ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೀಲಾ ದೀಕ್ಷಿತ್ ಗೆ ತಪರಾಕಿ ನೀಡಿದ ಅರವಿಂದ್ ಕೇಜ್ರಿವಾಲ್

|
Google Oneindia Kannada News

ನವದೆಹಲಿ, ಮಾರ್ಚ್ 27: "ನೀವು ಸರಿಯಾಗಿ ಆಡಳಿತ ನಡೆಸಿದ್ದರೆ ಆಮ್ ಆದ್ಮಿ ಪಕ್ಷ ಅಸ್ತಿತ್ವಕ್ಕೆ ಬರುವ ಅಗತ್ಯವೇ ಇರಲಿಲ್ಲ" ಎಮದು ಎಎಪಿ ಮುಖಂಡ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶೀಲಾ ದೀಕ್ಷಿತ್ ಅವರಿಗೆ ಟಾಂಗ್ ನೀಡಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

"ದೆಹಲಿ ಇರುವ ಪರಿಸ್ಥಿತಿಯಲ್ಲಿ ಶೀಲಾ ದೀಕ್ಷಿತ್ ಅವರು ಅಷ್ಟು ಕಾಲ ಆಡಳಿತ ನಡೆಸಿದರೂ ಯಾವುದೇ ಬದಲಾವಣೆ ಸಾಧ್ಯವಾಗಲಿಲ್ಲ. ಜನರಿಗೂ ಆ ಬಗ್ಗೆ ಬೇಸರವಿತ್ತು. ಅವರು ಸರಿಯಾಗಿ ಆಡಳಿತ ನಡೆಸಿದ್ದರೆ ನಮ್ಮ ಪಕ್ಷ ಹುಟ್ತುತ್ತಲೇ ಇರಲಿಲ್ಲ. ಶಾಲೆಯಿಂದ ಹಿಡಿದು ಆಸ್ಪತ್ರೆಯವರೆಗೂ ಆಕೆಯ ಆಡಳಿತಾವಧಿಯಲ್ಲಿ ತೀರಾ ಕಳಪೆ ಸ್ಥಿತಿಯಲ್ಲಿದ್ದವು" ಎಂದು ಕೇಜ್ರಿವಾಲ್ ಹೇಳಿದ್ದಾರೆ.

ದೆಹಲಿಯಲ್ಲಿ ಕಾಂಗ್ರೆಸ್- ಎಎಪಿ ಮೈತ್ರಿ: ಕೇಜ್ರಿವಾಲ್ ಗೆ ಶೀಲಾ ತಪರಾಕಿದೆಹಲಿಯಲ್ಲಿ ಕಾಂಗ್ರೆಸ್- ಎಎಪಿ ಮೈತ್ರಿ: ಕೇಜ್ರಿವಾಲ್ ಗೆ ಶೀಲಾ ತಪರಾಕಿ

"ಈಗಲೂ ದೆಹಲಿ ಪರಿಸ್ಥಿತಿ ಬದಲಾಗಿಲ್ಲ. ಆದರೆ ನಾವು ಅದನ್ನು ಬದಲಿಸುತ್ತಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ್ ನಮಗೆ ಆಡಳಿತ ನಡೆಸುವುದಕ್ಕೆ ಅನುವು ಮಾಡಿ ಕೊಡುತ್ತಿಲ್ಲ, ಯಾವುದೇ ಅಭಿವೃದ್ಧಿ ಕಾರ್ಯಗಳಿಗೂ ಪ್ರೋತ್ಸಾಹ ನೀಡುತ್ತಿಲ್ಲ. ಆದರೂ ನಾವು ಸಮರ್ಥವಾಗಿ ಆಡಳಿತ ನಡೆಸುತ್ತಿದ್ದೇವೆ" ಎಂದು ಅವರು ಹೇಳಿದರು.

Delhi: Arvind Kejriwal slams Sheila Dikshit

ಎಎಪಿ ಸಹವಾಸ ಬೇಡ... ರಾಹುಲ್ ಗಾಂಧಿಗೆ ಶೀಲಾ ದೀಕ್ಷಿತ್ ಪತ್ರಎಎಪಿ ಸಹವಾಸ ಬೇಡ... ರಾಹುಲ್ ಗಾಂಧಿಗೆ ಶೀಲಾ ದೀಕ್ಷಿತ್ ಪತ್ರ

ದೆಹಲಿಯ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ದೆಹಲಿ ಘಟಕದ ಅಧ್ಯಕ್ಷೆ ಶೀಲಾ ದೀಕ್ಷಿತ್ ಮತ್ತು ಅರವಿಂದ್ ಕೇಜ್ರಿವಾಲ್ ನಡುವಿನ ಹಗ್ಗಜಗ್ಗಾಟ ಈಗ ಗುಟ್ಟಾಗಿ ಉಳಿದಿಲ್ಲ. ದೆಹಲಿಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಎಎಪಿ ಮೈತ್ರಿ ಮಾಡಿಕೊಳ್ಳುವುದಕ್ಕೆ ಸುತಾರಾಂ ಒಪ್ಪದವರಲ್ಲಿ ಶೀಲಾ ದೀಕ್ಷಿತ್ ಮೊದಲಿಗರು ಎಂಬುದನ್ನು ಇಲ್ಲಿ ಸ್ಮರಿಸಬಹುದು.

English summary
Delhi Chief Minister Arvind Kejriwal on Tuesday hit out at former CM Sheila Dikshit-led Congress government and said he would not have had to launch a new party if she had run the government well.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X