ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್‌ನಿಂದಾಗಿ ಅನಾಥರಾದ ಮಕ್ಕಳಿಗೆ ಉಚಿತ ಶಿಕ್ಷಣ: ಕೇಜ್ರಿವಾಲ್

|
Google Oneindia Kannada News

ನವದೆಹಲಿ, ಮೇ 18: ಕೋವಿಡ್‌ನಿಂದಾಗಿ ಅನಾಥರಾದ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ.

ರಾಜ್ಯದಲ್ಲಿ 72 ಲಕ್ಷಕ್ಕೂ ಅಧಿಕ ಬಡ ಕುಟುಂಬಗಳಿವೆ, ಈ ತಿಂಗಳು ಅವುಗಳಿಗೆ ಉಚಿತವಾಗಿ 10 ಕೆಜಿ ಪಡಿತರ ವಿತರಿಸಲಾಗುವುದು ಎಂದರು.

ಕೋವಿಡ್-19 ಸಾಂಕ್ರಾಮಿಕದಿಂದ ಮೃತಪಟ್ಟ ಪ್ರತಿ ಕುಟುಂಬಕ್ಕೆ 50 ಸಾವಿರ ಪರಿಹಾರವನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಂಗಳವಾರ ಪ್ರಕಟಿಸಿದ್ದಾರೆ.

Arvind Kejriwal

ಸಂಪಾದನೆ ಮಾಡುತ್ತಿದ್ದ ಪ್ರಮುಖ ವ್ಯಕ್ತಿ ಮೃತಪಟ್ಟಂತಹ ಕುಟುಂಬಗಳಿಗೆ ಪರಿಹಾರದ ಜೊತೆಗೆ ಪ್ರತಿ ತಿಂಗಳು 2500 ಪಿಂಚಣಿಯನ್ನು ಘೋಷಿಸಲಾಗಿದೆ.

ಭಾರತದಲ್ಲಿ ಕೊರೊನಾ 2ನೇ ಅಲೆಯಲ್ಲಿ 269 ವೈದ್ಯರು ಸಾವುಭಾರತದಲ್ಲಿ ಕೊರೊನಾ 2ನೇ ಅಲೆಯಲ್ಲಿ 269 ವೈದ್ಯರು ಸಾವು

ಒಂದು ವೇಳೆ ಗಂಡ ಮೃತಪಟ್ಟಿದ್ದರೆ, ಹೆಂಡತಿಗೆ ಪಿಂಚಣಿ ನೀಡಲಾಗುವುದು, ಪತ್ನಿ ಸಾವನ್ನಪ್ಪಿದ್ದರೆ ಗಂಡನಿಗೆ ಪಿಂಚಣಿ ಸಿಗಲಿದೆ. ಒಂದು ಅವಿವಾಹಿತರು ಮೃತಪಟ್ಟಿದ್ದರೆ, ಅವರ ಪೋಷಕರಿಗೆ ಪಿಂಚಣಿ ದೊರೆಯಲಿದೆ.

ಕೋವಿಡ್ ನಿಂದ ಅನಾಥರಾದ ಅಥವಾ ಫೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಅವರ 25 ನೇ ವಯಸ್ಸಿನವರೆಗೂ ಪ್ರತಿ ತಿಂಗಳು 2500 ರೂ. ಪಿಂಚಣಿ ದೊರೆಯಲಿದೆ.ಅಲ್ಲದೇ ಉಚಿತವಾಗಿ ಶಿಕ್ಷಣ ಕೂಡಾ ಸಿಗಲಿದೆ.
ಭಾರತದಲ್ಲಿ ಒಂದೇ ದಿನ ಕೊರೊನಾವೈರಸ್ ಮಹಾಮಾರಿಗೆ 4,329 ರೋಗಿಗಳು ಉಸಿರು ನಿಲ್ಲಿಸಿದ್ದು, ಸಾವಿನ ಸಂಖ್ಯೆ 2,78,719ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ದೇಶದಲ್ಲಿ ಒಂದೇ ದಿನ 2,63,533 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 4,22,436 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

English summary
Children whose parents died because of COVID-19 will get ₹ 2,500 per month (till they turn 25) and their education will be paid for by the Delhi government, Chief Minister Arvind Kejriwal said Tuesday, as he announced a series of welfare measures for poverty- and disaster-hit families.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X