ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ ಅಕಾಡೆಮಿಯಿಂದ ಪ್ರತಿಭಾವಂತ ವೈದ್ಯವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್

|
Google Oneindia Kannada News

ನವದೆಹಲಿ, ಜುಲೈ 24: ದೇಶಾದ್ಯಂತ ಪ್ರತಿಭೆಗಳನ್ನು ಗೌರವಿಸಿ ಪೋಷಿಸುವ ಉದ್ದೇಶದಿಂದ ದೆಹಲಿ ಅಕಾಡೆಮಿ ಆಫ್ ಮೆಡಿಕಲ್ ಸೈನ್ಸ್ ವೈದ್ಯಕೀಯ ಸ್ನಾತಕೋತ್ತರ ಪೂರ್ವಸಿದ್ಧತಾ ಕೋರ್ಸ್‍ಗಳಿಗೆ ಪ್ರವೇಶ ಪಡೆಯುವ ವೈದ್ಯರಿಗೆ ಸ್ಕಾಲರ್ ಶಿಪ್ ಘೋಷಿಸಿದೆ.

ಈ ಸ್ಕಾಲರ್ ಶಿಪ್ ಯೋಜನೆಯಡಿ, ಆಯ್ದ ವಿದ್ಯಾರ್ಥಿಗಳಿಗೆ ಹಣಕಾಸು ನೆರವು ನೀಡಲಾಗುತ್ತದೆ. ಸ್ಕಾಲರ್ ಶಿಪ್ ಪರೀಕ್ಷೆಯು 2019ರ ಸೆಪ್ಟೆಂಬರ್ 3ರಂದು ದೇಶಾದ್ಯಂತ 95 ಕೇಂದ್ರಗಳಲ್ಲಿ ನಡೆಯಲಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 2019ರ ಆಗಸ್ಟ್ 22.

Delhi Academy of Medical Science offer scholarship to provide financial assistance

ಆಯ್ಕೆಯಾದ ವಿದ್ಯಾರ್ಥಿಗಳಿಗೆ ಅವರ ಅಖಿಲ ಭಾರತ ಮಟ್ಟದ ಶ್ರೇಯಾಂಕದ ಆಧಾರದಲ್ಲಿ ವಿದ್ಯಾರ್ಥಿ ವೇತನ ನೀಡಲಾಗುತ್ತದೆ. ರಾಷ್ಟ್ರಮಟ್ಟದಲ್ಲಿ 10 rank ಪಡೆಯುವ ವಿದ್ಯಾರ್ಥಿಗಳಿಗೆ (ಕ್ಲಾಸ್‍ರೂಂ ಕೋರ್ಸ್, ಆನ್‍ಲೈನ್ ಪರೀಕ್ಷಾ ಸರಣಿ ಮತ್ತು ಅಂಚೆ ಕೋರ್ಸ್) ಎಲ್ಲ ಕೋರ್ಸ್‍ಗಳಿಗೆ ಉಚಿತ ಶಿಕ್ಷಣವನ್ನು ದೇಶಾದ್ಯಂತ ನೀಡಲಾಗುತ್ತದೆ.

ಕರ್ನಾಟಕದ 1 ನಕಲಿ ವಿವಿ ಸೇರಿ 23 ಅನಧಿಕೃತ ಸಂಸ್ಥೆ ಪಟ್ಟಿ ಬಹಿರಂಗಕರ್ನಾಟಕದ 1 ನಕಲಿ ವಿವಿ ಸೇರಿ 23 ಅನಧಿಕೃತ ಸಂಸ್ಥೆ ಪಟ್ಟಿ ಬಹಿರಂಗ

ಅಖಿಲ ಭಾರತ ಮಟ್ಟದಲ್ಲಿ 11-20 rank ಪಡೆಯುವ ವಿದ್ಯಾರ್ಥಿಗಳಿಗೆ ಕ್ಲಾಸ್‍ರೂಂ ಕೋರ್ಸ್, ಆನ್‍ಲೈನ್ ಪರೀಕ್ಷಾ ಸರಣಿ ಮತ್ತು ಅಂಚೆ ಕೋರ್ಸ್ ಸೇರಿದಂತೆ ಎಲ್ಲ ಕೋರ್ಸ್‍ಗಳಿಗೆ ಶೇಕಡ 50ರಷ್ಟು ರಿಯಾಯ್ತಿ ನೀಡಲಾಗುತ್ತದೆ.

ಅಖಿಲ ಭಾರತ ಮಟ್ಟದಲ್ಲಿ 21 ರಿಂದ 50 rank ಪಡೆಯುವ ವಿದ್ಯಾರ್ಥಿಗಳಿಗೆ ಶೇಕಡ 25ರಷ್ಟು ರಿಯಾಯ್ತಿಯನ್ನು ಎಲ್ಲ ಕೋರ್ಸ್‍ಗಳಲ್ಲಿ ನೀಡಲಾಗುತ್ತಿದ್ದು, 51 ರಿಂದ 100ನೇ Rank ಪಡೆಯುವ ವಿದ್ಯಾರ್ಥಿಗಳಿಗೆ ಶೇಕಡ 10ರಷ್ಟು ರಿಯಾಯ್ತಿ ದೊರಕಲಿದೆ ಎಂದು ದೆಹಲಿ ಅಕಾಡೆಮಿ ಆಫ್ ಮೆಡಿಕಲ್ ಸೈನ್ಸ್ ನಿರ್ದೇಶಕ ಡಾ.ಸುಮೇರ್ ಸೇಥಿ ಹೇಳಿದ್ದಾರೆ.

English summary
Delhi Academy of Medical Science (DAMS), has announced Scholarship for Doctors who want to take admission in PG medical preparation courses. The scholarship program will provide financial assistance to selected students. The scholarship test will be held on September 3, 2019 at 95 centers across Nation and the last date to apply for the test is August 22, 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X