ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ: ಆಮ್ ಆದ್ಮಿ ಪಕ್ಷದ ಶಾಸಕನಿಗೆ ಕೊವಿಡ್19 ಪಾಸಿಟಿವ್

|
Google Oneindia Kannada News

ನವದೆಹಲಿ, ಜೂನ್ 5: ದೆಹಲಿಯ ಆಮ್ ಆದ್ಮಿ ಪಕ್ಷದ ಶಾಸಕರೊಬ್ಬರಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ.

ದೆಹಲಿಯ ಪಟೇಲ್ ನಗರದ ಎಎಪಿ ಶಾಸಕ ರಾಜ್ ಕುಮಾರ್ ಆನಂದ್ ಅವರಿಗೆ ಕೊವಿಡ್ 19 ಪರೀಕ್ಷೆ ನಡೆಸಲಾಗಿತ್ತು. ಗುರುವಾರದಂದು ಪರೀಕ್ಷಾ ವರದಿ ಬಂದಿದ್ದು, ಪಾಸಿಟಿವ್ ಎಂದು ತಿಳಿದು ಬಂದಿದೆ.

ದೆಹಲಿಯ ಸರ್ಕಾರಿ ಶಾಲೆಗಳೇ ಇದೀಗ ಐಸೊಲೇಷನ್ ಸೆಂಟರ್ಸ್.!ದೆಹಲಿಯ ಸರ್ಕಾರಿ ಶಾಲೆಗಳೇ ಇದೀಗ ಐಸೊಲೇಷನ್ ಸೆಂಟರ್ಸ್.!

ಈ ಬಗ್ಗೆ ಎಎನ್ಐ ಜೊತೆ ಮಾತನಾಡಿದ ಶಾಸಕ ರಾಜ್ ಕುಮಾರ್, ವೈರಸ್ ಸೋಂಕು ತಗುಲಿದೆ ಎಂದು ವರದಿಯಲ್ಲಿ ಬಂದಿದೆ. ನನಗೂ ಸ್ವಲ್ಪ ಮಟ್ಟಿಗೆ ರೋಗದ ಲಕ್ಷಣಗಳಿವೆ. ಆದರೆ, ಯಾವುದೇ ತೀವ್ರ ಲಕ್ಷಣಗಳು ಕಂಡು ಬಂದಿಲ್ಲ. ಸದ್ಯಕ್ಕೆ ವೈದ್ಯರ ಸಲಹೆಯಂತೆ ಮನೆಯಲ್ಲೇ ಕ್ವಾರಂಟೈನ್ ಆಗಿದ್ದೇನೆ ಎಂದಿದ್ದಾರೆ.

Delhi AAP MLA test Positive for Covid 19

ದೆಹಲಿಯಲ್ಲಿ ಗುರುವಾರದಂದು 1359 ಹೊಸ ಕೊವಿಡ್ 19 ಪ್ರಕರಣಗಳು ಕಂಡು ಬಂದಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 25,004ಕ್ಕೇರಿದೆ. ಒಟ್ಟು 22 ಮಂದಿ ಮೃತರಾಗಿದ್ದಾರೆ ಎಂದು ದೆಹಲಿ ಸರ್ಕಾರ ತಿಳಿಸಿದೆ.

ಕೋವಿಡ್19 ಟೆಸ್ಟ್ ರಿಪೋರ್ಟ್: ನಿಟ್ಟುಸಿರು ಬಿಟ್ಟ BJP ಮುಖಂಡರ ಕುಟುಂಬಕೋವಿಡ್19 ಟೆಸ್ಟ್ ರಿಪೋರ್ಟ್: ನಿಟ್ಟುಸಿರು ಬಿಟ್ಟ BJP ಮುಖಂಡರ ಕುಟುಂಬ

ದೆಹಲಿ ಮೆಟ್ರೋ ರೈಲ್ ಕಾರ್ಪೊರೇಷನ್ (ಡಿಎಂ ಆರ್ ಸಿ) ಯ 20 ಸಿಬ್ಬಂದಿಗೆ ಕೊವಿಡ್ 19 ಇರುವುದು ಪತ್ತೆಯಾಗಿದ್ದು, ಎಲ್ಲರಲ್ಲೂ ಯಾವುದೇ ರೋಗ ಲಕ್ಷಣಗಳು ಪತ್ತೆಯಾಗಿಲ್ಲ, ಎಲ್ಲರಿಗೂ ಕ್ವಾರಂಟೈನ್ ನಲ್ಲಿರಲು ಸೂಚಿಸಲಾಗಿದೆ ಎಂದು ಡಿಎಂ ಆರ್ ಸಿ ಅಧಿಕಾರಿ ಹೇಳಿದರು.

English summary
Delhi Aam Aadmi Party MLA Raaj kumar Anand from Patel Nagar has been tested Positive for Covid 19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X