಕೊಲ್ಲಬೇಕೇ?

"ಕೇಂದ್ರದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸುವವರನ್ನು ಗುಂಡಿಕ್ಕಿ ಕೊಲ್ಲಿ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಹೇಳಿದ್ದರು. ಇನ್ನೊಬ್ಬ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅರವಿಂದ್ ಕೇಜ್ರಿವಾಲ್ ಒಬ್ಬ ಭಯೋತ್ಪಾದಕ' ಎಂದು ಹೇಳಿದ್ದರು.

Delhi Assembly Election 2020; Amit Shah First Reaction

ಫೆಬ್ರವರಿ 8 ರಂದು ದೆಹಲಿ ವಿಧಾನಸಭೆಗೆ ಚುನಾವಣೆಗೆ ಚುನಾವಣೆ ನಡೆದಿತ್ತು. ಫೆಬ್ರವರಿ 11 ರಂದು ಫಲಿತಾಂಶ ಪ್ರಕಟವಾಗಿತ್ತು. 70 ವಿಧಾನಸಭಾ ಕ್ಷೇತ್ರಗಳಲ್ಲಿ 62 ಸ್ಥಾನಗಳನ್ನು ಆಪ್ ಪಕ್ಷ ಗೆದ್ದುಕೊಂಡಿತ್ತು. ಕೇವಲ 8 ಸ್ಥಾನಗಳನ್ನು ಬಿಜೆಪಿ ಪಡೆದುಕೊಂಡು ತೀವ್ರ ಮುಖಭಂಗ ಅನುಭವಿಸಿತ್ತು.

English summary
Delhi Assembly Election 2020; Amit Shah First Reaction. 'hate speach like goli maaro, is main reason for bjp defeat' shah said in new delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X